ಬೆಳಗಾವಿ ೧೮: ಬೆಳಗಾವಿಯ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಬೆಳಗಾವಿ ಜಿಲ್ಲಾಘಟಕದಆಶ್ರಯದಲ್ಲಿಅಮಾವಾಸ್ಯೆಅನುಭಾವಕಾರ್ಯಕ್ರಮಜರುಗಿತು.
ಬೆಳಗಾವಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಸ್ತರಣಕೇಂದ್ರದ ಭರತೇಶ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕಿಡಾಅನುಪಮಾಆನಂದ ಉತ್ನಾಳ ಅವರು ತಳಸ್ತರದ ವಚನ ಕಾರ್ತಿಯರ ವಚನಗಳಲ್ಲಿಯ ವಿವಿಧ ಪರಿಕಲ್ಪನೆಗಳ ಬಗೆಗೆ ಮಾತನಾಡುತ್ತ ಬಸವಾದಿ ಪ್ರಮಥರು ನೀಡಿದ ಪ್ರೋತ್ಸಾಹ ಮತ್ತು ಪ್ರೇರಣೆಯಕಾರಣದಿಂದಾಗಿ ತಳಸ್ತರದ ವಚನಕಾರ್ತಿಯರು ನಿರ್ಭಯ ನಿಸ್ಸಂಕೋಚದಿಂದತುಂಬ ಮುಕ್ತವಾಗಿ ಸಮಾಜ,ಕುಟುಂಬ ವ್ಯವಸ್ಥೆ,ಜಾತಿ ಪದ್ಧತಿ, ಲಿಂಗಭೇದ, ಕಾಯಕ,ಭಕ್ತಿ, ಇಷ್ಟಲಿಂಗ ಪೂಜೆ ಮುಂತಾದ ಪರಿಕಲ್ಪನೆಗಳಿಗೆ ಹೊಸ ಭಾಷ್ಯ ಬರೆದರು. ಅಂದಿನ ಸಮಾಜದಲ್ಲಿ ಪ್ರಚಲಿತದಲ್ಲಿದ್ದ ಅನೇಕ ಅನುಚಿತ ಆಚರಣೆಗಳನ್ನು ಖಂಡಿಸಿ ನಿಜವಾದ ಆಚರಣೆಗಳ ಸ್ವರೂಪವನ್ನು ಪರಿಚಯಿಸಿದರು. ತಳಸ್ತರದ ವಚನಕಾರ್ತಿಯರ ಅಸ್ಮಿತೆಯನ್ನು ಗೌರವಿಸಿದ ಬಸವಾದಿ ಶರಣರು ಜಗತ್ತಿನ ನಿಜವಾದ ಸ್ತ್ರೀಕುಲೋದ್ಧಾರಕರಾಗಿರುವರು ಎಂದು ತಿಳಿಸಿದರು.
ತಳಸ್ತರದ ವಚನಕಾರ್ತಿಯರ ಆಚರಣೆಗಳು ಎನ್ನುವ ವಿಷಯದ ಕುರಿತು ಅನುಭಾವ ನೀಡಿದ ಶ್ರೀ ಸಿದ್ಧರಾಮೇಶ್ವರ ಪದವಿಪೂರ್ವ ಮಹಾವಿದ್ಯಾಲಯದಇಂಗ್ಲಿಷ್ ಉಪನ್ಯಾಸಕ ಪ್ರೊ ವಿನಾಯಕ ನಂದಿ ಅವರು ಮೂಢನಂಬಿಕೆಗಳಿಂದ ಕೂಡಿದ ಧಾರ್ಮಿಕ ಆಚರಣೆಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ ತಳಸ್ತರದ ವಚನಕಾರ್ತಿಯರು ನಿಜವಾದ ಶೀಲವ್ರತ ನಿಯಮಉಪಾಸನೆಯ ಸ್ವರೂಪವನ್ನು ಪ್ರಾಯೋಗಿಕವಾಗಿ ವಿವರಿಸಿದರು, ದಟ್ಟ ವೈಚಾರಿಕತೆಯ ಹಿನ್ನೆಲೆಯನ್ನು ಹೊಂದಿದ ಇವರ ಪಕ್ವ ಮತ್ತು ಪ್ರಬುದ್ಧ ಅಭಿವ್ಯಕ್ತಿಯು ಕಣ್ತೆರೆಸುವಂತಿರುವದು ಆಶ್ಚರ್ಯಕರ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಬೆಳಗಾವಿ ಜಿಲ್ಲೆಯ ಅಧ್ಯಕ್ಷೆ ಶರಣೆ ರತ್ನಪ್ರಭಾ ಬೆಲ್ಲದ ಅವರು ಇಂದಿನ ಯುವಜನತೆ ಮತ್ತು ಮಕ್ಕಳಿಗೆ ನಮ್ಮ ಶರಣರ ವಚನಗಳಲ್ಲಿಯ ಅನುಕರಣಯೋಗ್ಯ ಮೌಲ್ಯಗಳ ಪರಿಚಯದ ಅವಶ್ಯಕತೆಯಿದೆ, ಅವರು ಅವುಗಳನ್ನು ಅರಿತು ಆಚರಣೆಗೆತರು ವಂತಾದರೆ ಕರ್ನಾಟಕವು ಮತ್ತೊಮ್ಮೆ ಕಲ್ಯಾಣ ರಾಜ್ಯವಾಗುವದರಲ್ಲಿ ಸಂಶಯವಿಲ್ಲ. ಇಂದು ಅನುಭಾವ ನೀಡಿದವರುಯುವ ಶಕ್ತಿಯ ಪ್ರತಿನಿಧಿಗಳಾಗಿದ್ದುದು ವಿಶೇಷ್. ವೀರಶೈವ ಲಿಂಗಾಯತ ಮಹಾಸಭೆಯಉದ್ದೇಶವೇಯುವ ಪೀಳಿಗೆಯನ್ನು ಕಲ್ಯಾಣರಾಜ್ಯ ಸ್ಥಾಪನೆಗೆ ಅಣಿಗೊಳಿಸುವದಾಗಿದೆ ಎಂದರು.
ಅಕ್ಕಮಹಾದೇವಿ ತೆಗ್ಗಿ ಹಾಗೂ ಉಮಾಚೋನ್ನದ ವಚನ ಪ್ರಾರ್ಥನೆಗೈದರು, ಮೇಘಾ ಪಾಟೀಲ ವಚನ ವಿಶ್ಲೇ?ಣೆ ಮಾಡಿದರೆ ಶೈಲಜಾ ಸಂಸುದ್ದಿ ಸ್ವಾಗತ ನೀಡಿ ಭಕ್ತಿಗೀತೆ ಹಾಡಿದರು. ಅನುಪಮಾ ದೊಡವಾಡ ಅತಿಥಿ ಪರಿಚಯ ಭಾರತಿ ರತ್ನಪ್ಪಗೊಳ ನಿರೂಪಣೆ ಮಾಡಿದರು. ಶರಣೆ ಸುಶೀಲಾ ನಂದೆಪ್ಪನವರದಾಸೋಹಗೈದರು. ಡಾಎಫ್.ವ್ಹಿ. ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ಅಶೋಕ್ ಹಾದಿಮನಿ ಮಹಾಂತೇಶ್ ಮೆಣಸಿನಕಾಯಿ, ವಿ. ಕೆ ಪಾಟೀಲ ಮುಂತಾದ ನೂರಾರು ಶರಣರು ಉಪಸ್ಥಿತರಿದ್ದರು.