Live Stream

September 2022
T F S S M T W
1234567
891011121314
15161718192021
22232425262728
2930  

| Latest Version 8.0.1 |

State News

ಕಲಬುರ್ಗಿ ಭವಿಷ್ಯದ ನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಕಲಬುರಗಿ, ಸೆಪ್ಟೆಂಬರ್ 17: ಕಲಬುರ್ಗಿ ಭವಿಷ್ಯದ ನಗರ. ಈ ಚಿಂತನೆಯನ್ನು ಸತ್ಯ ಮಾಡಲು ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳನ್ನು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥ ಎಂದು ಮರುನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಐದು ದಶಕಗಳಿಗೂ ಹೆಚ್ಚಿರುವ ವಾಣಿಜ್ಯ ಸಂಸ್ಥೆಯು ತನ್ನ ಹೆಸರನ್ನು ಬದಲಾಯಿಸುವ ಮುಖಾಂತರ ಜನರ ಭಾವನೆಗಳಿಗೆ ಸ್ಪಂದಿಸಿದೆ. ಹೆಸರಿಗೆ ತನ್ನದೇ ಆದ ಮಹತ್ವವಿದೆ. ಹೈದರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕ ಆಗಿರುವ ಸಂದರ್ಭದಲ್ಲಿ ವಾಣಿಜ್ಯ ಮಾತ್ರ ಹಳೆ ಹೆಸರನ್ನು ಮುಂದುವರಿಸುವುದು ಸೂಕ್ತ ವಾಗಿರಲಿಲ್ಲ. ಪ್ರತಿಯೊಂದು ಸಂದರ್ಭದಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಭಾಗದ ಅಭಿವೃದ್ಧಿಗೆ ನಾಯಕತ್ವ ವಹಿಸುವುದು ವಾಣಿಜ್ಯ ಸಂಸ್ಥೆ. ಕೈಗಾರಿಕೆ, ವ್ಯಾಪಾರ ಮುಂತಾದ ಮೂಲಭೂತ ಸೌಕರ್ಯಗಳಿಗೆ ಧ್ವನಿಯಾಗಿ ಸ್ಪಂದಿಸಿರುವ ಸಂಸ್ಥೆಯೂ ಕಲ್ಯಾಣ ಕರ್ನಾಟಕದ ಹೆಸರಿನಲ್ಲಿ ಇದ್ದರೆ, ಇನ್ನಷ್ಟು ಸ್ಫೂರ್ತಿ, ಪ್ರೇರಣೆ ದೊರೆಯಲಿದೆ ಎಂದರು.

ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಪಾಶ್ಚಿಮಾತ್ಯ ಕಲ್ಪನೆ. ಚೇಂಬರ್ ಎಂದರೆ ರಾಜ್ಯದ ಅಭಿವೃದ್ಧಿಗೆ ಒಂದೆಡೆ ಕುಳಿತು ಚರ್ಚೆ ಮಾಡುವುದು. ಕಮ್ಯುನಿಸ್ಟ್ ರಾಷ್ಟ್ರವಾದ ಚೀನಾ ಕೂಡ ಅಲ್ಲಿನ ಸ್ಥಳೀಯ ಕೈಗಾರಿಕಾ ಸಂಸ್ಥೆಯೊಂದಿಗೆ ಸಂವಾದ ಮಾಡಿ ನೀತಿಗಳನ್ನು ರೂಪಿಸುತ್ತಾರೆ. ಅಷ್ಟು ಪ್ರಾಮುಖ್ಯತೆ ಅದಕ್ಕಿದೆ. ರಾಜ್ಯದ ಅಭಿವೃದ್ಧಿ ಯಲ್ಲಿ ಚೇಂಬರ್ ದೊಡ್ಡ ಪಾತ್ರವನ್ನು ವಹಿಸಬೇಕು. ಕರ್ನಾಟಕ ಎಫ್. ಕೆ.ಸಿ.ಸಿ.ಐ, ಹುಬ್ಬಳ್ಳಿಯ
ಚೇಂಬರ್ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಅದೇ ರೀತಿಯಲ್ಲಿ ಈ ಸಂಸ್ಥೆಯೂ ಕೆಲಸ ಮಾಡುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಕೆಲ್ಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ನಮ್ಮ ಭಾಗದ ಅಭಿವೃದ್ಧಿ ಬಗ್ಗೆ ಗಟ್ಟಿ ಧ್ವನಿ ಎತ್ತದಿ ದ್ದರೆ ಅದನ್ನು ಪಡೆಯಲು ಸಾಧ್ಯವಿಲ್ಲ. ಸೀಮಿತ ಸಂಪನ್ಮೂಲ ಗಳಲ್ಲಿ ಯಾರು ಹೆಚ್ಚು ಹಕ್ಕೊತ್ತಾಯ ಮಾಡುತ್ತಾರೋ ಅವರ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಇದೆ ಎಂದರು.

ವಿಪುಲ ಅವಕಾಶಗಳಿವೆ:
ಈ ಭಾಗಕ್ಕೆ ವಿಪುಲ ಅವಕಾಶಗಳಿವೆ. ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳು ಉತ್ತಮವಾಗಿದೆ. ಆದರೆ ದುರ್ದೈವದಿಂದ ಈ ಎರಡನ್ನೂ ಬಳಕೆ ಮಾಡಲಾಗಿಲ್ಲ. ಪ್ರತಿಭೆ, ಕೌಶಲಗಳನ್ನು ಬೆಳವಣಿಗೆಗೆ ಬಳಸಬೇಕು.
ಚೇಂಬರ್ ಆಫ್ ಕಾಮರ್ಸ್ ಈ ರೀತಿಯ ದೂರದೃಷ್ಟಿ ಇರುವ ಚಿಂತಕರು, ದಾರ್ಶನಿಕರು, ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಸೂಚಿಸಬೇಕು. ಪರಿಹಾರದ ಭಾಗವಾದಾಗ ಆಡಳಿಗಾರರಿಗೆ ಮಾರ್ಗದರ್ಶನ, ಚಿಂತನೆ ಮಾಡಿದಂತಾಗುತ್ತದೆ. ವ್ಯಕ್ತಿ, ಸಂಸ್ಥೆ, ಸರ್ಕಾರಕ್ಕಾಗಲಿ, ಸಮಾಜಕ್ಕಾಗಲಿ ಸಕಾರಾತ್ಮಕವಾಗಿರುವುದು ಮುಖ್ಯ. ಯಶಸ್ಸು ಕಷ್ಟಪಟ್ಟವರಿಗೆ ಕಟ್ಟಿಟ್ಟ ಬುತ್ತಿ. ಸಂಸ್ಥೆಯೂ ಅದೇ ರೀತಿ ಕೆಲಸ ಮಾಡಬೇಕು. ಯಶಸ್ಸು ಸ್ಪೂರ್ತಿ ತುಂಬುತ್ತದೆ. ಮೂಲ ಸೌಕರ್ಯ, ಕೈಗಾರಿಕೋದ್ಯಮ, ಜವಳಿ ಪಾರ್ಕ್ ಸ್ಥಾಪನೆ ಈಡೇರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು ಎಂದರು.

ಸಂಸ್ಥೆ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ನೀಡುವ ವೇದಿಕೆಯಾಗಬೇಕು:
ಈ ಭಾಗದ ಪ್ರತಿಭೆಗಳನ್ನು ಗುರುತಿಸಿ ಸಭೆ ಕರೆದು ಮಾತನಾಡಿಸಬೇಕು. ಕಲಬುರ್ಗಿ ಭಾರತದ ಕೇಂದ್ರ ಪ್ರದೇಶ. ಸಂಪರ್ಕ ಸಾಧಿಸಿ ಬಳಕೆ ಮಾಡುವ ರೀತಿಯನ್ನು ಕಂಡು ಹಿಡಿಯಬೇಕು.
ಸಂವಹನ ಸರಿಯಾಗಿ ಇರಬೇಕು. ಹೊಸ ರಿಯಾಯಿತಿಗಳನ್ನು ನೀಡಲು ಕೋರಿದ್ದೇವೆ.ವಿದ್ಯುತ್ ನಲ್ಲಿ ರಿಯಾಯಿತಿ ಪಡೆಯಲು ಯಾವ ದರವನ್ನು 10 ಅಥವಾ 20 ವರ್ಷಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಲಾಗಿದೆ. ಒಂದು ಕೆಲಸವಾಗಬೇಕಾದರೆ ಅದರ ಹಿಂದೆ ಬಹಳ ಕೆಲಸವಿರುತ್ತದೆ. ಮನವಿ ಕೊಡುವುದು ಸುಲಭ. ಅದರಿಂದ ಉಪಯೋಗವಿಲ್ಲ. ಅದಕ್ಕೆ ಸರಿಯಾದ ದಿಕ್ಕಿನಲ್ಲಿ ಪ್ರಯತ್ನವೂ ಆಗಬೇಕು. ಸಭೆ ಸೇರುವುದು ಎಲ್ಲದರ ಪ್ರಾರಂಭ. ಗುರಿ ಇಟ್ಟು ಕೊಂಡು ಪ್ರಯತ್ನಿಸಿದರೆ ಸಾಧನೆ ಸಾಧ್ಯ. ಈ ಭಾಗಕ್ಕೆ ಅಭಿವೃದ್ಧಿ ಯಾಗಲು ಅವಕಾಶಗಳಿವೆ ಎಂದರು.

ಸಕಾರಾತ್ಮಕ ಬದಲಾವಣೆ :
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನೈಸರ್ಗಿಕ ಸಂಪನ್ಮೂಲಗಳು, ಲಾಜಿಸ್ಟಿಕ್ಸ್, ಶಿಕ್ಷಣ, ಕೌಶಲ್ಯ ಅಭಿವೃದ್ಧಿಯಾಗುತ್ತಿದೆ. 24 ಗಂಟೆಗಳ ಕಾಲ ದೇಶದ ಅಭಿವೃದ್ಧಿ ಗೆ ಶ್ರಮಿಸುತ್ತಿದ್ದಾರೆ. ಈ ದೂರದೃಷ್ಟಿ ಯಿಂದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಆಗುತ್ತಿದೆ. ಈಗಿನ ಬದಲಾವಣೆ ಏರುಗತಿಯಲ್ಲಿದೆ. ಇದರ ಬಳಕೆ ಮಾಡಿಕೊಳ್ಳಬೇಕು ಎಂದರು.

ಕೈಗಾರಿಕಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಮಾನ್ ಕರ್, ಸಚಿವರಾದ ಮುರುಗೇಶ್ ನಿರಾಣಿ, ಮುನಿರತ್ನ, ಆರಗ ಜ್ಞಾನೇಂದ್ರ, ಸಂಸದ ಉಮೇಶ್ ಜಾಧವ್, ಶಾಸಕ ರಾಜ್ ಕುಮಾರ್ ತೇಲ್ಕೂ ರ್, ದತ್ತಾತ್ರೇಯ ಪಾಟೀಲ್ ರೇವೂರ, ಅವಿನಾಶ ಜಾಧವ್, ಶಶೀಲ್ ನಮೋಶಿ ಉಪಸ್ಥಿತರಿದ್ದರು.


S K Muchalambi
the authorS K Muchalambi

Leave a Reply