ಮೂಡಲಗಿ: ಕಲ್ಲೋಳಿಯ ಜನತೆ ಕಳೆದ 40 ವರ್ಷಗಳಿಂದ ದಸರಾ ಉತ್ಸವ ಹಾಗೂ ದೇವಿ ಪುರಾಣ ಏರ್ಪಡಿಸಿಕೊಂಡು ಬಂದಿರುವುದು, ಅವರ ದೈವ ಪರ ಇರುವ ನಿಷ್ಠೆಯನ್ನು ತೋರಿಸುತ್ತದೆ ಎಂದು ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ರವಿವಾರದಂದು ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ದುರ್ಗಾದೇವಿ ಮೂರ್ತಿ ಮೆರವಣಿಗೆಗೆ ಚಾಲನೆ ಹಾಗೂ ಲಕ್ಷ್ಮೀದೇವಿ ದೇವಸ್ಥಾನದ ಜಿರ್ಣೋದ್ಧಾರ ಲೋಕಾರ್ಪಣೆ ನೆರೆವೇರಿಸಿ ಮಾತನಾಡಿದ ಅವರು, ಈ ತರಹದ ಹಬ್ಬಗಳ ಆಚರಣೆಯಿಂದ ಜನರಲ್ಲಿ ಪ್ರೀತಿ, ಸೌಹಾರ್ದತೆ ಬೆಳೆಯುತ್ತದೆ ಎಂದು ಉತ್ಸವಕ್ಕೆ ಶುಭಹಾರೈಸಿದರು.
ಅರಕೇರಿ ಅಮೋಘಸಿದ್ಧ ಪೀಠದ ಶ್ರೀ ಅವಧೂತ್ ಮಹಾರಾಜರು, ಹುಬ್ಬಳ್ಳಿಯ ಜಡಿಸಿದ್ದಾಶ್ರಮದ ಶ್ರೀ ರಾಮನಂದ ಮಹಾಸ್ವಾಮೀಜಿ, ಮಲ್ಲಾಪುರ-ನೇಸರಗಿಯ ಶ್ರೀ ಚಿದಾನಂದ ಶ್ರೀಗಳು, ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ನವರಾತ್ರಿ ಉತ್ಸವ ಸ್ವಾಗತ ಸಮೀತಿ ಅಧ್ಯಕ್ಷ ರಾವಸಾಹೇಬ ಬೆಳಕೂಡ ಹಾಗೂ ಮತ್ತಿತರರು ಸೇರಿದಂತೆ ಆನೆಯ ಅಂಬಾರಿ ಮೇಲೆಯ ಉತ್ಸವ ಮೂರ್ತಿಗೆ ಮತ್ತು ನವರಾತ್ರಿ ಪ್ರತಿಷ್ಠಾಪಣ ದುರ್ಗಾದೇವಿ ಮೂರ್ತಿಗೆ ಪುರ್ಷ್ಪಾಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ನವರಾತ್ರಿಯ ದುರ್ಗಾದೇವಿ ಮೂರ್ತಿಯ ಜಂಬೂ ಸವಾರಿಯಲ್ಲಿ ಮಹಿಳೆಯರ ಕುಂಭಮೇಳದೊಂದಿಗೆ ಡೊಳ್ಳು, ಸಂಬಾಳ, ಕರಡಿ ಮಜಲು ಸೇರಿದಂತೆ ಹಲವಾರು ಸಾಂಪ್ರದಾಯಿಕ ವಾದ್ಯಗಳು ದುರ್ಗಾದೇವಿ ವೈಭವದ ಉತ್ಸವಕಕ್ಕೆ ಮೆರಗು ನೀಡಿದವು. ದುರ್ಗಾದೇವಿ ಮೂರ್ತಿಯ ಜೂಂಬೂ ಸವಾರಿ ವಿಕ್ಷಣೆಗೆ ಸುತ್ತಮುತ್ತಲಿನ ಗ್ರಾಮಗಳ ಹಾಗೂ ಪಟ್ಟಣದ ಜನರು ತಂಡೋಪ ತಂಡವಾಗಿ ಆಗಮಿಸಿ ಜಂಬೂ ಸವಾರಿ ವೀಕ್ಷಿಸಿದರು. ಬೆಳಿಗ್ಗೆ ದೇವಸ್ಥಾನದ ಮೂಲ ಸನ್ನಿಧಿಗೆ ವೇದಮೂರ್ತಿ ಮೃತ್ಯುಂಜಯ ಹಿರೇಮಠ ಅವರು ಅಭಿಷೇಕ ಮಾಡುವುದರೊಂದಿಗೆ ವಿಶೇಷ ಪೂಜೆ, ಯಜ್ಞ, ಹೋಮ, ಹವನ ಶಾಸ್ತ್ರಬದ್ಧವಾಗಿ ಜರುಗಿದವು.
ಈ ಸಂದರ್ಭದಲ್ಲಿ ನಿಂಗಪ್ಪ ಫಿರೋಜಿ, ನವರಾತ್ರಿ ಉತ್ಸವ ಕಮಿಟಿಯ ಸದಸ್ಯರಾದ ಭಗವಂತ ಪತ್ತಾರ, ನಾರಾಯಣ ಪತ್ತಾರ, ಉಮೇಶ ಪಾಟೀಲ, ಬಾಳಪ್ಪ ಮಟಗಾರ, ಈರಣ್ಣ ಮುನ್ನೋಳಿಮಠ, ಅಶೋಕ ಆಡೆನ್ನವರ, ಶೀತಲ ಅಥಣಿ, ರಾಮಪ್ಪ ಬೆಳಕೂಡ, ಅಜೀತ ಚಿಕ್ಕೋಡಿ, ಶಿವಾಂದ ಹೆಬ್ಬಾಳ, ಸಿದ್ದಪ್ಪ ಮುಗಳಿ, ರಮೇಶ ಹೆಬ್ಬಾಳ, ಲಕ್ಷ್ಮಣ ಹುಕ್ಕೇರಿ ಹಾಗೂ ಕಲ್ಲೋಳಿ ಪಟ್ಟಣದ ಸಾರ್ವಜನಿಕರು ಮೇರವಣಿಗೆಯಲ್ಲಿ ಭಾಗವಹಿಸಿದರು.