This is the title of the web page
Left Banner (Left Skyscraper)
Right Banner (Right Skyscraper)

ತ್ವರಿತ ಪರಿಹಾರ ದೊರಕಿಸಿಕೊಡುವುದೇ ಗ್ರಾಮ ವಾಸ್ತವ್ಯದ ಉದ್ದೇಶ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ // ಸ್ಥಳದಲ್ಲೇ ವಿಧವಾ ವೇತನ, ಸ್ಮಶಾನ ಭೂಮಿ ಮಂಜೂರು

0 43

ಮೂಡಲಗಿ ಜೂ.18: ಎಲ್ಲ ಗ್ರಾಮದವರ ಜೊತೆ ಬೆರೆತು ಅವರ ಕುಂದುಕೊರತೆಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಅಲ್ಲೇ ತ್ವರಿತ ಪರಿಹಾರ ದೊರಕಿಸಿಕೊಡುವುದೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಹಾಗೂ ಗ್ರಾಮ ವಾಸ್ತವ್ಯದ ಪ್ರಮುಖ ಉದ್ದೇಶವಾಗಿದೆ. ಕಂದಾಯ ಇಲಾಖೆಯ ಈ ಮಹತ್ತರ ಯೋಜನೆಯನ್ನು ನೂತನ ಮೂಡಲಗಿ ತಾಲೂಕಿನ ಭೈರನಟ್ಟಿ ಗ್ರಾಮದಲ್ಲಿ ಮೊಟ್ಟಮೊದಲ ಬಾರಿಗೆ ಮಾಡುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು

 

ಶನಿವಾರದಂದು ತಾಲೂಕಿನ ಬೈರನಟ್ಟಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಉಚಿತವಾಗಿ ಕಣ್ಣಿನ ಪರೀಕ್ಷೆ, ಟಿಬಿ ತಪಾಸಣೆ, ಕರೋನ ಬೂಸ್ಟರ್ ಲಸಿಕೆ ಕೊಡುವುದರ ಜೊತೆಗೆ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಸೇವನೆಯ ಜಾಗೃತಿ ಮೂಡಿಸುವಂತಹ ಪೋಷಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಗ್ರಾಮಸ್ಥರು ಇದರ ಲಾಭವನ್ನು ಪಡೆಯಬೇಕೆಂದು ಹೇಳಿದರು.

ನಂತರ ಗ್ರಾಮಸ್ಥರ ಕುಂದುಕೊರತೆಗಳ 60 ಕ್ಕೂ ಹೆಚ್ಚು ಅರ್ಜಿ ಸ್ವೀಕರಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಬೈರನಟ್ಟಿ ಗ್ರಾಮದಲ್ಲಿ ಸ್ಮಶಾನಕ್ಕೆಂದು ಎರಡು ಎಕರೆ ಜಮೀನು, ವಿಧವಾ ವೇತನ, ಐದು ಏಕರೆಗಿಂತ ಕಡಿಮೆ ಜಮೀನು ಇರುವ ರೈತರಿಗೆ ಹನಿ ನೀರಾವರಿ ಸೌಲಭ್ಯ, ಮನೆ ಇಲ್ಲದ ಬಡವರಿಗೆ 1,20,000 ರೂಪಾಯಿ ಮಂಜೂರು ಮಾಡಿಸಿದ್ದಲ್ಲದೆ, 2012ನೇ ಇಸವಗಿಂತ ಮೊದಲಿಂದಲೂ, ಸರಕಾರಿ ಜಾಗೆಯಲ್ಲಿ ವಾಸಿಸುತ್ತಿರುವ ಬಡಜನರಿಗೆ, 94c ಅಂತಹ ಅರ್ಜಿ ಭರ್ತಿ ಮಾಡಿ ಅಕ್ರಮ ಸಕ್ರಮ ಯೋಜನೆ ಅಡಿ ಅದೇ ಸ್ಥಳದಲ್ಲಿ ಖಾಯಂ ನೆಲೆಸಲು ಮಂಜೂರು ಮಾಡಿಸಿ ಕೊಡುವುದಾಗಿ ಭರವಸೆ ಕೊಟ್ಟರು.

ನಂತರ ಪಿಡಿಒ ಹಾಗೂ ಗ್ರಾಮ ಪಂಚಾಯಿತಿಯವರನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಕಳೆದ 28 ವರ್ಷಗಳಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಬಳಸದೆ ಉಳಿದಿರುವ 23 ಎಕರೆ 8 ಗುಂಟೆ ಜಮೀನಿನಲ್ಲಿ , ಎರಡು ಎಕರೆ ಜಮೀನನ್ನು ಒಂದು ತಿಂಗಳೊಳಗಾಗಿ ಮನೆ ಇರದ ಬಡಜನರಿಗೆ ನಿವೇಶನ ಮಾಡಿ ಕೊಡಬೇಕು,ಇಲ್ಲದಿದ್ದರೆ ಕಂದಾಯ ಇಲಾಖೆ ಜಮೀನನ್ನು ವಾಪಸ್ ಪಡೆಯುತ್ತದೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ದೃಷ್ಟಿ ದೋಷ ಇರುವರಿಗೆ 120 ಕನ್ನಡಕ, ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು


ಈ ಸಂದರ್ಭದಲ್ಲಿ ಮೂಡಲಗಿ ತಹಸಿಲ್ದಾರ್ ಡಿ.ಜಿ ಮಹಾತ, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ದೊಡಮನಿ, ಉಪಾಧ್ಯಕ್ಷ ಜಗದೀಶ್ ಡೊಳ್ಳಿ, ಪಂಚಾಯತಿ ಸರ್ವ ಸದಸ್ಯರು ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

You might also like
Leave a comment