This is the title of the web page
Left Banner (Left Skyscraper)
Right Banner (Right Skyscraper)

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಗಜಾನನ ಮಂಗಸೂಳಿ ಮತಯಾಚನೆ

0 15

ಅಥಣಿ, ಜೂ., ೦೯- ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿಯಾದ ಪ್ರಕಾಶ್ ಹುಕ್ಕೇರಿ ಮತ್ತು ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಸುನಿಲ್ ಸಂಕ ಅವರ ಪರವಾಗಿ ಯಂಕಚ್ಚಿ, ಅಡ್ಡಹಳ್ಳಿ, ಕಂಕಮರಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಗಜಾನನ ಮಂಗಸೂಳಿ ಅವರ ನೇತೃತ್ವದಲ್ಲಿ ಮತಯಾಚನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಗಜಾನನ ಮಂಗಸೂಳಿ ಪ್ರಕಾಶ ಹುಕ್ಕೇರಿ ಒಬ್ಬ ಮೇಧಾವಿ ರಾಜಕಾರಣಿ ಶಾಸಕ ಮತ್ತು ಸಂಸದರಾಗಿ ಹಾಗೂ ಸಚೀವರಾಗಿ ಬಹಳಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಯಾವುದೇಸರ್ಕಾರ ಇದ್ದರೂ ಕೂಡ ಹಲವು ಯೋಜನೆಗಳನ್ನು ಜಾರಿಗೊಳಿಸಲು ಚಿಕ್ಕೋಡಿ ಉಪವಿಭಾಗದ ಜನರಿಗಾಗಿ ಹಗಲಿರುಳು ಶ್ರಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಣ ಬಲಕ್ಕಿಂತ ಜನಬಲ ದೊಡ್ಡದು ಮತ್ತು ಅವರ ರಾಜಕೀಯ ಅನುಭವ ಶಿಕ್ಷಕ ಮತಕ್ಷೇತ್ರದ ಸಮಸ್ಯೆಗಳನ್ನು ಖಂಡಿತ ಬಗೆಹರಿಸುತ್ತಾರೆ.

ರಾಜಕೀಯವಾಗಿ ನಿಸ್ವಾರ್ಥ ಸೇವೆ ಮಾಡುವ ಜನನಾಯಕ ಪ್ರಕಾಶ ಹುಕ್ಕೇರಿ ಆಗಿದ್ದಾರೆ ಇನ್ನೂ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಎಲ್ ಎಲ್ ಬಿ ಪದವೀಧರರಾಗಿದ್ದು ಹಲವಾರು ವರ್ಷಗಳಿಂದ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಹಲವು ಹೋರಾಟಗಳಲ್ಲಿ ಭಾಗಿಯಾಗಿ ಸಾಮಾಜಿಕ ಧ್ವನಿ ಎತ್ತಿದ್ದಾರೆ ಅಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ತೆಲಸಂಗ ಬ್ಲಾಕ್ ಅಧ್ಯಕ್ಷರಾದ ಶ್ರೀಕಾಂತ್ ಪೂಜಾರಿ, ಅನಿಲ್ ಸುಣದೋಳಿ, ಬಸವರಾಜ ಬುಟಾಳಿ, ರಮೇಶ್ ಸಿಂದಗಿ ಉಪಸ್ಥಿತರಿದ್ದರು.

You might also like
Leave a comment