ಎರ್ರಿತಾತಾ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ: ಸಮುದಾಯಗಳ ಗಲಾಟೆಯಲ್ಲಿ ಪಿಎಸ್‌ಐಗೆ ಗಾಯ

Ravi Talawar
WhatsApp Group Join Now
Telegram Group Join Now

ಬಳ್ಳಾರಿ, ಏಪ್ರಿಲ್​ 08: ದೇವರ ಮೂರ್ತಿ ಕುರಿಸುವ ವಿಚಾರವಾಗಿ ಎರಡು ಸಮುದಾಯದ ನಡುವೆ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿ, ಕಲ್ಲು ತೂರಾಟವಾಗಿರುವ ಘಟನೆ ಬಳ್ಳಾರಿ  ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ.

ಪವಾಡ ಪುರುಷ ಎರ್ರಿತಾತಾ ಸ್ವಾಮಿಯಮೂರ್ತಿ ಕೂರಿಸುವ ವಿಚಾರವಾಗಿ ಈ ಗಲಾಟೆ ನಡೆದಿದೆ. 15 ದಿನಗಳ ಹಿಂದೆ ಎರ್ರಿಸ್ವಾಮಿ ಮಠದಲ್ಲಿ ರಾತ್ರೋರಾತ್ರಿ ಮೂರ್ತಿ ಕುರಿಸಲಾಗಿತ್ತು. ಈ ಮೂರ್ತಿಯನ್ನು ತೆರವುಗೊಳಿಸುವಂತೆ ಇನ್ನೊಂದು ಸಮುದಾಯದವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಮೂರ್ತಿ ತೆರವುಗೊಳಿಸಲು ಆದೇಶ ನೀಡಿತ್ತು. ಆದರೆ ಪವಾಡ ಪುರುಷನ ಮೂರ್ತಿಯನ್ನು ತೆರವುಗೊಳಿಸಲ್ಲ ಅಂತ ಮೊತ್ತೊಂದು ಸಮುದಾಯದವರು ಹಠ ಹಿಡಿದ್ದಾರೆ. ಇದರಿಂದ ಎರಡು ಸಮುದಾಯದ ಮಧ್ಯೆ ವಾಗ್ವಾದ ಸಂಭವಿಸಿದೆ.

ವಾಗ್ವಾದ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ಸಂಭವಿಸಿದೆ. ಈ ವಿಚಾರ ತಿಳಿದು ಗ್ರಾಮಕ್ಕೆ ಪಿಎಸ್ಐ ಸಂತೋಷ್ ಡಬ್ಬಿನ್, ಸಿಪಿಐ ಸತೀಶ್ ಸೇರಿದಂತೆ ಇನ್ನಿತರ ಪೊಲೀಸ್​ ಸಿಬ್ಬಂದಿ ಬಂದಿದ್ದಾರೆ.

ಕಲ್ಲು ತೂರಾಟವನ್ನು ನಿಲ್ಲಿಸಲು ಮುಂದಾದಾಗ ಕಿಡಿಗೇಡಿಗಳು ಪೊಲೀಸರ ಮೇಲೂ ಕಲ್ಲು ಎಸೆದಿದ್ದಾರೆ. ಇದರಿಂದ ಪಿಎಸ್ಐ ಸಂತೋಷ್ ಡಬ್ಬಿನ್ ತಲೆಗೆ, ಸಿಪಿಐ ಸತೀಶ್ ಸೇರಿದಂತೆ ಮೂವರಿಗೆ ಗಾಯವಾಗಿದೆ. ಕೂಡಲೆ ಪಿಎಸ್​ಐ ಸಂತೋಷ್ ಅವರನ್ನು ಬಳ್ಳಾರಿ ಟ್ರಾಮಾ ಕೇಕ್​ಸೆಂಟರ್​ಗೆ ಕರೆದುಕೊಂಡು ಹೋಗಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

ಘಟನಾ ಸ್ಥಳಕ್ಕೆ‌ ಎಸ್ಪಿ ಮತ್ತು‌ ಎಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಗುಂಪಿನ ಕಡೆಯಿಂದ 30ಕ್ಕೂ ಹೆಚ್ಚ ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರ್ರಿಸ್ವಾಮಿ ಮಠದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ದೇವರ ಮೂರ್ತಿ ಕೂರಿಸುವ ವಿಚಾರವಾಗಿಯೇ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲೂ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿತ್ತು. ದೇವಸ್ತಾನ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ನ್ಯಾಯಾಲಯ ಸದ್ಯಕ್ಕೆ ದೇವಸ್ತಾನದ ಗೋಪುರ ಹಾಗೂ ಕಾಂಪೌಂಡ್ ಕಟ್ಟಲು ಅನುಮತಿ ನೀಡಿತ್ತು. ಆದರೆ ಗೋಪುರ ಕಟ್ಟಿ, ಗರ್ಭಗುಡಿಯೊಳಗೆ ಮೂರ್ತಿ ಸ್ಥಾಪಿಸಲಾಗಿತ್ತು. ಇದಕ್ಕೆ ಇನ್ನೊಂದು ಗುಂಪಿನಿಂದ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ಇದರಿಂದ ಗಲಾಟೆ ನಡೆದಿತ್ತು.

WhatsApp Group Join Now
Telegram Group Join Now
Share This Article