This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಔಷಧ ವಿಜ್ಞಾನ ಕ್ಷೇತ್ರದ ಉದ್ಯಮಿಯಾಗು ಇತರರಿಗೆ ಉದ್ಯೋಗ ನೀಡು : ಸಿ.ಶ್ರೀನಿವಾಸ ರಾವ್


ಬಳ್ಳಾರಿ,ಅ,೦೧: ಬಳ್ಳಾರಿಯ ರಾವ್ ಬಹದ್ದೂರ್ ಇಂಜಿನಿಯರಿAಗ್ ಕಾಲೇಜಿನ ಸಭಾಂಗಣದಲ್ಲಿ ತೊಗರಿ ವೀರಮಲ್ಲಪ್ಪ ಮೆಮೋರಿಯಲ್ ಫಾರ್ಮಸಿ ಕಾಲೇಜ್. ಬಳ್ಳಾರಿ ಜಿಲ್ಲಾ ಔಷಧ ನಿಯಂತ್ರಣ ಇಲಾಖಾ ಅಧಿಕಾರಿಗಳ/ನೌಕರರ ಸಂಘ ಮತ್ತು ಔಷಧ ವ್ಯಾಪಾರಿಗಳ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ “ ವಿಶ್ವ ಫಾರ್ಮಸಿಸ್ಟರ ದಿನಾಚರಣೆ-೨೦೨೨” ರ ಉದ್ಘಾಟನೆಯ ನಂತರ ಮಾತನಾಡಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಅಧ್ಯಕ್ಷ ಸಿ.ಶ್ರೀನಿವಾಸ ರಾವ್ ಇಂದು ವಿಶ್ದದ ಎರಡನೆ ಅತಿ ದೊಡ್ಡ ಔಷಧ ತಯಾರಿಕ ರಂಗವಾಗಿ ಭಾರತ ಬೆಳೆಯುತ್ತಿದ್ದು, ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಫಾರ್ಮಸಿ ಕ್ಷೇತ್ರಕ್ಕೆ ಮಾತ್ರ ವಿಫುಲ ಅವಕಾಶಗಳಿವೆ ಎಂದರು. ಔಷಧ ವಿಜ್ಞಾನ ಕ್ಷೇತ್ರದಲ್ಲಿ ಫಾರ್ಮಸಿ ಪದವಿ ಪಡೆದು ಕೇವಲ ಕೆಲಸ ಪಡೆದು ಸಂತೃಪ್ತಿ ಪಡದೆ, ಫಾರ್ಮಸಿಯ ಉದ್ಯಮಿಯಾಗುವಂತೆ, ನೂರಾರು ಜನರಿಗೆ ಉದ್ಯೋಗ ನೀಡುವ ಶಕ್ತಿಯಾಗಿ ಬೆಳೆಯಲು ತಿಳಿಸಿದರು. ಕೋವಿಡ್ ೧೯ ಕರೋನಾ ವೈರಸ್ ನಿಂದ ಇಡೀ ವಿಶ್ವ ತೊಂದರೆಯಲ್ಲಿದ್ದಾಗ ಭಾರತದ ಪ್ರಧಾನಿ ಭಾರತದ ಪ್ರಜೆಗಳಿಗೆ ಉಚಿತ ವ್ಯಾಕ್ಸಿನ್ ನೀಡಿದುದಲ್ಲದೆ ಇಡೀ ವಿಶ್ವಕ್ಕೆ ವ್ಯಾಕ್ಸಿನ್ ನೀಡಿದ ಕೀರ್ತಿ ಭಾರತದ್ದು. ಕೋವಿಡ್ ಸಮಯದಲ್ಲಿ ಭಾರತದ ಫಾರ್ಮಸಿ -ಔಷಧ ವಿಜ್ಞಾನಿಗಳ ಸಾಧನೆ ವಿಶ್ವದ ಗಮನಕ್ಕೆ ಬಂದುದನ್ನು ತಿಳಿಸಿದ ಅವರು, ಔಷಧ ಕಂಡು ಹಿಡಿಯುª,À ತಯಾರಿಸು ವಿತರಿಸುವ ಸಾವiರ್ಥ್ಯ ಫಾರ್ಮಸಿಸ್ಟರಿಗೆ ಮಾತ್ರ ಸಾಧ್ಯ ಎಂದರು.
 ಮತ್ತೋರ್ವ ಅತಿಥಿ ಬೆಂಗಳೂರು ಸರ್ಕಾರಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ರಾಮಚಂದ್ರ ಶೆಟ್ಟಿ ಮಾತನಾಡಿ ವಿಶ್ವದ ಗಮನ ಭಾರತದ ಇನ್ಫಾರ್ಮೇಷನ್ ಟೆಕ್ನಾಲಜಿ ನಂತರ ಫಾರ್ಮಸಿ ಕ್ಷೇತ್ರದ ಕಡೆ ಇದೆ, ವಿಶ್ವದ ಶ್ರೇಷ್ಟ ಹಾಗೂ ಗುಣ ಮಟ್ಟದ ಔಷಧಗಳು ಭಾgತÀದಲ್ಲಿಯೇ ತಯಾರಾಗಿ ನೂರಾರು ದೇಶಗಳಿಗೆ ರಪ್ತಾಗುತ್ತಿವೆ ಎಂದರು. ಭಾರತವನ್ನು ವಿಶ್ವದ ಮಂಚೂಣಿಯಲ್ಲಿ ನಿಲ್ಲಿಸಲು ಅವಕಾಶಗಳು ವಿಫುಲವಾಗಿದ್ದು ಔ಼ಷಧ ವಿಜ್ಞಾನ ಕ್ಷೇತ್ರದಲ್ಲಿ ಫಾರ್ಮಸಿಸ್ಟರು ಇನ್ನಷ್ಟು ಸಾಧನೆ ಮಾಡಲು, ಪಾಠವನ್ನು ಕಲಿಯುತ್ತಾ, ಪಾಠದ ಜೊತೆ ಪರಿಣಿತರಾಗುವಂತೆ ಫಾರ್ಮಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಆರಂಭದಲ್ಲಿ ಸ್ವಾಗತ ಕೋರಿದ ತೊಗರಿ ವೀರಮಲ್ಲಪ್ಪ ಮೆಮೋರಿಯಲ್ ಫಾರ್ಮಸಿ ಕಾಲೇಜ್‌ನ ಪ್ರಾಂಶುಪಾಲ ಡಾ.ಮಂಜುನಾಥ್ ವಿ ಜಾಲಿ ೧೯೮೫ ರಲ್ಲಿ ಆರಂಭವಾದ ಫಾರ್ಮಸಿ ಕಾಲೇಜು ಇಂದು ಡಿ.ಫಾರ್ಮ, ಬಿ.ಫಾರ್ಮ, ಫಾರ್ಮ.ಡಿ ಕೋರ್ಸ ಜೊತೆಗೆ ಎಂ.ಫಾರ್ಮ ಸ್ನಾತಕೋತ್ರ ಪದವಿ ಆರಂಭವಾಗುತ್ತಿರುವ ಕುರಿತು ಬೆಳಕು ಚಲ್ಲಿದರು.ವೀರರ್ಶಐವ ವಿಧ್ಯಾವರ್ಧಕ ಸಂಘದ ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ಬಂದ ದಾರಿಯನ್ನು ಮೆಲುಕು ಹಾಕುತ್ತಾ ವಿವಿ ಸಂಘದ ಆಡಳಿತ ಮಂಡಳಿ ಸದಾ ಬೆಂಬಲವಾಗಿ ನಿಂತುದನ್ನು ನೆನೆದರು. ನೂರಾರು ವಿದ್ಯಾರ್ಥಿಗಳು ದೇಶ ವಿದೇಶದ ಪ್ರಮುಖ ಉದ್ಯಮಿಗಳಾಗಿ, ಪ್ರಮುಖ ಸಂಸ್ಥೆಯಲ್ಲಿ ಉದ್ಯೋಗದಲ್ಲಿ ಮತ್ತು ಸರ್ಕಾರದ ಪ್ರಮುಖ ಸ್ಥಾನಗಳಲ್ಲಿ ಉದ್ಯೋಗ ಪಡೆದಿರುವುದನ್ನು ತಿಳಿಸಿ, ಇದರಲ್ಲಿ ಅಧ್ಯಾಪಕ ವೃಂದದ ಪಾತ್ರ ಪ್ರಮುಖವಾದುದು ಎಂದರು.
 ಕಾರ್ಯಕ್ರಮವನ್ನು ಶ್ರೀಮತಿ ಲಾವಣ್ಯ ಮತ್ತು ಡಾ.ಎನ್.ಶ್ರೀನಿವಾಸರೆಡ್ಡಿ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಶ್ರೀನಿವಾಸನ್ ವಂದಿಸಿದರು.
  ಕು.ಅಖಿಲಾ ಮತ್ತು ತಂಡದಿAದ ನೃತ್ಯ,  ಫಾರ್ಮಸಿಸ್ಟರ ವೈಸಿಷ್ಠö್ಯ ಸಾರುವ ಕಿರು ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಡಾ.ಬಿ.ಸೋಮಶೇಖರ, ಡಾ.ಹೆಚ್.ಎನ್.ಗಿರೀಶ್, ಡಾ.ಮಂಜಣ್ಣ, ಡಾ.ನಟರಾಜ್, ಡಾ.ಕಿರಣಾ ಗಿರೀಶ್, ಡಾ.ಶ್ರೀನಿವಾಸನ್, ಡಾ.ಬಿ.ಆರ್.ಎಸ್.ಗೌಡ. ಗೋವಿಂದರೆಡ್ಡಿ, ಜಿ.ನರೇಶ್, ಕೃಷ್ಣ ಜಾದವ್, ಪ್ರಾಣೇಶ್ ಕುಮಾರ್, ಶಂಕರ ಗುಂಡದ್, ಸುರೇಶ್, ವಿಜಯಲಕ್ಷಿö್ಮ, ಲಕ್ಷಿö್ಮ,  ಶಿವಕೃಷ್ಣ, ಡಾ.ಅಜಾರುದ್ದಿನ್, ಸವಿತಾ, ಚಿತ್ರಹಾಸಿನಿ, ಗೀತಾ,ದ್ರಾಕ್ಷಾಯಿಣಿ,ಮೊನಿಕಾ,ಶಿವಯ್ಯ,ವಿನೋದ್, ನಾಗರಾಜ್, ನಾಗರಾಜ  ಸುದರ್ಶನ್ ಸಹಕರಿಸಿದರು.
  ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳು ಶ್ರಮವಹಿಸಿದವು. ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

Leave a Reply