ಇಂಡಿ : ದಸರಾ ಹಬ್ಬ ಎಲ್ಲರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತದೆ ಮತ್ತು ಮನುಷ್ಯನ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದಲ್ಲಿ ರವಿವಾರ ಗೊಂದಳಿ ಓಣಿಯ ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿಯಿಂದ ನಡೆದ ಉತ್ಸವ ಮತ್ತು ಮೂರು ಬಾರಿ ವಿಜೇತ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂಡಿ ಪಟ್ಟಣದ ಅನೇಕ ಕಡೆ ಸೇರಿದಂತೆ ತಾಲೂಕಿನ ಎಲ್ಲ ಕಡೆ ಎಲ್ಲರೂ ಭಕ್ತಿ ಭಾವದಿಂದ ದುರ್ಗಾ ಮಾತೆಯ ಪೂಜೆ ಮಾಡುವದು ವಿಶೇಷ.
ಅದಲ್ಲದೆ ಇಂಡಿ ಭಾಗದಿಂದ ತುಳಜಾಪುರಕ್ಕೆ ಅನೇಕ ಜನರು ಪಾದಯಾತ್ರೆ ಯಲ್ಲಿ ಹೋಗಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಇದು ನಮ್ಮ ಸಂಸ್ಕೃತಿಯ ಪ್ರತೀಕ ಎಂದರು.
ಇದೇ ವೇಳೆ ಮೂರು ಬಾರಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಇವರನ್ನು ಸನ್ಮಾನಿಸಲಾಯಿತು.
ಜೈಭವಾನಿ ಗೊಂದಳಿ ಸಮಾಜದ ತಾಲೂಕಾ ಅಧ್ಯಕ್ಷ ನಿಲೇಶ ಮಾನೆ,ನಗರ ಅಧ್ಯಕ್ಷ ಅಶೋಕ ಮಾನೆ,ಉಪಾಧ್ಯಕ್ಷ ಸುರೇಶ ವಾಘಮೋರೆ,ಕಾರ್ಯದರ್ಶಿ ನರೇಂದ್ರ ವಾಷ್ಟರ,ಬಾಬುರಾವ ಮಾನೆ, ವಿಠ್ಠಲ ಬಸವಂತ ವಾಘಮೋರೆ,ವಿಠ್ಠಲ ಮಾನೆ,ಮುರಲೀಧರ ಮಾನೆ, ಅಂಬಾದಾಸ ವಾಘಮೋರೆ,ಸಂಜೀವ ವಾಘಮೋರೆ,ಸಿದ್ದು ಮಾನೆ, ಇಂದ್ರಜೀತ ಮಾನೆ, ಕಿರಣ ಇಂಗಳೆ,ಅಂಬಾದಾಸ ಮಾನೆ,ರಮೇಶ ವಾಷ್ಟರ,ಅಕ್ಷಯ ವಾಷ್ಟರ,ಸಂತೋಷ ಮಾನೆ,ರಾವಜಿ ಮಾನೆ,ರಾಘವೇಂದ್ರ ವಾಘಮೋರೆ, ವಿಷ್ಣು ವಾಷ್ಟರ ಮತ್ತಿತರಿದ್ದರು.
ದಸರಾ ಮಾನವ ಸಂಬಂಧ ಗಟ್ಟಿಗೊಳಿಸುತ್ತದೆ – ಯಶವಂತರಾಯಗೌಡ

Leave a comment
Leave a comment