This is the title of the web page
Left Banner (Left Skyscraper)
Right Banner (Right Skyscraper)

ಸೇವೆಯಲ್ಲಿ ಸಾರ್ಥಕತೆ ಕಂಡ ಬಸವರಾಜ ಗಾರ್ಗಿಯವರು

0 389

ಸಾಹಿತಿಗಳು, ಸಂಘಟಕರು, ಸದಾ ಕಾಲ ಕ್ರಿಯಾಶೀಲತೆಯಿಂದ ಕಾರ್ಯ ಮಾಡುವ ಬಸವರಾಜ ಗದಿಗೆಪ್ಪಾ ಗಾರ್ಗಿ ಯವರು ಇದೇ ಕಳೆದ ತಿಂಗಳು ಮೇ 31,2022 ರಂದು ಸರಕಾರಿ ಸೇವೆಯಿಂದ ನಿವೃತ್ತ ರಾದರು, ಹಿoದುಳಿದ ಕಲ್ಯಾಣ ವರ್ಗಗಳ ಇಲಾಖೆಯಲ್ಲಿ ಸುಮಾರು 42 ವರ್ಷಗಳ ಕಾಲ ಅವಿಸ್ಮರಣೀಯ ರೀತಿಯಲ್ಲಿ ಸರಕಾರಿ ಸೇವೆಸಲ್ಲಿಸಿದವರು, ಹಿಂದುಳಿದ,ಬಡ ವಿದ್ಯಾರ್ಥಿಗಳ. ಪಾಲಿಗೆ ಅಣ್ಣನಂತೆ ಹಾಸ್ಟೆಲ್ ಮುಖ್ಯಸ್ಥನಾಗಿ ಕಾರ್ಯಮಾಡಿರುವರು. ತನ್ನ ಕಾರ್ಯದಲ್ಲಿ ಕ್ರಿಯಾಶೀಲತೆ ಮೈಗೂಡಿಸಿಕೊಂಡು ಸಹೋದ್ಯೋಗಿಗಳ ಸಹಾಯ ಸಹಕಾರ ಪಡೆದುಕೊಂಡು ಉತ್ತಮ ಕೆಲಸ ಕಾರ್ಯಮಾಡಿ ಇಂದು ತಮ್ಮ ಸೇವಾವಧಿ ಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನ ಅಧಿಕಾರಿಗಳಾಗಿ ಹೊರಹೊಮ್ಮಿರುವರು. ಅವರ ಪಾಲಿಗೆ ಮಾರ್ಗದರ್ಶನ ಮಾಡುವ ಹಿರಿಯಣ್ಣ ನಂತಾಗಿರುವರು, ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವರು, ಹಿಂದುಳಿದ ಕಲ್ಯಾಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಾರ್ಥಕ ಭಾವದಿಂದ ಸೇವಾ ನಿವೃತ್ತಿಯಾಗಿರುವರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸುದೀರ್ಘ ಕಾಲ ವಿವಿಧ ಹುದ್ದೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶ್ರೀ ಬಸವರಾಜ ಗಾರ್ಗಿಯವರ ಷಷ್ಠದ್ಬಿ ಪೂರ್ತಿ ಸಮಾರಂಭ ಹಾಗೂ ಅವರ ಕೃತಿ ಹಾಸ್ಟೆಲ್ ಮಕ್ಕಳ ಕಥೆಗಳು ಲೋಕಾರ್ಪಣೆ ಕಾರ್ಯಕ್ರಮವು ಶನಿವಾರ ದಿ 11 ರಂದು ಜರುಗಲಿದೆ ಆ ನಿಮಿತ್ಯ ಈ ಅಭಿನಂದನಾ ಲೇಖನ

ಸರಕಾರಿ ಸೇವೆಯಲ್ಲಿರುವಾಗಲೇ ತಾಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಕಾರ್ಯ ಮಾಡಿ ಸಾಹಿತ್ಯವಲಯ ದಲ್ಲಿಹೆಸರು ಮಾಡಿರುವರು, ಅದರ ಜೊತೆ ಜೊತೆಗೆನೆ ನಾಡಿನ ಹಲವಾರುಪ್ರಮುಖ ಸಂಘ ಸಂಸ್ಥೆ ಗಳ ಹಾಗೂ ಸಾಹಿತಿಗಳ ಒಡನಾಟ ಹೊಂದಿರುವರು,ಸ್ವತ: ತಾವು ಲೇಖಕರಾಗಿ ಹಲವು ಕೃತಿ ಹೊರ ತಂದಿರುವರು, ಅವರ ಕೃತಿಗಳೆಂದರೆ ನಾನು ಬರೆಯುತ್ತೇನೆ (ಕವನ ಸಂಕಲನ ), ಭಾವ ಸಂಗಮ (ಚುಟುಕು ಸಂಕಲನ ), ನಿನ್ನೊಳ ಲಗಿ ಸೂರ್ಯ (ಕವನ ಸಂಕಲನ), ಸಂಗತಿಯಾದ ಕಥೆಗಳು (ಕಥಾ ಸಂಕಲನ ), ರಿಪೇರಿ ಅದ್ಯಾವೇನ್ರಿ (ಮಕ್ಕಳ ನಾಟಕ )ಶ್ರಮದ ಸ್ವರ್ಗ (ಮಕ್ಕಳ ಕಥೆಗಳು), ಕನ್ನಡ ಡಿಂಡಿಮ (ಸಂಪಾದಿತ), ಹಾಸ್ಟೆಲ್ ಮಕ್ಕಳಕಥೆಗಳು ಈ ಕೃತಿಗಳು ಬಿಡುಗಡೆ ಯಾಗಿವೆ, ಸಾಹಿತ್ಯಲೋಕದ ಗಮನ ಸೆಳೆದಿವೆ, ಅದರ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರ ಗಳಲ್ಲಿ, ಸರಕಾರಿ ನೌಕರಿ ಜೀವನದಲ್ಲಿ ತಮ್ಮ ಜನಪರ ನಿಲುವಿನ ಕೆಲಸ ಕಾರ್ಯ ಗಳಿಂದ ಹೆಸರು ಮಾಡಿರುವ ಶ್ರೀ ಬಸವರಾಜ ಗಾರ್ಗಿಯವರು ಬಸಣ್ಣಎಂದೇ ಆತ್ಮೀಯರ ವಲಯ ದಲ್ಲಿ ಚಿರಪರಿಚಿತರು.

ನಾಡಿನ ಏಕೈಕ ಮಕ್ಕಳ ಮಾಸಿಕ ಗುಬ್ಬಚ್ಚಿ ಗೂಡು ಪತ್ರಿಕಾ ಸಂಪಾದಕ ಮಂಡಳಿ ಯಲ್ಲಿ ಸದಸ್ಯರಾಗಿರುವರು, ತಮ್ಮ ಹುಟ್ಟೂರು ಹೆಬ್ಬಳ್ಳಿಯಲ್ಲಿ ಬ್ರಹ್ಮಪುರಿ ಪ್ರತಿಷ್ಠಾನ ಮಾಡಿ ಅದರ ಅಧ್ಯಕ್ಷರಾಗಿ ಸೇವೆ ಮಾಡುತ್ತಿರುವರು, ಇಂದು ಅವರು ವಯೋಸಹಜವಾಗಿ ಸರಕಾರಿ ನೌಕರಿ ಜೀವನದಿಂದ ನಿವೃತ್ತರಾಗಿದ್ದಾರೆ,ಪ್ರವೃತ್ತಿ ಯಿಂದ ಅಲ್ಲ, ಎಂದರೆ ತಪ್ಪಾಗಲಾರದು,ಅರಸು ಅಕಾಡೆಮಿ ಹಾಗೂ ರಾಷ್ಟ್ರ ಕೂಟ ಸಾಹಿತ್ಯ ಪ್ರತಿಷ್ಠಾನ, ಗಳನ್ನು ಸ್ಥಾಪಿಸಿಕೊಂಡು ಈಗಾಗಲೇ ಕರೋನ ಸಮಯದ ಲಾಕ್ ಡೌನ್ ದಲ್ಲಿ ಹಲವು ಆನ್ ಲೈನ್ ಉಪನ್ಯಾಸ, ಚರ್ಚೆಗಳನ್ನು ಕಾರ್ಯಕ್ರಮ ಮಾಡಿ ಜನಮನ ವನ್ನು ತಮ್ಮoತ ಸೆಳೆದುಕೊಂಡಿರುವರು, ಅವರಲ್ಲಿಅಂಥ ಆಕರ್ಷಣೆ ಗುಣವಿದೆ, ಎಲ್ಲರನ್ನೂ ಪ್ರೀತಿ,ಪ್ರೇಮ ವಿಶ್ವಾಸ,ಆತ್ಮೀಯ ಭಾವ ದಿಂದ ಕಾಣುವ ಗುಣ ದಿಂದ ಅವರು ಸಮಾಜದ ಗಮನ ಸೆಳೆದಿರುವರು, ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ ಹೀಗಾಗಿ ಅವರಿಗೆ ಮುಂದೆಯೂ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಲೋಕದಲ್ಲಿ, ವಿವಿಧ ಸಂಘಟನೆ ಯಲ್ಲಿ ಕ್ರಿಯಾಶೀಲ ರಾಗಿ ಕೆಲಸ ಮಾಡುವ ಅವಕಾಶ ಗಳಿವೆ, ಅವನ್ನು ಸಮರ್ಥವಾಗಿ ಬಳಸಿಕೊಳ್ಳುವ ಶಕ್ತಿ ಸಾಮರ್ಥ್ಯ ಅವರಿಗಿದೆ, ವಯಸ್ಸು 60 ಆದರೂ ಉತ್ಸಾಹ, ಉಮ್ಮಸ್ಸು, 20 ರಂತೆ ಇದೆ.

ಬಸವರಾಜ ಗಾರ್ಗಿ ಯವರ ಯಶಸ್ಸಿನ ಹಿಂದೆ ಅವರ ಕುಟುಂಬದ ಪಾತ್ರ ದೊಡ್ಡದಿದೆ, ಅವರ ಧರ್ಮ ಪತ್ನಿ ಶ್ರೀ ಮತಿ ಶಿವಲೀಲಾ ರವರು ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ಆದರ್ಶಮಯ ಬದುಕು ಸಾಗಿಸಿ ಪತಿಯ ಸರಕಾರಿ ಹಾಗೂ ಸಾಹಿತ್ಯ ಸಂಘಟನೆಯ ಕೆಲಸ ಕಾರ್ಯಗಳಿಗೆ ಬೆಂಬಲಿಸಿ ಅವರ ಯಶಸ್ವಿಗೆ ಕಾರಣಕರ್ತ ರಾಗಿರುವರು, ಅವರ ಸುಂದರ ಕುಟುಂಬಕ್ಕೆ ಇಬ್ಬರು ಸುಪುತ್ರರು, ಅಮೃತರಾಜನು ಎಮ್ ಟೆಕ್ ಅಧ್ಯಯನ ಮಾಡಿಕೊಂಡು ಉನ್ನತ ಕಂಪನಿಯಲ್ಲಿ ಉದ್ಯೋಗಿಯಾಗಿ ಹಾಗೂ ಇನ್ನೋರ್ವ ಸುಪುತ್ರ ಋತು ರಾಜನು ಬಿ ಇ ಓದಿಕೊಂಡು ಆತನು ಸಹ ಪ್ರತಿಷ್ಠಿತ ಕಂಪನಿಯಲ್ಲಿ ಸೇರಿಕೊಂಡು ತಮ್ಮ ತಮ್ಮ ಬದುಕು ಕಟ್ಟಿಕೊಂಡು ಆದರ್ಶಮಯ ಜೀವನ ಸಾಗಿಸುತ್ತ ತಂದೆ ತಾಯಿಯರಿಗೆ ಕೀರ್ತಿ ನೆಮ್ಮದಿ ಗೌರವ ತಂದಿರುವರು.

ಬಸವರಾಜ ಗಾರ್ಗಿಯವರು ಮೂಲತ ಧಾರವಾಡ ಜಿಲ್ಲೆಯ ಹೆಬ್ಬಳಿಯವರು, ಅವರದು ಆದರ್ಶಮಯ ಬಹು ದೊಡ್ಡ ಕುಟುಂಬ, ಸುಶಿಕ್ಷಿತ ವಾತಾವರಣ ದಲ್ಲಿ ಅವರ ಬಾಲ್ಯ ಶಿಕ್ಷಣವೆಲ್ಲಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ದಲ್ಲಿ ನಡೆಯಿತು,42 ವರ್ಷಗಳ ಸರಕಾರಿ ನೌಕರಿ ಜೀವನದಲ್ಲಿ ಹಲವು ಹುದ್ದೆಗಳಲ್ಲಿ, ಹಲವಾರು ಊರುಗಳಲ್ಲಿ ಕಾರ್ಯ ಮಾಡಿರುವರು, ಅವರಿಗೆ ಬಹು ದೊಡ್ಡ ಗೆಳೆಯರ ಬಳಗವಿದೆ, ಹಿರಿಯ ಸಾಹಿತಿಗಳ, ಸಂಘಸಂಸ್ಥೆಗಳ ಪದಾಧಿಕಾರಿಗಳ, ಸಾಮಾಜಿಕ ಜೀವನದ ಗಣ್ಯವ್ಯಕ್ತಿಗಳ ಆತ್ಮೀಯ ಒಡನಾಟವಿದೆ, ಎಲ್ಲರೊಂದಿಗೆ ಬೆರೆಯುವ ಗುಣವಿದೆ, ಸರ್ವರನ್ನು ಗೌರವಿಸುವ ಅಪರೂಪದ ವ್ಯಕ್ತಿತ್ವ ಹೊಂದಿರುವದರಿಂದ ಬಸವರಾಜ ಗಾರ್ಗಿಯವರು ನಮ್ಮ ಮುಂದೆ ಅಪರೂಪದವರಾಗಿ ಗೋಚರಿಸುವರು.

ಕರ್ನಾಟಕ ಸರಕಾರದ ಬಹು ಉಪಯೋಗಿ ಇಲಾಖೆಯಾಗಿರುವ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಹಾಸ್ಟೆಲ್ ಗಳಲ್ಲಿ ಹಲವು ಉಪಯುಕ್ತ ಕಾರ್ಯಮಾಡಿರುವರು, ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣ, ಮಕ್ಕಳ ಹಕ್ಕುಗಳು, ಹಾಗೂ ಕೋವಿಡ ಸಮಯದಲ್ಲಿ ಸುರಕ್ಷತೆ ಕುರಿತು ಅರಿವು ಮೂಡಿಸಿರುವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮಾರ್ಗದರ್ಶನ ಮಾಡಿ ಆತ್ಮಸ್ಥೆರ್ಯ ತುಂಬುವ ಪ್ರಯತ್ನ ಮಾಡಿರುವರು, ಮಕ್ಕಳಲ್ಲಿ ಸಂಸ್ಕೃತಿಕ ಕಾರ್ಯಕ್ರಮ ನಡೆಸಿರುವರು, ಮಕ್ಕಳಿ ಗಾಗಿ ಸಾಹಿತ್ಯ ಸಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಯಶಸ್ವಿಯಾಗಿರುವರು.

ತಮ್ಮ ಸಾರ್ಥಕ ಸೇವೆಗಾಗಿ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿ ಮಾನ ಸನ್ಮಾನ ಗಳಿಗೆ ಭಾಜನರಗಿರುವರು, ಅವುಗಳಲ್ಲಿ ಪ್ರಮುಖ ಎoದರೆ ಶಿಕ್ಷಣ ಸಿರಿ, ಚುಟುಕುಶ್ರೀ, ಗುರುಕುಲ, ಬಸವಚೇತನ, ಸದ್ಗುರು ಕಾಯಕ ಶ್ರೀ, ಸಿರಿಗನ್ನಡ ಸಾಹಿತ್ಯ ಶ್ರೀ, ಸೇರಿದಂತೆ ಹಲವು ಪ್ರಶಸ್ತಿಗಳು ವಿವಿಧ ಸಂಘ ಸಂಸ್ಥೆಗಳು ನೀಡಿ ಅಭಿನಂದನೆಗಳನ್ನು ಸಲ್ಲಿಸಿವೆ.

ಇಂದಿನ ಕಾರ್ಯಕ್ರಮದಲ್ಲಿ ಬಸವರಾಜ ಗಾರ್ಗಿ ಯವರಿಗೆ ಎಲ್ಲರೂ ಸೇರಿ ಅಭಿನಂದನೆಗಳನ್ನು ಹೇಳಿ ಅವರ ಮುಂದಿನ ಜೀವನಕ್ಕೆ ಯಶಸ್ಸು ಕೊರೋಣ
ದೇವರು ಅವರಿಗೆ ಸರ್ವ ಶಕ್ತಿ ನೀಡಲಿ, ಅವರಿಗೆ ಅವರ ಕುಟುಂಬಕ್ಕೆ ಆಯುರಾರೋಗ್ಯ, ಭಾಗ್ಯ ಸಕಲ ಐಶ್ವರ್ಯ, ಶಾಂತಿ ನೆಮ್ಮದಿ ನೀಡಲೆಂದು ಪ್ರಾರ್ಥಿಸೋಣ

– ಬಸವರಾಜ ಸುಣಗಾರ

ಪ್ರಧಾನ ಕಾರ್ಯದರ್ಶಿಗಳು,

ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ

ಬೆಳಗಾವಿ

Leave a comment