ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಕಚೇರಿಗೆ ಬಾಂಬ್​ ಬೆದರಿಕೆ!

Ravi Talawar
WhatsApp Group Join Now
Telegram Group Join Now

ಮಂಗಳೂರು, ಮೇ 04: ಬೆಂಗಳೂರಿನ  ಶಾಲೆಗಳಿಗೆ ಬಂದಿದ್ದ ಬಾಂಬ್​ ಬೆದರಿಕೆ ಕರೆ ಜನಮನದಿಂದ ಮಾಸುವ ಮುನ್ನವೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಕಚೇರಿಗೆ ಇ-ಮೇಲ್​ ಮೂಲಕ ಬಾಂಬ್​ ಬೆದರಿಕೆ ಸಂದೇಶಬಂದಿದೆ.

ಉಗ್ರರ ಹೆಸರಲ್ಲಿ ಇ-ಮೇಲ್ ಬಂದಿದ್ದು, ” ವಿಮಾನ ನಿಲ್ದಾಣದ ಆವರಣದಲ್ಲಿ​​​ ಆವರಣದಲ್ಲಿ ಸ್ಫೋಟಕಗಳನ್ನ ಇಡಲಾಗಿದೆ. ಮೂರು ವಿಮಾನದಲ್ಲಿಯೂ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ದೊಡ್ಡಮಟ್ಟದ ರಕ್ತಪಾತ ನಡೆಯಲಿದೆ.

ಈ ಕೃತ್ಯದ ಹಿಂದೆ ಟೆರರೈಸರ್ಸ್ 111 ಕೈವಾಡವಿದೆ” ಎಂದು ಏಪ್ರಿಲ್​ 29 ರಂದು ಬೆದರಿಕೆ ಕರೆ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಜ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

WhatsApp Group Join Now
Telegram Group Join Now
Share This Article