ರಾಯಬಾಗ: ತಾಲೂಕಿನ ಭೆಂಡವಾಡ ಗ್ರಾಮ ಪಂಚಾಯತಿ ೨ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಹಾದೇವ ಭೀಮಪ್ಪ ಲಕ್ಷ್ಮೇಶ್ವರ (ಸಾಮಾನ್ಯ) ಹಾಗೂ ಉಪಾಧ್ಯಕ್ಷರಾಗಿ ರೇಣುಕಾ ಪಾವಾಡಿ ಗಾಯಕವಾಡ (ಎಸ್ಸಿ ಮಹಿಳೆ) ಆಯ್ಕೆಯಾದರು.
ಚುನಾವಣಾಧಿಕಾರಿಗಳಾಗಿ ಕಂಕಣವಾಡಿ ಜೆಎಲ್ಬಿಸಿ ಎಇಇ ಶೇಖರ ರಾಠೋಡ ಕಾರ್ಯನಿರ್ವಹಿಸಿದರು. ಚುನಾವಣೆ ಪ್ರಕ್ರಿಯೆ ಶಾಂತ ರೀತಿಯಿಂದ ನಡೆಯಿತು. ಸಿಪಿಐ ಎಚ್.ಡಿ.ಮುಲ್ಲಾ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.
ಪಿಡಿಒ ಕೆ.ಆರ್.ಶಿರಗೊಂಡ, ಅಪ್ಪು ಬಾನೆ, ಸುರೇಶ ಚೌಗಲಾ, ಸಂಗಪ್ಪ ಬೆನ್ನಾಳೆ, ರೇವಣು ಧುಪದುಳೆ, ವಿ.ಎಸ್.ಪೂಜಾರಿ, ಅಲಗೊಂಡ ತಟ್ಟಿಮನಿ, ರೇವಣು ಶಿವಾಪೂರೆ, ಉದಯ ರೆಡ್ಡಿ, ಆರ್.ಜಿ.ಪೂಜಾರಿ, ಉಮೇಶ ಪೂಜಾರಿ, ಸಂತೋಷ ಮಾಳಿ ಸೇರಿದಂತೆ ಅನೇಕರು ಇದ್ದರು.