ಮಸೀದಿ  ಕಮಿಟಿ ರಚನೆ ವಿಚಾರವಾಗಿ ಪೊಲೀಸ್ ಠಾಣೆ ಆವರಣದಲ್ಲೇ 2 ಗುಂಪುಗಳ ನಡುವೆ ಗಲಾಟೆ

Ravi Talawar
WhatsApp Group Join Now
Telegram Group Join Now

ಕೊಪ್ಪಳ, ಮೇ 11: ಮಸೀದಿ  ಕಮಿಟಿ ರಚನೆ ವಿಚಾರವಾಗಿ ಪೊಲೀಸ್ ಠಾಣೆ ಆವರಣದಲ್ಲೇ 2 ಗುಂಪುಗಳ ನಡುವೆ ಗಲಾಟೆ ನಡೆದಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದಿದೆ.

ಕಿಲ್ಲಾ ಏರಿಯಾದ ಮರ್ಕಾಸ್ ಮಸೀದಿ ಕಮಿಟಿ ರಚನೆ ವಿಚಾರವಾಗಿ ಮುಸ್ಲಿಂ  ಸಮುದಾಯದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಪೊಲೀಸ್ ಠಾಣೆ ಆವರಣದಲ್ಲಿ ಗಲಾಟೆ ಕಂಡು ಜನರು ಆತಂಕಗೊಂಡರು. ಗಲಾಟೆ ಮಾಡಿಕೊಂಡವರನ್ನು ಗಂಗಾವತಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

WhatsApp Group Join Now
Telegram Group Join Now
Share This Article