This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಭಾರತ್ ಜೋಡೋ ಯಾತ್ರೆ ದಾಖಲೆಯ  ಸಭೆ ಆಗಬೇಕು: ಎಂ.ಬಿ.ಪಾಟೀಲ್


ಬಳ್ಳಾರಿ, ಸೆ.೨೮: ನಗರದ ರಾಯಲ್ ಪೋರ್ಟ್ ಹೊಟೇಲ್ ನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಭಾರತ್ ಜೋಡೋ ಯಾತ್ರೆಯ ಬಹಿರಂಗ ಸಭೆಯ ಕುರಿತು ಸ್ಥಳೀಯ ಮುಖಂಡರು, ಉಪಸಮಿತಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆ ನಡೆಸಿದರು.
ಅ ೧೯ ರಂದು ನಗರದಲ್ಲಿ ಹಮ್ಮಿಕೊಂಡಿರುವ ರಾಹುಲ್ ಗಾಂಧಿ ಅವರ ನೇತೃತ್ವದ ಬಹಿರಂಗ ಸಭೆ ೨೦೧೧ ರಲ್ಲಿ ನಡೆದ ಪಾದಯಾತ್ರೆಯ ಯಶಸ್ವಿಗಿಂತಲೂ ಹೆಚ್ಚಾಗಿ ಜನ ಸೇರಿ ಒಂದು ದಾಖಲೆಯ ಸಭೆ ಆಗಬೇಕು. ಅದಕ್ಕೆ ಪಕ್ಷದ  ಎಲ್ಲಾ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಶ್ರಮಿಸಬೇಕಿದೆ.
ದೇಶದಲ್ಲಿ ಜಾತಿ ಧರ್ಮದ ವಿಷ ಬೀಜ ಬಿತ್ತುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಜನತೆಗೆ ಕರೆ ನೀಡಬೇಕಿದೆಂದರು.
ಸಭೆಯ ಈ ವರೆಗಿನ  ಸಿದ್ದತೆಗಳ ಕುರಿತು ಗ್ರಾಮೀಣ ಶಾಸಕ ಬಿ.ನಾಗೇಂದ್ರ ವಿವರಿಸಿದರು. ಮುಖಂಡರಾದ ಅಲ್ಲಂ ವೀರಭದ್ರಪ್ಪ, ವಿ.ಎಸ್.ಉಗ್ರಪ್ಪ, ಶಾಸಕ ರಾಘವೇಂದ್ರ ಹಿಟ್ನಾಳ್, ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಚಂದ್ರಶೇಖರಯ್ಯ, ಕೆಪಿಸಿಸಿ ಕಾರ್ಯಯದರ್ಶಿ .ಎಸ್.ಆಂಜನೇಯಲು, ಭರತ್ ರೆಡ್ಡಿ ಮುರಳಿ, ಅಬ್ದುಲ್ ವಹಾಬ್, ಶಿವಯೋಗಿ, ಮಹಮ್ಮದ್ ರಫೀಕ್ ಮೊದಲಾದವರು ಪಾಲ್ಗೊಂಡಿದ್ದರು.

Leave a Reply