ಇಂಡಿ. ಉರ್ದು ಶಾಲೆಯಲ್ಲಿ ಕಲಿತು ಎಂ.ಬಿ.ಬಿ.ಎಸ್ ಶಿಕ್ಷಣಕ್ಕೆ ಸರಕಾರಿ ಸೀಟಗೆ ಆಯ್ಕೆ ಯಾದ ವಿದ್ಯಾರ್ಥಿ ಫರಹಾನಾ ಇಸಾಕ ಮುಲ್ಲಾ ಇವರಿಗೆ ಶಮ್ಸ ಉರ್ದು ಶಾಲೆಯ ವತಿಯಿಂದ ಸನ್ಮಾನ ಮಾಡಲಾಯಿ.
ಈ ಕಾರ್ಯಕ್ರಮದಲ್ಲಿ ಮುಖ್ಯಾಅತಿಥಿಯಾಗಿ ಆಗಮಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವಿದ ಮೋಮಿನ ಒಪ್ಪತ್ತು ಉಪಾವಿಸವಿದ್ದರೂ ಪರವಾಗಿಲ್ಲ. ಮಕ್ಕಳಿಗೆ ಶಿಕ್ಷಣ ಕೆuಟಿಜeಜಿiಟಿeಜಡಿಸಿ ಅವರನ್ನು ಅಧಿಕಾರಿಗಳನ್ನಾಗಿ ಮಾಡಿ. ಶಿಕ್ಷಣದಿಂದ ಮಾತ್ರ ಬದುಕು ಬದಲಾಯಿಸಿಕೆuಟಿಜeಜಿiಟಿeಜಳ್ಳಲು ಸಾಧ್ಯ. ಆದ್ದರಿಂದ ಮಕ್ಕಳಿಗೆ ಶಿಕ್ಷಣ ಕೆuಟಿಜeಜಿiಟಿeಜಡಿಸಿ ವಿದ್ಯಾವಂತರನ್ನಾಗಿ ಮಾಡಿ ಅವರು ಒಳ್ಳೆ ಉದ್ಯೋಗ ಪಡೆದಲ್ಲಿ ಬಡತನ ದೂರವಾಗುತ್ತದೆ ಎಂದು ಸಲಹೆ ನೀಡಿದರು.
ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಉನ್ನತ ಶಿಕ್ಷಣ ನೀಡಿ ಅವರನ್ನೇ ದೇಶದ ಆಸ್ತಿಯನ್ನಾಗಿ ಮಾಡಬೇಕು. ವಿದ್ಯಾರ್ಥಿ ಜೀವನದಿಂದಲೇ ಮಕ್ಕಳಿಗೆ ಭದ್ರ ಬುನಾದಿ ಒದಗಿಸುವುದು ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದಾಗಿದೆ. ದೇಶದ ಭವಿಷ್ಯವಾದ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ವಾತಾವರಣ ಹಾಗೂ ವೇದಿಕೆ ಒದಗಿಸುವುದು ಶಿಕ್ಷಕರ ಜತೆಗೆ ಪೋಷಕರ ಪಾತ್ರವೂ ಮಹತ್ವದಾಗಿದೆ ಎಂದು ಅಭಿಪ್ರಾಯ ಪಟ್ಟರು
ಸಮಾಜ ಸೇವಕ ಹಸನ ಮುಜಾವರ ಮಾತನಾಡಿ ಹಿಂದೆ ಶಿಕ್ಷಣ ಕ್ಷೇತ್ರಕ್ಕೆ ಅಷ್ಟೊಂದು ಪ್ರೋತ್ಸಾಹ ಸಿಗುತ್ತಿರಲಿಲ್ಲ. ಆದರೆ, ಕಾಲ ಮತ್ತು ಪರಿಸ್ಥಿತಿ ಎರಡು ಬದಲಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರದ ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋತ್ಸಾಹ ನೀಡುತ್ತಿವೆ. ಎಲ್ಲರ ಆಶಯ ಜತೆಗೆ ಪೋಷಕರ ಬಯಕೆಯಂತೆ ವಿದ್ಯಾರ್ಥಿಗಳು ತಮಗೆ ಸಿಗುತ್ತಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡುವಂತೆ ತಿಳಿಸಿದರು
ಶಿಕ್ಷಕರ ಸಂಘದ ನಿರ್ದೇಶಕ ಅಲ್ತಾಫ ಬೋರಾಮಣಿ ಮಾತನಾಡಿ ವಿದ್ಯೆ ಎಂಬುದು ಯಾರೂ ದೋಚಲಾಗದ, ಬಳಸಿದಷ್ಟು ಸಮೃದ್ಧವಾಗಿ ಬೆಳೆಯುವ, ಎಲ್ಲ ಸಂಪತ್ತಿಗಿAತ ಮಿಗಿಲಾದದ್ದು. ಆದ್ದರಿಂದ ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಮಕ್ಕಳ ಜ್ಞಾನ ಭಂಡಾರದ ಶ್ರೀಮಂತಿಕೆ ಹೆಚ್ಚಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ ಶಕಿಲ್ ಅರಬ, ಸಂಸ್ಥೆಯ ಕಾರ್ಯದರ್ಶಿ ಸಿಕಂದರ್ ಅರಬ, ವಾಜಿದ ಇನಾಮದಾರ, ಅನವರ ಇನಾಮದಾರ, ಅಬ್ದುಲ್ ರಶಿದ ಮುಗಾಳಿ, ನಾಸಿರ ಪಟೇಲ, ಹಾಫೀಜ್ ಮುಹಮ್ಮದ್ ಇಮ್ರಾನ್ ಇಶಾತಿ ಸೇರಿದಂತೆ ಇತರರು ಇದ್ದರು.