This is the title of the web page
Left Banner (Left Skyscraper)
Right Banner (Right Skyscraper)

ಸರ್ಕಾರಿ ನೌಕರರ ಕ್ರೀಡಾಕೂಟ; ಧಾರವಾಡ ಜಿಲ್ಲೆಗೆ 18ಕ್ಕೂ ಹೆಚ್ಚು ಬಹುಮಾನ

0 10

ಧಾರವಾಡ: ಪ್ರತಿ ವರ್ಷದಂತೆ ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸುವ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲೆಯ ಸರ್ಕಾರಿ ನೌಕರರು ವಿವಿಧ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ 18 ಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ರಿಯಾಶೀಲ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್.ಷಡಾಕ್ಷರಿ ಅವರ ನೇತೃತ್ವದಲ್ಲಿ ಎಲ್ಲ ಜಿಲ್ಲೆಯ ಸರ್ಕಾರಿ ನೌಕರರಿಗಾಗಿ ಬೆಂಗಳೂರಿನಲ್ಲಿ ಮೇ.30, 31 ಮತ್ತು ಜೂನ್ 1 ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲಾ ನೌಕರರು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ವಿಜೇತರ ವಿವರ (ವೈಯಕ್ತಿಕ ಸ್ಪರ್ಧೆಗಳು): ಔಷಧ ನಿಯಂತ್ರಣ ಇಲಾಖೆಯ ಭಾಗ್ಯಶ್ರೀ ಎಸ್. ಬಳಗಲಿ ಅವರು ಮಣಿಪುರಿ ನೃತ್ಯದಲ್ಲಿ ಪ್ರಥಮ ಸ್ಥಾನ, ಕಲಘಟಗಿ ತಾಲೂಕ ಪಂಚಾಯತಿಯ ರವೀಂದ್ರ ಆರ್. ಅಲ್ಲಾಪೂರ (ಗ್ರೀಕೂರೂಮನ್) 67 ಕೆ.ಜಿ. ಕುಸ್ತಿಯಲ್ಲಿ ಪ್ರಥಮ ಸ್ಥಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ನಾಗರಾಜ ಗಿಣಿವಾಲದ ಅವರು ಪಾಶ್ಚಿಮಾತ್ಯ ತಂತಿವಾದ್ಯದಲ್ಲಿ ಪ್ರಥಮಸ್ಥಾನ, ಅಬಕಾರಿ ಇಲಾಖೆಯ ಜಿ.ವಿ. ಆಲದಕಟ್ಟಿ ಅವರು ಪವರ್ ಲಿಪ್ಟಿಂಗ್ 120 ಕೆ.ಜಿ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ. 10 ನಿಮಿಷ ಕಾಲಾವಧಿಯ ಜಾನಪದ ಗೀತೆಯ ಸಮೂಹ ಗೀತಗಾಯನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾಶ ಕಂಬಳಿ, ಅಶೋಕ ಎನ್. ವಾಯ್, ಎನ್. ಆರ್. ಕಟ್ಟಮನಿ, ಪಿ.ಕೆ ಪಿಂಜಾರ, ವಿ.ಪಿ. ಬಡಿಗೇರ್, ಜಯಲಕ್ಷ್ಮೀ ಎಚ್., ವಿಜಯಲಕ್ಷ್ಮೀ ಕಮ್ಮಾರ, ನಿರ್ಮಲಾ ಕುಲಕರ್ಣಿ, ವಾಣಿಶ್ರೀ ಕುಲಕರ್ಣಿ, ಶಶಿಕಲಾ ನಾಯ್ಕರ್ ಅವರು ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಧಾರವಾಡ ಜಿಲ್ಲೆ ವತಿಯಿಂದ ಭಾಗವಹಿಸಿ ಅಮೋಘ ಸಾಧನೆಯನ್ನು ಮಾಡಿ ಪದಕಗಳನ್ನು ಪಡೆದು ಧಾರವಾಡ ಜಿಲ್ಲೆಯ ಕಿರ್ತಿಯನ್ನು ಹೆಚ್ಚಿಸಿದ ಎಲ್ಲಾ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧಾಳುಗಳಿಗೆ ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಸುಬ್ಬಾಪೂರಮಠ, ಗೌರವಾಧ್ಯಕ್ಷ ಆರ್.ಬಿ. ಲಿಂಗದಾಳ, ರಾಜ್ಯಪರಿಷತ್ ಸದಸ್ಯ ದೇವಿದಾಸ್ ಶಾಂತಿಕರ್, ಖಜಾಂಚಿ ರಾಜಶೇಖರ ಬಾಣದ ಸೇರಿದಂತೆ ಇತರ ಪದಾಧಿಕಾರಿ ಅಭಿನಂದಿಸಿದ್ದಾರೆ.

You might also like
Leave a comment