ಇಂಡಿ.ಯಾವ ವಿದ್ಯಾರ್ಥಿ ಚೆನ್ನಾಗಿ,ನೀಟಾಗಿ ಅಚ್ಚುಕಟ್ಟಾಗಿ ಓದುತ್ತಾರೋ ಅವರಿಗೆ ಈ ನೆಲ,ಜಲ,ಭಾಷೆ ಗಗನಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಇಸ್ರೋ ವಿಜ್ಞಾನಿ ವಿಲಾಸ ರಾಠೋಡ ಹೇಳಿದರು. ಇಂಡಿ ಪಟ್ಟಣದ ಶಾಂತೇಶ್ವರ ಪ್ರೌಢಶಾಲೆಯಲ್ಲಿ ಆಯೋಜನೆಗೊಳಿಸಿರುವ ಸನ್ಮಾನ ಹಾಗೂ ಸ್ಪೇಸ್ ಆನ್ ಲೈನ್ ವ್ಹೀಲ್ ವಿಜ್ಞಾನ ಪ್ರದರ್ಶನ ಸಮಾರಂಭದಲ್ಲಿ ಪ್ರಸ್ತುತ ಚಂದ್ರಯಾನ-3 ಉಡಾವಣೆಯಲ್ಲಿ ಮುಖ್ಯ ಜವಾಬ್ದಾರಿವಹಿಸಿದ ಹಾಗೂ ಇಸ್ರೋ ವಿಜ್ಞಾನಿಯಾಗಿ ಮತ್ತು ಶಾಂತೇಶ್ವರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಸನ್ಮಾನಿತರಾಗಿ ಮಾತನಾಡಿ. ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ 1988ರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿ ಶಾಲೆ ಕಲಿತಿದ್ದು ನನ್ನ ಸೌಭಾಗ್ಯ ನನಗೆ ಶಿಕ್ಷಕರು ಅತಿ ಕಾಳಜಿ ವಹಿಸಿ ನನ್ನ ಕಲಿಕೆಯಲ್ಲಿ ಬದಲಾವಣೆ ತಂದಿದ್ದು ಅವರಿಗೆ ನಾನು ಚಿರರುಣಿ ಎಂದು ಹೇಳಿದರು. ಇನ್ನೂ ವಿದ್ಯಾರ್ಥಿಗಳು ಬಹಳ ಓದಿದ್ರೆ ಮಾತ್ರ ವಿಜ್ಞಾನಿಯಾಗುತ್ತಾರೆ ಎಂಬುದು ತಪ್ಪು ಕಲ್ಪನೆ ಯಾವುದೇ ವಿಷಯ ಓದುವಾಗ ಅಚ್ಚುಕಟ್ಟಾಗಿ ಶಿಸ್ತಿನಿಂದ ಓದಿದರೆ ಸಾಕು ನೀವು ಬಯಸಿದ್ದು ಯಶಸ್ವಿಯಾಗುತ್ತಿರಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಪ್ರಭಾಕರ್ ಬಗಲಿ ಮಾತನಾಡಿ.ಬಂಥನಾಳ ಸ್ವಾಮೀಜಿಯವರ ಕೊಡುಗೆ ಶ್ರೀ ಶಾಂತೇಶ್ವರ ಹೆಸರಲ್ಲಿ ಪ್ರಾರಂಭವಾದ ಚಿಕ್ಕ ಶಾಲೆಯು ಇಂದು ಹಲವಾರು ಕ್ಷೇತ್ರದ ಸಾಧನೆಗೈದ ಸಾಧಕರನ್ನು ಕಾಣುತ್ತಿದ್ದೇವೆ ಇನ್ನು 75 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಕಲಿತ ಎಂಎಲ್ಎ ಎಂಪಿ ಹಾಗೂ ಡಾಕ್ಟರ್ ಇಂಜಿನಿಯರ್ ಹಾಗೂ ಇನ್ನೂ ಇತರೆ ಕ್ಷೇತ್ರದ ಎಲ್ಲಾ ಸಾಧಕರನ್ನ ಕರೆ ತಂದು ಸನ್ಮಾನಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ದೀಪಕ್ ಜೊಶಿ,ಇಸ್ರೋ ವಿಜ್ಞಾನಿ ಎಚ್ ಎಲ್ ಶ್ರೀನಿವಾಸ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಸ್.ಆಲಗೂರ, ಕ್ಷೇತ್ರ ಸಮನ್ವಯಅಧಿಕಾರಿಗಳಾದ ಎಸ್ ಆರ್ ನಡಗಡ್ಡಿ, ಸಂಸ್ಥೆಯ ಉಪಾಧ್ಯಕ್ಷರಾದ ನೀಲಕಂಠಗೌಡ ಪಾಟೀಲ್, ಕಾರ್ಯದರ್ಶಿಗಳಾದ ಸಿದ್ದಣ್ಣ ಆರ್ ತಾಂಭೆ, ನಿರ್ದೇಶಕ ಸಚಿನ್ ಕುಮಾರ್ ಗಾಂಧಿ, ಸಾತಪ್ಪ ತೆನೆಹಳ್ಳಿ, ವರ್ಧನ್ ಜೋಶಿ, ಚಂದ್ರಕಾಂತ್ ದೇವರ, ಅಜಿತ್ ಧನಶೆಟ್ಟಿ, ಪ್ರಾಚಾರ್ಯರು ಬಿ.ಎನ್ ರಾಥೋಡ್ ಉಪಸ್ಥರಿದ್ದರು ನಿರೂಪಣೆ ಮುಖ್ಯಗುರುಗಳು ರಾಘವೇಂದ್ರ ಕುಲಕರ್ಣಿ ನೆರವೇರಿಸಿದರು.