ನಾಲ್ಕು ಲವ್ ಬರ್ಡ್ಸ್​​ಗೆ ಬರೋಬ್ಬರಿ 444ರೂ. ಟಿಕೆಟ್! ಬಾಯ್ ಮೇಲೆ ಬೆರಳಿಟ್ಟ ಪ್ರಯಾಣಿಕರು

Ravi Talawar
WhatsApp Group Join Now
Telegram Group Join Now

ಬೆಂಗಳೂರು, ಮಾರ್ಚ್​.27: ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಆರಂಭಿಸಿದ ಉಚಿತ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಯಿಂದಾಗಿ ಲಕ್ಷಾಂತರ ಮಹಿಳೆಯರು ಟಿಕೆಟ್​ಗೆ ಹಣ ಖರ್ಚು ಮಾಡದೆ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಅದರಂತೆ ಇಂದು ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಪರೂಪದ ಹಾಸ್ಯಮಯ ಘಟನೆಯೊಂದು ನಡೆದಿದೆ. ಹಾಗೂ ಈ ಘಟನೆಯಿಂದ ಕೆಲವರು ಶಾಕ್​ಗೂ ಒಳಗಾಗಿದ್ದಾರೆ. ಪ್ರಯಾಣಿಕರ ಜೊತೆ ಪ್ರಯಾಣಿಸುತ್ತಿದ್ದ ನಾಲ್ಕು ಲವ್ ಬರ್ಡ್ಸ್​ಗಳಿಗೆ ಕಂಡಕ್ಟರ್ ಬರೋಬ್ಬರಿ 444 ರೂ. ಟಿಕೆಟ್ ನೀಡಿದ್ದಾರೆ.

ಬೆಂಗಳೂರಿನಿಂದ ಮೈಸೂರು ಹೊರಟ್ಟಿದ್ದ ಅಜ್ಜಿ ಮೊಮ್ಮಗಳು ಕೆಎಸ್​ಆರ್​ಟಿಸಿ ಬಸ್​ ಹತ್ತಿ ಕುಳಿತಿದ್ದರು. ಕಂಡಕ್ಟರ್ ಬಂದೊಡನೆ ಆಧರ್ ಕಾರ್ಡ್ ತೋರಿಸಿ ಉಚಿತ ಟಿಕೆಟ್ ಪಡೆದಿದ್ದರು. ಆದರೆ ಅಜ್ಜಿ-ಮೊಮ್ಮಗಳ ಕೈಯಲ್ಲಿದ್ದ ಪಂಚರದೊಳಗಿದ್ದ ನಾಲ್ಕು ಲವ್ ಬರ್ಡ್​ ಗಮನಿಸಿದ ಕಂಡಕ್ಟರ್​ ಬರೋಬ್ಬರಿ 444 ರೂಪಾಯಿ ಟಿಕೆಟ್ ಹರಿದಿದ್ದಾನೆ. ಸರ್ಕಾರದ ಫ್ರೀ ಯೋಜನೆಯಿಂದಾಗಿ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್‌ ಸಿಕ್ಕರೆ, ನಾಲ್ಕು ಲವ್ ಬರ್ಡ್ಸ್ ಪಕ್ಷಿಗಳಿಗೆ ಟಿಕೆಟ್ ಹಣ ಕೊಡುವಂತಾಗಿದೆ.

ಒಂದು ಪಕ್ಷಿಗೆ 111ರೂ. ನಂತೆ ನಾಲ್ಕು ಪಕ್ಷಿಗಳಿಗೆ 444ರೂ. ನೀಡಿ ಅಜ್ಜಿ-ಮೊಮ್ಮಗಳು ಮೈಸೂರಿಗೆ ಪ್ರಯಾಣಿಸಿದ್ದಾರೆ. ನಾಲ್ಕು ಮಕ್ಕಳು ಎಂದು ಟಿಕೆಟ್​ನಲ್ಲಿ ನಮೂದಿಸಲಾಗಿದೆ. ಈ ಘಟನೆಗೆ ಕೆಲವರು ನಕ್ಕು ಸುಮ್ಮನಾದ್ರೆ, ಮತ್ತೆ ಕೆಲವರು ಬಾಯ್ ಮೇಲೆ ಬೆರಳಿಟ್ಟಿದ್ದಾರೆ.

WhatsApp Group Join Now
Telegram Group Join Now
Share This Article