ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅಬ್ಬರದ ಪ್ರಚಾರ 

Ravi Talawar
WhatsApp Group Join Now
Telegram Group Join Now
ಹರಪನಹಳ್ಳಿ, 15:ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರು ಮತ್ತು ಹರಪನಹಳ್ಳಿ ತಾಲೂಕು ಪಕ್ಷೇತರ ಅಭ್ಯರ್ಥಿ  ಎಂಪಿ ಲತಾ ಮಲ್ಲಿಕಾರ್ಜುನ್ ರವರು ದುಗ್ಗವತಿ ಕಡತಿ ನಿಟ್ಟೂರು ಹಲುವಾಗಲು ಕುಂಚೂರು ಕೆ ಕಲ್ಲಹಳ್ಳಿ ನೀಲಗುಂದ ಚಿರೆಸ್ತಹಳ್ಳಿ ಗುಂಡಗತ್ತಿ ಯಡಿಹಳ್ಳಿ ತೆಲಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ಮಾಡಿದರು.
ಈದೆ ವೇಳೆ ಚುನಾವಣಾ ಅಭ್ಯರ್ಥಿಯಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರು ಮಾತನಾಡಿ ನಮ್ಮ ರಾಜ್ಯ ಕಾಂಗ್ರೆಸ್ ಪಕ್ಷದ ೫ ಗ್ಯಾರಂಟಿ ಯೋಜನೆಗಳನ್ನು ೧೦ ತಿಂಗಳಲ್ಲಿ ಜಾರಿಗೆ ತಂದಿದ್ದಾರೆ ನುಡಿದಂತೆ ನಡೆಯುತ್ತಿದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಪ್ರತಿಯೊಬ್ಬ ಮಹಿಳೆಗೆ ೧ ಲಕ್ಷ ರೂಪಾಯಿ
೨೫ ವರ್ಷದೋಳಗಿನ ಯುವಕರಿಗೆ ನಮ್ಮ ರಾಜ್ಯ ಸರ್ಕಾರದಿಂದ ಯುವ ನಿಧಿ ಯೋಜನೆಯಲ್ಲಿ ೩ ಸಾವಿರದಿಂದ ದಿಂದ ೧೫ ನೂರು ರೂಪಾಯಿಗಳು ನಮ್ಮ ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಅದೇ ರೀತಿ ಕೇಂದ್ರ ದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಯುವಕರಿಗೆ ೧ ಲಕ್ಷ ರೂಪಾಯಿ ಹಾಗೂ ರೈತರ ಸಾಲ ಮನ್ನಾ ಮಾಡುತ್ತೇವೆ
ಈ ಹಿಂದೆ ಕೇಂದ್ರದಲ್ಲಿ ಮನುಮೋಹನ್ ಸಿಂಗ್ ಪ್ರಧಾನ ಮಂತ್ರಿ ಯಾದಾಗ ೭೨ ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ ಆದರೆ ಮೋದಿ ಯವರು ಬಂದು  ೧೦ ವರ್ಷ ಯಾವುದೇ ರೀತಿ ರೈತರ ಸಾಲ ಮನ್ನಾವಾಗಿಲ್ಲ.
ನನ್ನನ್ನು ಗೆಲ್ಲಿಸಿದರೆ ಹರಪನಹಳ್ಳಿ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಆರೋಗ್ಯ ಶಿಕ್ಷಣ ಇದರ ಜೊತೆಗೆ ನೀರಾವರಿ ಎಲ್ಲದರಲ್ಲೂ ಒತ್ತು ಕೊಟ್ಟು ಆ ಬಾಗದ ಎಂ ಎಲ್ ಎ ಮತ್ತು ಉಸ್ತುವಾರಿ ಸಚಿವರ ಜೊತೆ ಕೈಜೋಡಿಸಿಕೊಂಡು ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ
ಮಹಿಳೆಯರಿಗೆ ಗಾರ್ಮೆಂಟ್ ಫ್ಯಾಕ್ಟರಿ ಕರಕುಶಲತೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಹೊತ್ತು ಕೊಡುತ್ತೇನೆ ಈ ಭಾಗದ ಯುವಕರಿಗೆ ಡಿಗ್ರಿ ಮುಗಿದ ನಂತರ ಮುಂದೇನು ಎನ್ನುವ ಯಕ್ಷ ಪ್ರಶ್ನೆಯಾಗಿದೆ ಅದಕ್ಕಾಗಿ ಐಟಿ ಬಿಟಿ ಕಂಪನಿಯನ್ನು ಸ್ಥಾಪನೆ ಮಾಡುತ್ತೇವೆ ಅದಕ್ಕಾಗಿ ತಾವುಗಳು ಹಸ್ತದ ಗುರುತಿಗೆ ಮತನೀಡಿ ನನ್ನನ್ನು ಗೆಲ್ಲಿಸಬೇಕಿದೆ ಎಂದರು.
ಪಕ್ಷೇತರ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ಮಾತನಾಡಿ ಇತಿಹಾಸದಲ್ಲಿ ನೆನಪು ಇಡುವಂತಹ ಹಿಂದೆ ನಡೆದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತನೀಡಿ ನನ್ನನ್ನು ಗೆಲ್ಲಿಸಿದ್ದೀರಿ ಅದೇ ರೀತಿ ದಾವಣಗೇರಿ ಲೋಕಸಭಾ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ರವರನ್ನು ಗೆಲ್ಲಿಸಿ ದೆಹಲಿ ಸಂಸತ್ತಿಗೆ ಆರಿಸಿ ಕಳಿಸಿಕೊಡಬೇಕಾಗಿ ನಮ್ಮ ತಾಲೂಕಿನ  ಮತಬಾಂಧವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ
ಈಗಾಗಲೇ ನಮ್ಮಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇವೆ ಹರಪನಹಳ್ಳಿಗೆ ಬಂದ ಅನುದಾನದಲ್ಲಿ ಈ ಭಾಗದ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಸಿಸಿ ರೋಡ್ ಬಾಕ್ಸ್ ಚರಂಡಿ ಕುಡಿಯುವ ನೀರಿಗೆ ಅನುದಾನವನ್ನು ನೀಡಿದ್ದೀರಿ ಮತ್ತು ಮುಂದಿನ ೪ ವರ್ಷ ಅವಧಿ ಒಳಗೆ ಇನ್ನು ಹೆಚ್ಚಿನ ಅನುದಾನವನ್ನು ಈ ಭಾಗದ ಗ್ರಾಮ ಗಳಿಗೆ ಅನುದಾನವನ್ನು ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ.ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ.ಅಲಿಗಿಲಿವಾಡ ವಿಶ್ವನಾಥ. ಎಸ್ ಏನ್ ಸತೀಶ್ ಕುಮಾರ್.ಮತ್ತೂರ್ ಬಸವರಾಜ್. ವೆಂಕಟೇಶ್ ವಕೀಲರು. ಕೋಡಿಹಳ್ಳಿ ಭೀಮಪ್ಪ. ಸಿದ್ದಲಿಂಗ ಗೌಡ್ರು ವಕೀಲರು ಮುತ್ತಣ್ಣ . ಎಲ್ ಎಂ ಮಂಜನಾಯ್ಕ್ ಇತರರು ಭಾಗವಹಿಸಿದ್ದರು

WhatsApp Group Join Now
Telegram Group Join Now
Share This Article