ಓರ್ವ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ, ಜೀವ ಬೆದರಿಕೆ: ನಾಲ್ವರ ಬಂಧನ

Ravi Talawar
WhatsApp Group Join Now
Telegram Group Join Now

ವಿಜಯಪುರ, ಮೇ.01: ಎಲ್ಲೆಡೆ ಪ್ರಜ್ವಲ ರೇವಣ್ಣ ಆಶ್ಲೀಲ್ ವಿಡಿಯೋ ಹರಿದಾಡುತ್ತಿದ್ದು ಬಾರೀ ಚರ್ಚೆಗೆ ಗ್ರಾಸವಾಗಿದೆ. ಇಷ್ಟರ ಮದ್ಯೆ ಇದೇ ಮಾದರಿಯ ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಯುವಕರಾದ ಆಕಾಶ ಹಡಗಲಿ, ಅಭಿಷೇಕ ಸಜ್ಜನ, ಓರ್ವ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡು ನಂತರ ಆ ಮಹಿಳೆಗೆ ಬೆದರಿಕೆ ಹಾಕಿ ನಿರಂತವಾಗಿ ದೈಹಿಕವಾಗಿ ಬಳಸಿಕೊಂಡಿದ್ದಾರಂತೆ.

ಇನ್ನು ಈ ವಿಚಾರ ಬಹಿರಂಗ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಸಾಲದೆಂಬಂತೆ ಮಹಿಳೆಯ ಜೊತೆಗಿನ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ವೈರಲ್ ಆದ ವಿಡಿಯೋವನ್ನು ಅತ್ಯಾಚಾರಕ್ಕೀಡಾದ ಪತಿ ನೋಡಿ ಅದನ್ನು ಮನೆಯವರಿಗೆ ತಿಳಿಸಿದ್ಧಾನೆ. ನಂತರ ಆ ಮಹಿಳೆಯನ್ನು ವಿಚಾರಣೆ ಮಾಡಿದಾಗ, ‘ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶ ಹಡಗಲಿ, ಅಭಿಷೇಕ ಸಜ್ಜನ ಎಂಬಿಬ್ಬರು ನನಗೆ ಜೀವ ಬೆದರಿಕೆ ಹಾಕಿ ನಿರಂತರ ಅತ್ಯಾಚಾರ ಮಾಡಿದ್ದಾರೆ. ಈ ವಿಚಾರ ಹೊರಗಡೆ ಹೇಳಿದರೆ ಕೊಲೆ ಮಾಡೋದಾಗಿ ಜೀವ ಬೆದರಿಕೆ ಹಾಕಿದ್ದರು. ಭಯದಿಂದ ಈ ವಿಚಾರವನ್ನು ನಾನು ಎಲ್ಲಿಯೂ ಹೇಳಿಲ್ಲ ಎಂದು ಮಹಿಳೆ ವಿಷಯ ಮನೆಯವರಿಗೆ ತಿಳಿಸಿದ್ದಾರೆ.

ಮನೆಯಲ್ಲಿ ವಿಚಾರ ಗೊತ್ತಾದ ಕಾರಣ ಮನನೊಂದ ಮಹಿಳೆ, ‘ತನ್ನ 6 ವರ್ಷದ ಮಗನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಈ ಕುರಿತು ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪತಿ ಹಾಗೂ ಮನೆಯವರು ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ನಡೆಸಿದ ಮನಗೂಳಿ ಪೊಲೀಸ್ ಸಬ್ ಇನ್ಸಪೆಕ್ಟರ್ ಶ್ರೀಕಾಂತ ಕಾಂಬಳೆ ಹಾಗೂ ತಂಡ, ಕೃತ್ಯ ಎಸಗಿರುವ ಆಕಾಶ ಹಡಗಲಿ, ಅಭಿಷೇಕ ಸಜ್ಜನ ಹಾಗೂ ಇವರಿಗೆ ಸಹಾಯ ಮಾಡಿದ ಸೋಮಪ್ಪ ಸಜ್ಜನ ಹಾಗೂ ಜಯಶ್ರೀ ಹಡಗಲಿ ಎಂಬುವವರನ್ನು ಬಂಧಿಸಿದ್ಧಾರೆ. ಈ ಕುರಿತು ತನಿಖೆ ಮುಂದುವರೆದಿದೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನೆಯಿಂದ ಕಾಣೆಯಾಗಿರುವ ಮಹಿಳೆ ಹಾಗೂ ಆಕೆಯ ಮಗು ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

 

WhatsApp Group Join Now
Telegram Group Join Now
Share This Article