ಚುನಾವಣಾ ಆಯೋಗದ ಎದುರು 55 ದಿನಗಳ ಉಪವಾಸ ಸತ್ಯಾಗ್ರಹ: ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ

Ravi Talawar
WhatsApp Group Join Now
Telegram Group Join Now

ಕೋಲ್ಕತ್ತ,ಏಪ್ರಿಲ್ 15:  ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ಎದುರು 55 ದಿನಗಳ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಆಯೋಗದ ಅಧಿಕಾರಿಗಳ ವಿರುದ್ಧ ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿ ಪರ ಪಕ್ಷಪಾತ ಮಾಡಿರುವ ಆರೋಪವನ್ನು ಮಾಡಿದ್ದಾರೆ. ರಾಜ್ಯದಲ್ಲಿ ಒಂದೇ ಒಂದು ಕೋಮುಗಲಭೆ ನಡೆದರೂ ಆಯೋಗದ ಕಚೇರಿ ಎದುರು 55 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಬಿಜೆಪಿ ಆಣತಿಯಂತೆ ಚುನಾವಣಾ ಆಯೋಗ ಮುರ್ಶಿದಾಬಾದ್ ನ ಡಿಐಜಿಯನ್ನು ತೆಗೆದುಹಾಕಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬಿಜೆಪಿಯ ಸೂಚನೆ ಮೇರೆಗೆ ಮುರ್ಷಿದಾಬಾದ್‌ನ ಡಿಐಜಿಯನ್ನು ಬದಲಾಯಿಸಲಾಗಿದೆ. ಈಗ ಮುರ್ಷಿದಾಬಾದ್ ಮತ್ತು ಮಾಲ್ಡಾದಲ್ಲಿ ಗಲಭೆಗಳು ನಡೆದರೆ ಅದರ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿರುತ್ತದೆ, ಗಲಭೆ ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಲು ಬಿಜೆಪಿ ಬಯಸಿದೆ.

ಒಂದು ವೇಳೆ ಗಲಭೆ ನಡೆದರೆ, ಇಸಿಐ ಜವಾಬ್ದಾರರಾಗಿರುತ್ತಾರೆ ಏಕೆಂದರೆ ಅವರು ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ, ”ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಗತ್ಯವಿದ್ದರೆ 55 ದಿನಗಳ ಕಾಲ ಇಸಿ ಕಚೇರಿಯ ಹೊರಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

“ನಾನು 26 ದಿನಗಳ ಕಾಲ ರೈತರಿಗಾಗಿ ಉಪವಾಸ ಮಾಡಬಹುದಾದರೆ (ಸಿಂಗೂರಿನಲ್ಲಿ ಭೂಸ್ವಾಧೀನ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ), ನಾನು ನಿಮ್ಮ ಕಚೇರಿಯ ಹೊರಗೆ 55 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಬಹುದು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದೇ ವೇಳೆ, ಕೂಚ್ ಬೆಹಾರ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ನಾಯಕರು ಬಳಸುತ್ತಿದ್ದ ಚಾಪರ್ ಅನ್ನು ಪರಿಶೀಲಿಸಲು ಬ್ಯಾನರ್ಜಿ ಆದಾಯ ತೆರಿಗೆ ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ. ಇದಕ್ಕೂ ಮುನ್ನ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಬಳಸುತ್ತಿದ್ದ ಹೆಲಿಕಾಫ್ಟರ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು.

WhatsApp Group Join Now
Telegram Group Join Now
Share This Article