ಅಥಣಿ: ತಾಲೂಕಿನಧ್ಯಾಂತ ಭೀಕರ ಬರಗಾಲ ಜನರು ಮಾತ್ರವಲ್ಲ, ಸಸ್ಯ ಸಂಕಲು ಹಾಗೂ ಪ್ರಾಣಿ ಸಂಕುಲದ ಬದುಕನ್ನೇ ಹೈರಾಣಾಗಿಸಿದೆ. ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ನದಿಗಳು ಖಾಲಿಯಾಗಿದ್ದರೆ, ಅಂತರ್ಜಲ ಮಟ್ಟ ಕುಸಿದಿದೆ.
ತಾಲೂಕಿನ ಪ್ರಮುಖ ಜಮಲೂಲವಾಗಿರುವ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದು, ಜನ-ಜಾನುವಾರುಗಳು ನೀರಿಗಾಗಿ ಪರಿತಪಿಸುತ್ತಿರುವ ದೃಷ್ಯ ಸಾಮಾನ್ಯಾವಾಗಿ ಕಂಡು ಬರುತ್ತಿದೆ. ಉತ್ತರ ಭಾಗದ 10 ಕ್ಕೂ ಹೆಚ್ಚು ಗ್ರಾಮಗಳಿಗೆ ಈಗಾಲೇ ಟ್ಯಾಂಕರಗಳ ಮೂಲಕ ಸರಕಾರದಿಂದ ನೀರು ಕೊಡುತ್ತಿದ್ದಾರೆ. ಆದರೆ ಈ ನೀರಿನ ಸರಬರಾಜು ಸಾಕಾಗುತ್ತಿಲ್ಲಾ ಅನ್ನುವ ಕೂಗು ಕೇಳಿ ಬರುತ್ತಿದೆ.
ಇನ್ನು ಮಹಾರಾಷ್ಟ್ರದ ಕೊಯಿನಾ ಜಲಾಶಯದಿಂದ ನೀರು ಬಿಡಬೇಕಾಗಿದ್ದು ಅದು ಸಾದ್ಯವಾಗುತ್ತಿಲ್ಲ. ಅಲ್ಲದೆ ಮುಂಗಾರು ಮಳೆ ಸಹ ಕೈ ಕೊಟ್ಟಿದ್ದು ರೈತರ ಬೆಳೆದ ಸಾವಿರಾರು ಎಕರೆ ಪ್ರದೇಶ ವಾಣಿಜ್ಯ ಬೆಳೆಗಳು ಒಣಗುತ್ತಿದ್ದರೆ ಇತ್ತ ಬಿತ್ತನೆ ಮಾಡಲು ಸಿದ್ದವಾಗಿದ್ದ ರೈತರು ಸಹ ಬಿತ್ತನೆ ಮಾಡಲಾಗದೆ ಪರಿತಪಿಸುತ್ತಿರುವದು ದುರದುಷ್ಟಕರ ಸಂಗತಿಯಾಗಿದೆ. ಇದರಿಂದ ಕೃಷಿ ಮಾತು ಪಕ್ಕಕ್ಕಿರಲಿ, ಕುಡಿಯುಲು, ಜಾನುವಾರುಗಳಿಗೂ ನೀರು ಇಲ್ಲದಂತಾಗಿದೆ. ಅಂತರ್ಜಲ ಕಡಿಮೆಯಾಗಿ ಬೋರವೇಲ್ಗಳು 50 ಪ್ರತಿಶತದಷ್ಟು ಬರಿದಾಗಿರುವದು ಕಂಡು ಬಂದಿದೆ. ಇನ್ನು ಕೆರೆ ಬಾವಿ ಎರಡು ತಿಂಗಳ ಹಿಂದೆಯೇ ನೀರಿಲ್ಲದೆ ಒಣಗಿದ್ದು, ಮಳೆರಾಯನ ಕೃಪೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ರೈತರು
ತಾಲೂಕಿನ ಕಕಮರಿ, ಕೊಟ್ಟಲಗಿ, ತೆಲಸಂಗ, ಅರಟಾಳ, ಬಾಡಗಿ, ಐಗಳಿ, ಕೋಹಳ್ಳಿ, ಬನ್ನೂರು ಕೊಕಟನೂರ, ಸೇರಿದಂತೆ ಉತ್ತರ ಭಾಗದ 10ಕ್ಕೂ ಹೆಚ್ಚು ಗ್ರಾಮಗಳಿಗೆ ತಾಲೂಕು ಪಂಚಾಯತ ಹಾಗೂ ಕಂದಾಯ ಇಲಾಖೆಯ ಮೂಲಕ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. 14 ವಾಹನಗಳ ಮೂಲಕ ಪ್ರತಿದಿನ ಸುಮಾರು 50 ಟ್ರೀಪ್ ಗಳ ಮೂಲಕ ಇಲ್ಲಿಯವರೆಗೆ ಒಟ್ಟು 604 ಟ್ರೀಪ್ನ ಸುಮಾರು 31 ಲಕ್ಷ 46 ಸಾವಿರ ಲಿಟರ್ ನೀರನ್ನು ಜನರಿಗೆ ಕುಡಿಯಲು ಸರಬರಾಜು ಮಾಡಲಾಗಿದೆ.