ನವದೆಹಲಿ
ಮೂವರು ಮಹಿಳೆಯರ ಮೇಲೆ ಅವರ ಗಂಡಂದಿರು ಮಕ್ಕಳು ಹಾಗೂ ಕುಟುಂಬದ ಸದಸ್ಯರ ಎದುರಿಗೆ ನಾಲ್ಕು ಜನ ಮುಸುಕುಧಾರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಪಾಣಿಪತ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಮುಸುಕುಧಾರಿಗಳು ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿ ಗಂಡಂದಿರನ್ನು ಮತ್ತು ಮಕ್ಕಳ ಕೋಣೆಯಿಂದ ಹೊರಕ್ಕೆ ಎಳೆದು ಕಂಬಕ್ಕೆ ಕಟ್ಟಿ ಹಾಕಿ ಮೂವರು ಮಹಿಳೆಯರ ಮೇಲೆ ಬೆಳಗಿನ ಜಾವ 4 ಗಂಟೆಯವರೆಗೂ ದೌರ್ಜನ್ಯ ಎಸಗಿದ್ದಾರೆ. ನಂತರ ಮನೆಯಲ್ಲಿ ನಗದು ಹಾಗೂ ಬೆಳ್ಳಿ ಆಭರಣದರೋಡೆ ಮಾಡಿದ್ದಾರೆ, ಸಂತ್ರಸ್ತರು ಆರೋಪ ಹೊರಿಸಿದ್ದಾರೆ.
ಗ್ಯಾಂಗ್ ರೇಪ್ ಮಾಡಿ ಹೋಗುವಾಗ ವ್ಯಕ್ತಿಯಿಂದ ಸಾವಿರ ರೂ ದರೋಡೆ ಮಾಡಿ ಆತನ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೇ ಮಾಡಿದೆ. ಹಲ್ಲೇಗೆ ಒಳಗಾದ ಮಹಿಳೆ ಆಯ್ಕೆಯಾಗಿದ್ದಾಳೆ.
ತಿಂಗಳ ಹಿಂದೆ ಅತ್ಯಾಚಾರಕ್ಕೆ ಒಳಗಾದ ಕುಟುಂಬದ ಸದಸ್ಯರಿಗೆ ವಾಸವಿರುವ ಸ್ಥಳವನ್ನು ಖಾಲಿ ಮಾಡುವಂತೆ ಗುಂಪೊಂದು ಬೇಡವಾಗಿತ್ತು. ಅದೇ ಬಗ್ಗೆ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.