This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಜನಸಾಮಾನ್ಯರ ಒತ್ತಾಯಕ್ಕೆ ಮಣಿದು ಚುನಾವಣೆಗೆ ಮತ್ತೆ ಸ್ಪರ್ಧಿಸುತ್ತಿರುವೆ – ಮಾಜಿ ಮಂತ್ರಿ ಇನಾಮದಾರ


ಚನ್ನಮ್ಮನ ಕಿತ್ತೂರು ನ ., 10- ಕಿತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕೊರತೆಗಳನ್ನು ಕಂಡು ಮತದಾರರು ರೋಸಿ ಹೋಗಿದ್ದು ಮತ್ತೆ ನನ್ನನ್ನು ಸ್ಪರ್ಧಿಸುವಂತೆ ಒತ್ತಾಯಿಸುತ್ತಿರುವದರಿಂದ ಬರಲಿರುವ ವಿಧಾನ ಸಭಾ ಚುನಾವಣೆಗೆ ಮತ್ತೆ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದು ಸೋಮವಾರ ಟಿಕೆಟ್‌ಗೆ ಅರ್ಜಿ ಸಲ್ಲಿಸುತ್ತಿರುವದಾಗಿ ಕಾಂಗ್ರೇಸ್ ಪಕ್ಷದ ಮಾಜಿ ಮಂತ್ರಿಗಳಾದ ಡಿ ಬಿ ಇನಾಮದಾರ ಹೇಳಿದರು.
ಅವರು ಬುಧವಾರ ಸಂಜೆ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡುತ್ತ, ನನ್ನ ಅವಧಿಯಲ್ಲಿ ನಿರ್ಮಾಣಗೊಂಡ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆಗೊಳಿಸಲು ನಾಲ್ಕು ವರ್ಷಗಳ ಕಾಲ ಕಾಲಹರಣ ಮಾಡಿದ ಇಂಥ ಸರಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಸರಕಾರದ ನೀತಿಯನ್ನು ಜರಿದರು. ಗ್ರಾಮಿಣ ರಸ್ತೆಗಳ ಬಗ್ಗೆ ಮಾತನಾಡುತ್ತ ಕೋಪಗೊಂಡ ಅವರು ಕಿತ್ತೂರು-ಸಂಗೊಳ್ಳಿ ಮಾರ್ಗ ಸೇರಿದಂತೆ ಕ್ಷೇತ್ರದ ಎಲ್ಲ ಗ್ರಾಮೀಣ ರಸ್ತೆಗಳು ಹದಗಟ್ಟಿದ್ದು ವಾಹನ ಚಾಲಕರು ಕೈಯಲ್ಲಿ ಜೀವ ಹಿಡಿದುಕೊಂಡು ಸಾಗುವಂತಾಗಿದೆ. ಕೆಲ ರಸ್ತೆಗಳು ನಿರ್ಮಾಣಗೊಂಡರೂ ಕೆಲ ತಿಂಗಳಲ್ಲಿ ಹದಗೆಟ್ಟಿದ್ದು ಕಳಪೆ ಕಾಮವಾರಿ ಹಾಗು ಕಮಿಷನ್ ಹರಿದಾಟಕ್ಕೆ ಸಾಕ್ಷಿಯಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ನನ್ನ ಅವಧಿಯಲ್ಲಿ ನಿರ್ಮಾಣಗೊಂಡ ಸಿಸಿ ರಸ್ತೆಗಳನ್ನು ಜಲ್ ಮಿಷನ್ ಯೊಜನೆ ಹೆಸರಿನಲ್ಲಿ ತಗ್ಗುಗಳನ್ನು ತೋಡಲಾಗಿದ್ದು ಇನ್ನೂವರೆಗೆ ಗ್ರಾಮಗಳಲ್ಲಿ ಸುಗಮವಾಗಿ ಸಂಚರಿಸದಂತಾಗಿದ್ದು ಈ ಯೋಜನೆ ಕೂಡ ಸಂಪೂರ್ಣ ವಿಫಲವಾಗಿದೆ ಎಂದರು. ನನ್ನ ಕಾಲಾವಧಿಯಲ್ಲಿಯೇ ಮಂಜೂರಾದ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಿ ಅವುಗಳನ್ನು ತಾವೇ ಮಾಡಿದ್ದಾಗಿ ಈಗಿನ ಸರಕಾರ ಸುಳ್ಳು ಹೇಳುತ್ತಿದೆ. ನನ್ನ ಅವಧಿಯಲ್ಲಾದ ೨೫೦ ಕೋಟಿ ರೂ. ವೆಚ್ಚದ ಕೆರೆ ತುಂಬಿಸುವ ಯೋಜನೆ ಇನ್ನೂವರೆಗೆ ಪೂರ್ಣಗೊಂಡಿಲ್ಲ ಹಣ ಮಾತ್ರ ಎಲ್ಲೆಂದರಲ್ಲಿ ಹರಿದು ಹೋಗಿದೆ. ಇದನ್ನೆಲ್ಲ ಕಣ್ಣಾರೆ ಕಂಡ ಜನರು ಈ ಬಿಜೆಪಿ ಸರಕಾರವನ್ನು ೪೦ ಪರಸೆಂಟ್ ಕಮೀಷನ್ ಸರಕಾರ ಎಂದು ಜರಿಯುವಂತಾಗಿದೆ. ಕ್ಷೇತ್ರದ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಬಿಜೆಪಿ ನಾಯಕರು ಕೇವಲ ಬುಟಾಟಿಕೆ ಹೇಳುತ್ತ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ ಸರಕಾರ ಅಧಿಕಾರದ ಚುಕ್ಕಾಣಿಯಲ್ಲಿ ಹಿಡಿಯುತ್ತದೆ. ಡಾವಣಗೇರಿಯಲ್ಲಿ ಸಿದ್ರಾಮೋತ್ಸಕ್ಕೆ ಸೇರಿದ ಜನಸಾಗರವೇ ಚುನಾವಣೆಯಲ್ಲಿ ಬಿಜೆಪಿ ಸರಕಾರ ದಿವಾಳಿಗೆ ಮುನ್ಸೂಚನೆ ನೀಡಿದೆ ಎಂದರು.
ನನ್ನ ಕ್ಷೇತ್ರದಲ್ಲಿ ಮತದಾರರು ಸ್ಪರ್ಧಿಸುವಂತೆ ಬಹಳ ಒತ್ತಾಯಿಸುತ್ತಿದ್ದಾರೆ. ಟಿಕೆಟ್ ತರುವ ಕೆಲಸ ನನ್ನದು ಚುನಾವಣೆ ಗೆಲ್ಲಿಸುವ ಕೆಲಸ ನಿಮ್ಮದು ಎಂದು ಜನರಿಗೆ ನಾನು ಹೇಳುತ್ತಿದ್ದೇನೆ. ಎಮ್ ಕೆ ಹುಬ್ಬಳ್ಳಿ, ನೇಸರಗಿ ಕಿತ್ತೂರು ಸಂಪಗಾಂವ ಗಳಲ್ಲಿನ ಜನರು ಸಾಕಷ್ಟು ಬೆಂಬಲ ಸೂಚಿಸಿದ್ದಾರೆ. ಶುಕ್ರವಾರ ಬೆಂಗಳೂರಿಗೆ ತೆರಳಲಿದ್ದು ಸೋಮವಾರ ಟಿಕೆಟ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳುತ್ತ ಟಿಕೆಟ್ ತರುವಲ್ಲಿ ಗೊಂದಲವಿಲ್ಲ ಚುನಾವಣೆಗೆ ಸ್ಪರ್ಧಿಸುವದು ಖಚಿತ ಎಂಬ ಮಾಹಿತಿ ನೀಡಿದರು.
ಅಲ್ಪ ಸಂಖ್ಯಾತರ ಘಟಕ ರಾಜ್ಯ ಕಾರ್ಯದರ್ಶಿ ಮಹ್ಮದ ಹನೀಫ್ ಸುತಗಟ್ಟಿ, ಉದಯ ಇಂಗಳೆ, ನಿಂಗಪ್ಪ ತಡಕೋಡ, ಕುಲವಳ್ಳಿ ಗ್ರಾ ಪಂ ಅಧ್ಯಕ್ಷ ಭಿಷ್ಟಪ್ಪ ಶಿಂಧೆ ನ್ಯಾಯವಾದಿ ಸತೀಶ ವಳಸಂಗ, ಅರುಣ ಬಿಕ್ಕಣ್ಣವರ, ರಾಜು ಇನಾಮದಾರ ಹಾಗು ನೂರಾರು ಕಾರ್ಯಕರ್ತರು ಇದ್ದರು.


Leave a Reply