This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನೀಲಗುಂದ ಪ್ರಾಥಮಿಕ ಶಾಲೆಯ ಥ್ರೋಬಾಲ್ ಕ್ರೀಡಾಪಟುಗಳಿಗೆ ಶಾಸಕ ಜಿ.ಕರುಣಾಕರ ರೆಡ್ಡಿ ಟೀಶರ್ಟ್ ಸಮವಸ್ತ್ರ ವಿತರಣೆ


ಹರಪನಹಳ್ಳಿ:(ವಿಜಯನಗರ ಜಿಲ್ಲೆ):- ಬಾಲಕಿಯರ ಥ್ರೋ ಬಾಲ್ ವಿಭಾಗದಲ್ಲಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನೀಲಗುಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳಿಗೆ ಶಾಸಕ ಜಿ.ಕರುಣಾಕರ ರೆಡ್ಡಿಯವರು ಟೀಶರ್ಟ್ ಸಮವಸ್ತ್ರ ಕೊಡುಗೆ ನೀಡಿದ್ದಾರೆ.

ಶಾಸಕರ ಅನುಪಸ್ಥಿತಿಯಲ್ಲಿ ನೀಲಗುಂದ ಶಾಲೆಯ ಕ್ರೀಡಾಪಟುಗಳಿಗೆ ಬಿಜೆಪಿ ಮುಖಂಡರು ಟೀ ಶರ್ಟ್ ಸಮವಸ್ತ್ರವನ್ನು ವಿತರಣೆ ಮಾಡಿದ್ದಾರೆ.

ತಾಲೂಕಿನ ನೀಲಗುಂದ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಬಾಲಕಿಯರ ಥ್ರೋಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಜಿ ಕರುಣಾಕರ ರೆಡ್ಡಿಯವರು ಅಭಿನಂದನೆ ತಿಳಿಸಿ, ಗ್ರಾಮೀಣ ವಿದ್ಯಾರ್ಥಿನಿಯರಿಗೆ ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಹಾಗೂ ಕ್ರೀಡಾಪಟುಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಮನೋಭಾವನೆ ಹೊಂದಿರುವುದರಿಂದ, ಜಿಲ್ಲಾಮಟ್ಟದಲ್ಲಿ ಕ್ರೀಡಾ ಪಟುಗಳನ್ನು ಹುರಿದುಂಬಿಸಲು ಕ್ರೀಡಾಪಟುಗಳಿಗೆ ಟೀಶರ್ಟ್ ಸಮವಸ್ತ್ರ ಕೊಡುಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ನೀಲಗುಂದದ ಬಿಜೆಪಿ ಮುಖಂಡರುಗಳಾದ ಅಳವಂಡಿ ವಿಜಯಪ್ಪ, ಜಿಲ್ಲಾ ಎಸ್ಟಿ ಮೋರ್ಚಾ ಕಾರ್ಯದರ್ಶಿಯಾದ ಟಿ. ಮನೋಜ್ ಕುಮಾರ್, ಶ್ರೀಶೈಲಪ್ಪ, ಶಾನುಭೋಗರ ಕೊಟ್ರೇಶ್,

ರೆಡ್ಡಿ ಸಿದ್ದೇಶ್, ಎಂ ಚಿದಾನಂದ, ಗ್ರಾಮ ಪಂಚಾಯಿತಿ ಸದಸ್ಯ ಡಿ.ಸಂತೋಷ್, ಟಿ.ರಾಜಪ್ಪ, ಕೊಟ್ರೇಶ್, ಅಶೋಕ್, ಹನುಮಂತಪ್ಪ, ರಾಜಶೇಖರ್, ಸಿ.ಆರ್.ಪಿ ರವಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬುರುಡಿ ಶ್ರೀನಿವಾಸ್, ಶಾಲೆಯಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು


Leave a Reply