This is the title of the web page
Left Banner (Left Skyscraper)
Right Banner (Right Skyscraper)

ಹಣ್ಣು ಹಂಪಲು ವಿತರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ

ಆರೋಗ್ಯವೇ ಭಾಗ್ಯವೆಂದ ಹೊಳೆಪ್ಪ ಶಿವಾಪೂರ.

0 115

ಮೂಡಲಗಿ ಜೂ.17: ಪ್ರಪಂಚದಲ್ಲಿನ ಎಲ್ಲ ಸಿರಿ ಸಂಪತ್ತಿಗಿಂತ ಆಯೋಗ್ಯ ಸಂಪತ್ತು ಮಿಗಿಲಾದದ್ದು, ಆರೋಗ್ಯ ಭಾಗ್ಯವಿದ್ದರೆ ನಾವು ಏನೆಲ್ಲ ಗಳಿಸಬಹುದಾಗಿದೆ, ಪ್ರತಿಯೊಬ್ಬರು ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು, ಪಂಚಮಸಾಲಿ ಹಾಗೂ ಕಾಂಗ್ರೆಸ್ ಮುಖಂಡರಾದ ಹೊಳೆಪ್ಪ ಶಿವಾಪೂರ ಹೇಳಿದರು.
ಅವರು ಶುಕ್ರವಾರದಂದು ಪಟ್ಟಣದ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಮ್ಮ 39ನೇ ಹುಟ್ಟುಹಬ್ಬವನ್ನು ರೋಗಿಗಳಿಗೆ ಬಿಸ್ಕಿಟ್,ಹಣ್ಣು ಹಂಪಲು ಹಾಗೂ ನೀರಿನ ಬಾಟಲ್ ವಿತರಿಸುವ ಮೂಲಕ ಸರಳ ರೀತಿಯಲ್ಲಿ ಆಚರಿಸಿದರು.
ಈ ಸಂಧರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಡಾ.ಶಿವಲಿಂಗ ಪಾಟೀಲ್, ಪರಸು ಬಾಳಿಗೇರಿ, ಪ್ರವೀಣ ಕಂಕಣವಾಡಿ, ಹನಮಂತ ಹಳಶಿ, ಚನ್ನಬಸು ನಿಡಗುಂದಿ, ಲಕ್ಕಪ್ಪ ಛಬ್ಬಿ, ಸುಭಾಸ ಲೋಕನ್ನವರ, ಅರ್ಜುನ್ ಭಂಗಿ ಸೇರಿದಂತೆ ಅನೇಕ ಹಿತೈಷಿಗಳು ಉಪಸ್ಥಿತರಿದ್ದರು.

You might also like
Leave a comment