This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಡಾ. ಚವರದ ಅವರ ವೈದ್ಯಕೀಯ ಸೇವೆ ಶ್ಲಾಘನೀಯ : ವಿಜಯಾನಂದ ಶ್ರೀಗಳು


ನೇಸರಗಿ ನ., 10- ನೇಸರಗಿ ಭಾಗದ ಜನರಿಗೆ ಸರ್ಕಾರಿ ವೈದ್ಯ ರಾಗಿ ವೈದ್ಯಕೀಯ ಅತ್ಯುನ್ನತ ಸೇವೆಯನ್ನು ಸಲ್ಲಿಸಿ ಇಲ್ಲಿಂದ ಬೆಳಗಾವಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾಗಿ ಉನ್ನತ ಮಟ್ಟದ ಸೇವೆ ಸಲ್ಲಿಸಿ ನಿವೃತ್ತಿ ನಂತರ ನೇಸರಗಿ ಭಾಗದ ಜನರ ಪ್ರೀತಿ ವಿಶ್ವಾಸಕ್ಕೆ ಕಾರಣರಾಗಿ ಹಲವಾರು ವರ್ಷಗಳಿಂದ ಆಸ್ಪತ್ರೆ ತೆರೆದು ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಎಸ್ ಎಪ್.ಚವರದ ಅವರ ಕಾರ್ಯ ಶ್ಲಾಘನೀಯ ಎಂದು ಬೆವಿನಕೊಪ್ಪದ ಆನಂದ ಆಶ್ರಮದ ಶ್ರೀ ವಿಜಯಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಇಲ್ಲಿನ ಜುನ್ನೂರೇಶ್ವರ ಆಸ್ಪತ್ರೆಯಲ್ಲಿ ಆಪರೇಷನ್ ಥೇಟರ್,ಪ್ರಸೂತಿ ಗೃಹ,ಅಲ್ಟ್ರಾ ಸೋನೋಗ್ರಾಪಿ,ಎಕ್ಸರೇ ,ಇಸಿಜಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು.


ನೇಸರಗಿ ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಡಾ. ಚವರದ ಅವರ ವೈದ್ಯಕೀಯ ಸೇವೆ ಅತ್ಯುತ್ತಮವಾದದು ಈ ಭಾಗದ ಜನರಿಗೆ ಹೆಚ್ಚಿನ‌ ವೈದ್ಯಕೀಯ ಸೌಕರ್ಯ ಒದಗಿಸಲು ಎಲ್ಲ ರೀತಿಯ ಆರೋಗ್ಯ ಸವಲತ್ತುಗಳನ್ನು ಒದಗಿಸುತ್ತಿರು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ, ಶಂಕರ ತಿಗಡಿ,ಅಡಿವಪ್ಪ ಮಾಣ್ಣವರ,ಶೇಖರ ಕಾರಜೋಳ,ಮಹಾಂತೇಶ ಸತ್ತಿಗೇರಿ,ಬರಮಣ್ಣ ಸತ್ತೆಣವರ,ನಾಗರಾಜ ತುಭಾಕಿ,ಮಡಿವಾಳಯ್ಯ ಚರಂತಿಮಠ,ಮಲ್ಲಿಕಾರ್ಜುನ ಮುತವಾಡ,ಅಶೋಕ ಹತ್ತರಕಿ,ಮಲ್ಲಿಕಾರ್ಜುನ ಸೋಮಣ್ಣವರ,ಸುರೇಶ ಖಂಡ್ರಿ,ಡಾ.ಜಗದೀಶ ಗೆಜ್ಜಿ,ಡಾ ಕಾರಾಂವಿ,ಡಾ.ದೊಡಗಣವರ,ಶ್ರೀಮತಿ ಶೋಭಾ ಚವರದ,ಕಪೀಲ ಚವರದ,ಶೇಖರ ಕಾರಜೋಳ, ಬಸವರಾಜ ಚಿಕನಗೌಡ್ರ,ಮಂಜುನಾಥ ಹುಲಮನಿ,ಪರಸಪ್ಪ ಬೆಳವಡಿ,ಸೋಮಪ್ಪ ಹತ್ತರಗಿ,ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.


Leave a Reply