This is the title of the web page
Left Banner (Left Skyscraper)
Right Banner (Right Skyscraper)

ಬಿಜೆಪಿ ಅಭ್ಯರ್ಥಿಗಳಿಗೆ ಅಮೋಘ ಜಯ: ದೊಡ್ಡಗೌಡರ

0 36

ನೇಸರಗಿ ಜೂ.೧೪-  ಪ್ರಧಾನಿ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಅಟ್ಟುಕಟ್ಟಾದ ಆಡಳಿತ ವ್ಯವಸ್ಥೆ ಮನಗಂಡು ಜ್ಞಾನವಂತ ಶಿಕ್ಷಕ ಹಾಗೂ ಪದವೀಧರ ಮತದಾರರು ಬಿಜೆಪಿ ಅಭ್ಯರ್ಥಿಗಳಾದ ಹನಮಂತ ನಿರಾಣಿ,ಅರುಣ ಶಹಾಪೂರ ಅವರನ್ನು ಬೆಂಬಲಿಸಿ ಅಮೋಘ ಜಯ ತಂದುಕೊಡಲಿದ್ದಾರೆಂದು ಚ.ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.

    ಅವರು ನೇಸರಗಿ ಗ್ರಾಮದ ಸರ್ಕಾರಿ ಕುವೆಂಪು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಸಕರು ತಮ್ಮ ಪತ್ನಿ ಶ್ರೀಮತಿ ಮಂಜುಳಾ ದೊಡ್ಡಗೌಡರ ಸಮೇತವಾಗಿ ತಮ್ಮ ಮತ ಚಲಾಯಿಸಿ ಮಾತನಾಡಿದರು.
   ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ ಎಪ್ ಕೊಳದೂರ, ಅಡಿವಪ್ಪ ಮಾಳಣ್ಣವರ.ಎಸ್ ಎಂ ಪಾಟೀಲ  ,ಮಹಾಂತೇಶ ಕೂಲಿನವರ, ಶ್ರೀಶೈಲ ಕಮತಗಿ, ಶಿವನಗೌಡ ಚೋಭಾರಿ,    ಅಡಿವಪ್ಪ ಚಿಗರಿ,ಸೋಮಶೇಖರ ಮಾಳಣ್ಣವರ,ಬಸವರಾಜ ತುಬಾಕಿ,ಬಸವಂತ ಸೋಮಣ್ಣವರ,ದೇಮಣ್ಣ ಗುಜನಟ್ಟಿ, ಬಾಳೇಶ ಗುಜನಟ್ಟಿ ಸೇರಿದಂತೆ ಬಾಜಪಾ ಕಾರ್ಯಕರ್ತರು ಪಾಲ್ಗೊಂಡಿದ್ದರು.
You might also like
Leave a comment