This is the title of the web page
Left Banner (Left Skyscraper)
Right Banner (Right Skyscraper)

ಹುಬ್ಬಳ್ಳಿಯ ವಿದ್ಯಾರ್ಥಿ ರಿತೀಷ್‍ಗೆ ರಾಷ್ಟ್ರೀಯ ಕರಾಟೆಯಲ್ಲಿ ಚಿನ್ನದ ಪದಕ

0 2

ಹುಬ್ಬಳ್ಳಿ 04- ಹುಬ್ಬಳ್ಳಿಯ ಕೆಎಲ್‍ಇ ಸಂಸ್ಥೆಯ ಶ್ರೀಮತಿ ಸಿ.ಐ.ಮುನವಳ್ಳಿ ಪಾಲಿಟೆಕ್ನಿಕ್‍ನ ಕಂಪ್ಯೂಟರ್ ಸೈನ್ಸ್ ವಿಭಾಗದ 2ನೇ ಸೆಮಿಸ್ಟರ್‍ನ ವಿದ್ಯಾರ್ಥಿಯಾದ ಕು.ರಿತೀಷ್ ಕಾತರಕಿ ಅವರು ಕೇರಳ ರಾಜ್ಯದ ವಯನಾಡ್‍ನಲ್ಲಿ ಕಳೆದ ಮೇ 28,29ರಂದು ನಡೆದ ಕೆನ್ಯೂ ರ್ಯೂ ರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಫ್-2022 ಬ್ಲಾಕ್ ಬೆಲ್ಟ್ ಶ್ರೇಣಿಯ 17 ವರ್ಷದ ಕೆಳಗಿರುವ (50ಕೆಜಿ) ವಿಭಾಗದಲ್ಲಿ ಬಂಗಾರದ ಪದಕವನ್ನು ಪಡೆದು ತಂದೆ-ತಾಯಿಗಳಿಗೆ ಹಾಗೂ ಶ್ರೀಮತಿ ಸಿ.ಐ.ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾನೆ.
ಕರಾಟೆಯ ತರಬೇತುದಾರ ಪುಲಕೇಶಿ ಮಲ್ಯಾಳ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ರಿತೀಷ ಕಾತರಕಿ ಅವರು ಕರಾಟೆಯಲ್ಲಿ 50ಕ್ಕೂ ಹೆಚ್ಚು ದೇಶ-ವಿದೇಶಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.ಥೈಲ್ಯಾಂಡ್‍ನಲ್ಲಿ 2ನೇ ಸ್ಥಾನವನು ಹಾಗೂ ಮಲೇಶಿಯಾದಲ್ಲಿ ಮೂರನೇ ಸ್ಥಾನವನ್ನುಗಳಿಸಿ ಭಾರತಕ್ಕೆ ಕೀರ್ತಿಯನ್ನು ತಂದಿದ್ದಾರೆ ಹಾಗೂ ದೇಶದ ವಿವಿಧ ಸ್ಥಳಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ.ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕಾಲೇಜಿನ ಪ್ರೊ.ವೀರೇಶ ಅಂಗಡಿ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

You might also like
Leave a comment