This is the title of the web page
Left Banner (Left Skyscraper)
Right Banner (Right Skyscraper)

ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಸಬ್ಸಿಡಿ ಇಲ್ಲ : ಅಧಿಕೃತ ಘೋಷಣೆ

0 42

ನವದೆಹಲಿ ಜೂ., ೦೩- ಕೊರೊನಾ ಆರಂಭವಾದಾಗಿನಿಂದ ಗೃಹಬಳಕೆ ಎಲ್.ಪಿ.ಜಿ. ಸಿಲಿಂಡರಗಳ ಮೇಲೆ ಕೇಂದ್ರ ಸರಕಾರ ಸಬ್ಸಿಡಿ ಪಾವತಿಸಿರಲಿಲ್ಲ. ಈಗ ಸಾಮಾನ್ಯ ಗ್ರಾಹಕರು ಮಾರುಕಟ್ಟೆ ದರದಲ್ಲಿಯೇ ಅಡುಗೆ ಅನಿಲ ಖರೀದಿಸಬೇಕು. ಅದಕ್ಕೆ ಸಬ್ಸಿಡಿ ನೀಡುವುದಿಲ್ಲ ಎಂದು ಕೇಂದ್ರ ಸರಕಾರ ಅಧಿಕೃತವಾಗಿ ಘೋಷಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ ಚೌಧರಿ, ಕೊರೊನಾ ಸಂಕಷ್ಟ ಕಾಲ ಆರಂಭವಾದಾಗಿನಿಂದ ಎಲ್.ಪಿಜಿ. ಸಿಲಿಂಡರ್ ಬಳಕೆದಾರರಿಗೆ ಸಬ್ಸಿಡಿ ನೀಡಿಲ್ಲ. ಇನ್ನು ಮುಂದೆಯೂ ಕೂಡ ಸಬ್ಸಿಡಿ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜನಸಾಮಾನ್ಯರಿಗೆ ಶಾಕ್ ನೀಡಿದ್ದಾರೆ.
ಗೃಹ ಬಳಕೆ ಎಲ.ಪಿ.ಜಿ. ಸಿಲಿಂಡರ್ ಮೇಲಿನ ಸಬ್ಸಿಡಿಯು ಕೇವಲ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಮಾತ್ರ ನೀಡಲಾಗುತ್ತದೆ. ಉಳಿದ ಸಾಮಾನ್ಯ ಗ್ರಾಹಕರು ಎಲ್.ಪಿ.ಜಿ. ಸಿಲಿಂಡರನ್ನು ಮಾರುಕಟ್ಟೆ ದರಕ್ಕೆ ಖರೀದಿಸಬೇಕು. ಅವರಿಗೆ ಯಾವುದೇ ಸಬ್ಸಿಡಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಉಜ್ವಲ ಯೋಜನೆಯಡಿ ಎಲ್.ಪಿ.ಜಿ ಸಂಪರ್ಕ ಪಡೆದಿರು ೯ ಕೋಟಿ ಬಡ ಮಹಿಳೆಯರು ಮತ್ತು ಇತರೆ ಫಲಾನುಭವಿಗಳಿಗೆ ಕೇಂದ್ರ ಸರಕಾರವು ಎಲ್.ಪಿ.ಜಿ. ಸಬ್ಸಿಡಿಯನ್ನು ನಿರ್ಬಂಧಿಸಿದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ೨೦೦ ರೂಪಾಯಿ ಸಬ್ಸಿಡಿ ನೀಡಲಾಗುವುದು. ೨೦೨೦ರ ಜೂನ್ ನಿಂದ ಎಲ್.ಪಿ.ಜಿ. ಮೇಲೆ ಯಾವುದೇ ಸಬ್ಸಿಡಿ ಪಾವತಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

 

Leave a comment