ಬೆಳೆಹಾನಿ ಪರಿಹಾರ ರೈತರ ಖಾತೆಗೆ ಜಮಾ

Abushama Hawaldar
WhatsApp Group Join Now
Telegram Group Join Now

ಇಂಡಿ : ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ಅರ್ಹತೆಯಂತೆ ಬೆಳೆ ಹಾನಿ ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ಸರಕಾರದಿಂದ ಡಿಬಿಟಿ ಮೂಲಕ ಹಣ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.
ರೈತರು ತಮ್ಮ ಖಾತೆಗೆ ಜಮಾ ಆಗಿರುವ ಹಣದ ಕುರಿತು ಪರಿಶೀಲಿಕೊಂಡು ಬೆಳೆ ಹಾನಿ ಪರಿಹಾರ ಜಮಾ ಅಗದೇ ಇದ್ದ ಸಂದರ್ಭದಲ್ಲಿ ೦೮೩೫೯ ೨೨೫೦೨೦, ೦೮೩೫೯ ೨೨೫೦೦೩ ಗೆ ಸಂಪರ್ಕಿಸಲು ಗದ್ಯಾಳ ತಿಳಿಸಿದ್ದಾರೆ.
ಅದಲ್ಲದೆ ರೈತರಿಗೆ ಪರಿಹಾರ ಬರದಿದ್ದರೆ ರೈತರು ತಮ್ಮ ಖಾತೆಗೆ ಆಧಾರ ಲಿಂಕ ಮತ್ತು ಇಕೆವೈಸಿ ಮಾಡಿಸಬೇಕು. ಅದಲ್ಲದೆ ರೈತರು ಎಫ್‌ಐಡಿ ಮತ್ತು ಎನ್‌ಪಿಸಿಐ ಮಾಡಿಸಿರಬೇಕು. ಅದಲ್ಲದೆ ರೈತರು ಬ್ಯಾಂಕಿಗೆ ಹೋಗಿ ಅಕೌಂಟ್ ರಿ ಒಪನ್ ಪಾಡಿಸಬೇಕು. ಪ್ರುಟ್ ತಂತ್ರಾAಶದಲ್ಲಿ ಹೆಸರು ಅಪ್ಲೆಡ್ ಆಗಿರಬೇಕು. ಸದರಿ ಫಲಾನುಭವಿಗಳು ಬ್ಯಾಂಕಿಗೆ ಹೋಗಿ ಎನ್.ಪಿ.ಸಿ ಐ ಮಾಡಿಸಬೇಕೆಂದು ಗದ್ಯಾಳ ತಿಳಿಸಿದ್ದಾರೆ.
ಇಂಡಿ ತಾಲೂಕಿನ ೪೨೩೨೦ ರೈತರಿಗೆ ೬೪ ಕೋಟಿ ೭೧ ಲಕ್ಷ ೯೬,೭೯೫ ರೂ ಹಣ ಬಿಡುಗಡೆಯಾಗಿದೆ ಎಂದರು.

WhatsApp Group Join Now
Telegram Group Join Now
Share This Article