ಸಲ್ಮಾನ್ ಮನೆ ಮುಂದೆ ಫೈರಿಂಗ್ ಕೇಸ್‌ನಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಎಂಟ್ರಿ

Ravi Talawar
WhatsApp Group Join Now
Telegram Group Join Now

ದೆಹಲಿ, ಏಪ್ರಿಲ್​ 22: ಸಲ್ಮಾನ್ ಖಾನ್ ಮನೆಗೆ ಫೈರಿಂಗ್ ಪ್ರಕರಣದಲ್ಲಿ ಇಬ್ಬರು ಶೂಟರ್‌ಗಳ ಜೊತೆಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಪೊಲೀಸರು ಆರೋಪಿಯನ್ನಾಗಿ ಮಾಡಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್ ಸಂಪೂರ್ಣ ಸಿದ್ಧತೆಯೊಂದಿಗೆ ಆಗಮಿಸಿದೆ. ಪಿ ನದಿಯಲ್ಲಿ ಬಂದೂಕಿನ ಹುಡುಕಾಟಕ್ಕೆ ಸ್ವಲ್ಪ ಸಮಯ ಹಿಡಿಯಬಹುದು ಎನ್ನಲಾಗಿದೆ.

ಸಲ್ಮಾನ್ ಖಾನ್ ಅವರ ಗ್ಯಾಲಕ್ಸ್ ಅಪಾರ್ಟ್‌ಮೆಂಟ್‌ನ ಹೊರಗೆ ಗುಂಡು ಹಾರಿಸಿದ ಶೂಟರ್‌ಗಳು ಮುಂಬೈನಿಂದ ಕಚ್‌ಗೆ ಬರುತ್ತಿದ್ದಾಗ ಸೂರತ್‌ನ ತಾಪಿ ನದಿಯಲ್ಲಿ ಬಂದೂಕನ್ನು ಎಸೆದಿದ್ದೇವೆ ಎಂದು ಹೇಳಿದ್ದರು. ಮುಂಬೈ ಕ್ರೈಂ ಈ ಹೈ ಪ್ರೊಫೈಲ್ ಪ್ರಕರಣದ ತನಿಖೆ ನಡೆಸುತ್ತಿದೆ.

ಇದೀಗ ಈ ತಂಡ ಸೂರತ್ ತಲುಪಿದೆ.ಇದರಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಕೂಡ ಸೇರಿದ್ದಾರೆ. ಏಪ್ರಿಲ್ 17 ರಂದು ಗುಜರಾತ್‌ನ ಕಚ್ ಪೊಲೀಸರು ಆಶಾಪುರ ಮಾತಾ ದೇವಸ್ಥಾನದಿಂದ ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಅವರನ್ನು ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದರು.

ಮುಂಬೈ ಪೊಲೀಸರು ಇಬ್ಬರು ಶೂಟರ್‌ಗಳನ್ನು 10 ದಿನಗಳ ಕಾಲ ವಶಕ್ಕೆ ತೆಗೆದುಕೊಂಡಿದ್ದಾರೆ. ಕ್ರೈಂ ಬ್ರಾಂಚ್ ತಂಡ ಸೂರತ್‌ನಲ್ಲಿ ಶೂಟರ್‌ಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಲಿದೆ. ಶೋಧ ಕಾರ್ಯಕ್ಕಾಗಿ ತಜ್ಞರ ತಂಡವೂ ಅಪರಾಧ ವಿಭಾಗದ ಜತೆಗಿದೆ.

WhatsApp Group Join Now
Telegram Group Join Now
Share This Article