ಮೂಡಲಗಿ ಸ,24: ಮಹಾರಾಷ್ಟ ರಾಜ್ಯದ ಗಡಿ ಹಂಚಿಕೊಂಡ ಬೆಳಗಾವಿ ಜಿಲ್ಲೆಯ ತಾಲೂಕುಗಳ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಹರಡುತ್ತಿರುವ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದಲ್ಲಿ ನಡೆಯುವ ಜಾನುವಾರಗಳ ಸಂತೆ, ಜಾನುವಾಗಳ ಜಾತ್ರೆ ಹಾಗೂ ಸಾಗಾಣಿಕೆಯನ್ನು ಸೆ.16ರಿಂದ ಜಿಲ್ಲಾಧಿಕಾರಿಗಳ ಮುಂದಿನ ಆದೇಶದ ವರೆಗೂ ನಿಷೇಧವಿದೆ.
ಜಿಲ್ಲಾಧಿಕಾರಿಗಳ ಆದೇಶವಿದ್ದರೂ, ಅದನ್ನು ಗಾಳಿಗೆ ತೂರಿ, ಇವತ್ತು ರವಿವಾರ ದಿ.24 ರಂದು, ಮೂಡಲಗಿ ಪಟ್ಟಣದ ವಿದ್ಯಾನಗರದ ಜಾತಗಾರ್ ಪ್ಲಾಟ್ ನಲ್ಲಿ ಮಾತ್ರ ದನಗಳ ಸಂತೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಹೀಗಿದ್ದರೂ ಕೂಡ ತಾಲೂಕು ಆಡಳಿತ ಮಾತ್ರ ಗಾಢ ನಿದ್ರೆಯಲ್ಲಿದ್ದು, ಜಾಣ ಕುರುಡನಂತೆ ವರ್ತಿಸುತ್ತಿರುವುದು ಖೇದದ ಸಂಗತಿಯಾಗಿದೆ. ತಡವಾಗಿ ವಿಷಯ ತಿಳಿದ ನಂತರ ಪೊಲೀಸ್ ಸಿಬ್ಬಂದಿ ಬಂದು ಸಂತೆ ಚದುರಿಸುವ ಘಟನೆ ಕೂಡ ನಡೆಯಿತು.