238 ಬಾರಿ ಸೋತರೂ ಮತ್ತೆ ಚುನಾವಣಾ ಕಣದ ಹುರಿಯಾಳು: ಸೋಲಿನ ಸರದಾರನ ಉದ್ದೇಶವೇನು?

Ravi Talawar
WhatsApp Group Join Now
Telegram Group Join Now

ಮೆಟ್ಟೂರು,ಮಾ28: ಚುನಾವಣೆಗೆ ನಿಲ್ಲಬೇಕು, ಜನಪ್ರತಿನಿಧಿಯಾಗಬೇಕು ಎಂಬ ಉದ್ದೇಶದಲ್ಲಿ ಹಲವರು ಹಲವು ರೀತಿಯ ಪ್ರಯತ್ನ ಮಾಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಸಂಸದನಾಗಬೇಕು ಉದ್ದೇಶದಿಂದ ಇಲ್ಲಿಯವರೆಗೂ ಸುಮಾರು 238 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತ್ತೆ ಈ ಬಾರಿಯೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಕೆ. ಪದ್ಮರಾಜನ್, ತಮಿಳುನಾಡಿನ ಮೆಟ್ಟೂರು ನಗರದ ನಿವಾಸಿ. ಪದ್ಮರಾಜನ್ ಅವರಿಗೆ ಈಗ 65 ವರ್ಷ ವಯಸ್ಸು1988ರಿಂದಲೇ ಇವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಸಣ್ಣದೊಂದು ಪಂಚರ್ ಅಂಗಡಿ ಇಟ್ಟುಕೊಂಡಿರುವ ಕೆ. ಪದ್ಮರಾಜನ್, ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವ ಮೂಲಕವೇ ಹೊಸ ದಾಖಲೆ ಬರೆದಿದ್ದಾರೆ.

ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸೋದು, ಸೋಲೋದು, ಠೇವಣಿ ಸಹಿತ ಕಳೆದುಕೊಳ್ಳೋದು. ಹೀಗೆ ಸುಮಾರು 35 ವರ್ಷಗಳಿಂದಲೂ ಈ ಸೋಲಿನ ಸರಮಾಲೆ ಮುಂದುವರೆದಿದೆ. ಮೊದ ಮೊದಲು ಕೆ. ಪದ್ಮರಾಜನ್ ಅವರ ಈ ಪರಿಪಾಠ ಕಂಡು ಜನರು ಇದೆಂಥಾ ಹುಚ್ಚಾಟ ಎಂದು ಮೂಗು ಮುರಿದರು, ಆಡಿಕೊಂಡರು, ಲೇವಡಿ ಮಾಡಿ ನಕ್ಕರು.. ಆದರೆ, ಈಗೀಗ ಜನರಿಗೂ ಇದು ಮಾಮೂಲಾಗಿದೆ.

WhatsApp Group Join Now
Telegram Group Join Now
Share This Article