“ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಅರ್ಹತೆ ಹೊಂದಿದೆ”: ಡಾ. ಗುರುಪಾದ ಮರಿಗುದ್ದಿ

Ravi Talawar
WhatsApp Group Join Now
Telegram Group Join Now

ಬೆಳಗಾವಿ,09: ನಮ್ಮ ದೇಶದಲ್ಲಿ ಜೈನ ಮತ್ತು ಬೌದ್ಧ ಧರ್ಮ ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲಾಗಿದೆ. ಅದರಂತೆ ಲಿಂಗಾಯತ ಧರ್ಮವೂ ಕೂಡಾ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆಯುವ ಎಲ್ಲಾ ಆಧಾರ ಸಹಿತವಾದ ಅರ್ಹತೆಗಳನ್ನು ಹೊಂದಿದೆ. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗುವದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ ಅವನ್ನು ಪರಿಹರಿಸಿಕೊಳ್ಳಬೇಕಾಗಿದೆ. ಕರ್ನಾಟಕ ಸರಕಾರ ಬಸವಣ್ಣನವರನ್ನು ” ಸಾಂಸ್ಕೃತಿಕ ನಾಯಕ ” ಎಂದು ಘೋಷಣೆ ಮಾಡಿದ್ದು ಸ್ತುತ್ಯಾರ್ಹ ಎಂದು ಡಾ. ಗುರುಪಾದ ಮರಿಗುದ್ದಿ

ಜಗತ್ತಿನಲ್ಲಿ ಯಾರಾದರೂ ಸಾಂಸ್ಕೃತಿಕ ನಾಯಕ ಅಂತಾ ಇದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಂಡಾಗ ಸಿಮಿತ ವಿಷಯಾಧಾರಿತ ಸಂಪಾದನೋತ್ಸವಗಳನ್ನು ಪರಿಗಣಿಸಿ ಸಾಂಸ್ಕೃತಿಕ ನಾಯಕ ಅಂತಾ ಕೆಲವರನ್ನು ಘೋಷಣೆ ಮಾಡಿದ್ದು ತಿಳಿದು ಬರುತ್ತದೆ.ಆದರೆ ಬಸವಣ್ಣನವರು ಮೇಲ್ವರ್ಗದ ಜನರಿಂದ ಕೆಳಸ್ಥರದ ಜನರ ಆತ್ಮೋದ್ಧಾರಕ್ಕೆ ಶ್ರಮಿಸಿ, ವರ್ಗರಹಿತ ವರ್ಣರಹಿತ ಸಮಾಜದ ನಿರ್ಮಾಣದ ರೂವಾರಗಳಾಗಿದ್ದರು.

ಅವರು ಸಾಮಾನ್ಯ ಜನರನ್ನು ಕೇಂದ್ರವಾಗಿ ಇಟ್ಟುಕೊಂಡು ತಮ್ಮ ಎಲ್ಲಾ ಚಿಂತನೆಗಳನ್ನು ನಡೆಸಿದರು. ಹಾಗಾಗಿ ಅದು ಜನಪರವಾದ ಕ್ರಾಂತಿಯಾಗಿತ್ತು.ಇತಿಹಾಸದಲ್ಲಿ ರಾಜ್ಯ ವಿಸ್ತಾರಕ್ಕೆ ಅಧಿಕಾರಕ್ಕಾಗಿ ಕೆಲವು ಹೋರಾಟಗಳು ನಡೆದಿವೆ.

ಆದರೆ ಬಸವಣ್ಣನವರು ಹಾಗೆ ಮಾಡಲಿಲ್ಲ. ಅಂತಾ ಇಂದಿಲ್ಲಿ ( ೮/೫/೨೦೨೪ ) ರಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಅವರು ಮಹಾಂತೇಶ ನಗರದ ಮಹಾಂತ ಭವನದಲ್ಲಿ ಆಯೋಜಿಸಿದ ಮಾಸಿಕ ಅನುಭಾವ ಗೋಷ್ಠಿ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ “ಬಸವಣ್ಣ ಸಾಂಸ್ಕೃತಿಕ ನಾಯಕ- ವಿವೇಚನೆ ಎಂಬ ವಿಷಯ ಕುರಿತು ಡಾ. ಗುರುಪಾದ ಮರಿಗುದ್ದಿ ನಿವೃತ್ತ ಕನ್ನಡ ಉಪನ್ಯಾಸಕರು ಸಂಕೇಶ್ವರ ಅವರು ಮೇಲಿನಂತೆ ಹೇಳಿದರು.

ಅದ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅದ್ಯಕ್ಷರಾದ ಬಸವರಾಜ ರೊಟ್ಟಿ ನ್ಯಾಯವಾದಿಗಳು ಇದೇ ತಿಂಗಳ ೧೭,೧೮,ಹಾಗೂ ೧೯ರಂದು ಜರುಗಲಿರುವ ಬಸವ ಜಯಂತಿಯ ಕಾರ್ಯಕ್ರಮದ ವಿವರ ಗಳನ್ನು ವಿವರಿಸಿದರು.

ಅಲ್ಲದೆ ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು. ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಯ ಹೋರಾಟ ನಿರಂತರವಾಗಿರುತ್ತದೆ ಅಂತಾ ಹೇಳಿದರು.

ಇಂದಿನ ಪ್ರಸಾದ ದಾಸೋಹಿಗಳಾದ ಶರಣೆ ಅನಸೂಯ ಮತ್ತು ಫಕೀರಗೌಡಾ ಪಾಟೀಲ ದಂಪತಿ ಷಟ್ ಸ್ಥಲ್ ಧ್ವಜಾರೋಹನ ನೆರವೇರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ ಅವರು ಸರ್ವರನ್ನು ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು.

ನಗರ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಬೂದಿಹಾಳ ಅವರು ಕಾರ್ಯಕ್ರಮ ನಿರೂಪಿಸಿದರು.ಶರಣ ಈರಣ್ಣ ಚಿನಗುಡಿ ಶರಣು ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸುಜಾತಾ ಮತ್ತಿಕಟ್ಟಿ,ರತ್ನಕ್ಕಾ ಬೆಣಚಮರ್ಡಿ,ಅನ್ನಪೂರ್ಣಾ ಮಳಗಲಿ,ಸುಧಾ ರೊಟ್ಟಿ,ಮಂಜುಳಾ,ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ,ಮುರಿಗೆಪ್ಪ ಬಾಳಿ,ಮೋಹನ ಗುಂಡ್ಲೂರ,ಮೋಹನ ಪಾಟೀಲ,ಗೌಡಪ್ಪನವರ, ಎಸ್ ಜಿ ಸಿದ್ನಾಳ,ಪ್ರೊ.ಎಸ್ ವಾಯ್ ಚೋಬಾರಿ,ಶಂಕರ ಶೆಟ್ಟಿ,ಸಂಕೇಶ್ವರ ವಕೀಲರು,ಕುಂದ್ರಾಳ ವಿ.ಎಸ್. ಡಾ. ಅಡಿವೇಶ ಇಟಗಿ. ಪ್ರದೀಪ ಚಿಕಲಿ ವಿವಿಧ ಬಡಾವಣೆಗಳ ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article