ರಾಜ್ಯಕ್ಕೆ 2, ಮೂರನೇ ರ‍್ಯಾಂಕ್ ಪಡೆದ ಸಾಧನೆಗೈದ ಬಣಜವಾಡ ಪಿಯು ಕಾಲೇಜು ವಿದ್ಯಾರ್ಥಿನಿಯರು

Ravi Talawar
WhatsApp Group Join Now
Telegram Group Join Now

ಅಥಣಿ,ಏಪ್ರಿಲ್ 10: ೨೦೨೩-೨೪ ಸಾಲಿನ ಪಿ ಯು ಸಿ ಪರೀಕ್ಷೆಯಲ್ಲಿ ಬಣಜವಾಡ ಶಿಕ್ಷಣ ಸಂಸ್ಥೆಯ ಪಿ ಯು ಕಾಲೇಜನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯದಲ್ಲೇ ವಿಜ್ಞಾನ, ಹಾಗೂ ವಾಣಿಜ್ಯ ವಿಭಾಗದಲ್ಲಿ ಮೂರನೇ ಸ್ಥಾನಗಳನ್ನು ಗಳಿಸುವ ಮೂಲಕ ಜೆಲ್ಲೆಗೆ ಹಾಗೂ ಶಿಕ್ಷಣ ಸಂಸ್ಥೆಗೆ ಕಿರ್ತಿಯನ್ನು ತಂದಿದ್ದಾರೆ ಎಂದು ಸಂಸ್ಥೆಯ ಆಡಳಿತ ಅಧಿಕಾರಿ ಅನೀತಾ ಬನಜವಾಡ ಅವರು ಹೇಳಿದರು.

ಪಟ್ಟಣ ಬಣಜವಾಡ ಶಿಕ್ಷಣ ಸಂಸ್ಥೆಯಲ್ಲಿ ೨೦೨೩-೨೪ ನೇ ಸಾಲಿನ ಪಿಯುಸಿ ಪರೀಕ್ಷೆ ಫಲಿತಂಶ ಪ್ರಕಟವಾಗಿದ್ದು ವಿಜ್ಞಾನ ವಿಭಾಗದ ಗೌರಿ ಸಂಜೀವ ಸೂರ್ಯವಂಶಿ ೬೦೦ಕ್ಕೆ ೫೯೬ ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ವಿಜ್ಞಾನ ವಿಷಯದಲ್ಲಿ ಮೂರನೇ ರ‍್ಯಾಂಕ ಪಡೆಯುವ ಮೂಲಕ ವಿಶೇಷ ಸಾಧನೇಗೈದು ತಂದೆ ತಾಯಿಗಳಿಗೆ ಹಾಗೂ ಬಣಜವಾಡ ಶಿಕ್ಷಣ ಸಂಸ್ಥೆಗೆ ಕಿರ್ತಿ ತಂದಿದ್ದಾರೆ, ಕನ್ನಡ-೧೦೦, ಇಂಗ್ಲೀಷ ೯೬, ಬೌತಶಾಸ್ತç೧೦೦, ರಸಾಯನಶಾಸ್ತç ೧೦೦, ಗಣಿತ ೧೦೦, ಜೀವಶಾಸ್ತç ೧೦೦ ಅಂಕಗಳನ್ನು ಪಡೆದು ೬೦೦/೫೯೬ ಅಂಕಗಳನ್ನು ಪಡೆದಿದ್ದಾರೆ,

ಕೌಟುಂಬಿಕ ಹಿನ್ನಲೆಯ ಗೌರಿ ಸೂರ್ಯವಂಶಿ ಅವರ ತಂದೆ ಸಂಜೀವ ಸೂರ್ಯವಂಶಿ ಅವರು ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ತಾಯಿ ಶೋಭಾ ಸೂರ್ಯವಂಶಿ ಅವರು ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಗೌರಿ ಅವರ ಸಾಧನೆಯಿಂದ ತಂದೆ ತಾಯಿಗಳು ಅತಿ ಸಂತಸದಿAದ ಮಗಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಶಾಲೆಯ ಶಿಕ್ಷರು, ಆಡಳಿತ ಮಂಡಳಿ ಜೊತೆಗೆ ಮನೆಯಲ್ಲಿ ಶಾಂತಿಯುತ ವಾತವರಣ ಇದ್ದ ಕಾರಣ ನನಗೆ ಸರಿಯಾಗಿ ಅಧ್ಯಯಣ ಮಾಡಲು ಸಾದ್ಯವಾಯಿತು. ಅಲ್ಲದೆ ಎಂದು ಕಾಲೇಜುನಲ್ಲಿ ಪಾಠ ಮಾಡುತ್ತಿದ್ದರೋ ಅಂದೆ ಆ ವಿಷಯದ ಬಗ್ಗೆ ಹೆಚ್ಚಿಗೆ ಮಾಹಿತಿ ಪಡೆದು ಅಧ್ಯಯನ ಮಾಡಿದ್ದರಿಂದ ಈ ಸಾಧನೆ ಮಾಡಲು ಸಾದ್ಯವಾಯಿತು. ಇನ್ನು ಮುಂದೆ ವೈದ್ಯಕೀಯ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ನೀಟ್ ಪರೀಕ್ಷೆಯ ಸಿದ್ದತೆ ಮಾಡಿಕೊಳ್ಳುತ್ತಿದ್ದು ವೈದ್ಯಕೀಯ ಸರಕಾರಿ ಕೋಟಾದಡಿ ಸೀಟು ಪಡೆದು ಸಮಾಜಕ್ಕೆ ವೈದ್ಯ ಸೇವೆ ಸಲ್ಲಿಸುವ ಗುರಿ ನನ್ನದಾಗಿದೆ
ಗೌರಿ ಸೂರ್ಯವಂಶಿ, ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ

ಬಡತನ, ಅನಾರೋಗ್ಯ ಗೆದ್ದು ಸಾಧನೆಗೈದ ವಿದ್ಯಾರ್ಥಿನಿ..!

ಬಣಜವಾಡ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ದಿವ್ಯಾ ಜಿ ಕೆ ಇವರು ವಾಣಿಜ್ಯ ವಿಭಾಗದಲ್ಲಿ ೬೦೦ ಅಂಕಗಳಿಗೆ ೫೯೪ ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಕಡು ಬಡತನ ಹಾಗೂ ತೀವ್ರ ಆರೋಗ್ಯದ ಸಮಸ್ಯ ಇದ್ದರೂ ಮನೆಯಲ್ಲಿ ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. ಕಾಲೇಜಿಗೆ ಹೆಚ್ಚಿಗೆ ಹೋಗಲು ಸಾದ್ಯವಾಗದೆ ಇದ್ದರೂ ಸಹ ತಮ್ಮ ಶಿಕ್ಷರನ್ನು ಫೋನ ಮೂಲಕ ಸಂಪರ್ಕ ಮಾಡಿ ಸಾದ್ಯವಾದಷ್ಟು ಮನೆಯಲ್ಲಿಯೇ ಕುಳಿತು ಹೆಚ್ಚಿನ ಸಮಯವನ್ನು ಅಧ್ಯಯನ ಮಾಡಿ ರಾಜ್ಯದಲ್ಲೇ ಮೂರನೇ ರ‍್ಯಾಂಕ್ ಪಡೆದ ಬಡ ಕುಟುಂಬದ ವಿದ್ಯಾರ್ಥಿನಿಯ ಸಾಧನೆಗೆ ಬಣಜವಾಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಕ್ಷö್ಮಣ ಬಣಜವಾಡ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ದಿವ್ಯಾ ಜಿ ಕೆ ಅವರು ಪಡೆದಿರುವ ಅಂಕಗಳ ವಿವರ

ಕನ್ನಡ ೧೦೦, ಇಂಗ್ಲೀಷ, ೯೭, ಇತಿಹಾಸ ೧೦೦, ಅರ್ಥಶಾಸ್ತç ೧೦೦, ಬಿಜಿನೇಸ್ ಸ್ಟೇಡಿ ೯೮, ಅಕೌಂಟನ್ಸಿ ೯೯ ಅಂಕಗಳನ್ನು ಪಡೆದು ಒಟ್ಟು ೬೦೦ಕ್ಕೆ ೫೯೪ ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದಿದ್ದಾರೆ

ರಾಜ್ಯದಲ್ಲೇ ನನಗೆ ಮೂರನೇ ರ‍್ಯಾಂಕ್ ಬಂದಿರುವದು ನನಗೆ ಸಂತಸ ತಂದಿದೆ, ನನಗೆ ಮಾರ್ಗದರ್ಶನ ಮಾಡಿದ ಗುರು ವೃಂದ ಹಾಗೂ ಬಣಜವಾಡ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಮನೆಯವರ ಸಹಕಾರದಿಂದ ಸಾಧನೆ ಮಾಡಲು ಸಾದ್ಯವಾಗಿದೆ. ನನಗೆ ತೀವ್ರ ತಲೆ ನೋವಿನ ಸಮಸ್ಯಯಿಂದ ನನಗೆ ಕಾಲೇಜಿಗೆ ಬರಲು ಸಾದ್ಯವಾಗುತ್ತಿರಲಿಲ್ಲ, ಆದರೂ ಸಹ ನನಗೆ ನಮ್ಮ ಶಿಕ್ಷರು ಮರ್ಗದರ್ಶನ ಅತಿ ಸಹಕಾರವಾಗಿದೆ. ಮುಂದಿನ ದಿನಮಾನಗಳಲ್ಲಿ ನಾನು ಸಿ ಎ ಕಲಿಯುವ ಬಗ್ಗೆ ಆಲೋಚನೆ ಇದ್ದು ಮನೆಯವರ ಸಹಕಾರದಿಂದ ಅದನ್ನು ಮಾಡಿ ನಮ್ಮ ತಂದೆ ತಾಯಿಗೆ ಆಶರೆಯಾಗಿರುತ್ತೇನೆ
ದಿವ್ಯಾ ಜಿ ಕೆ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿನಿ

ಬಣಜವಾಡ ಶಿಕ್ಷಣ ಸಂಸ್ಥೆಯುAದ ಇಬ್ಬರು ವಿದ್ಯಾರ್ಥಿನಿಯರ ಸಾಧನೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷö್ಮಣ ಬಣಜವಾಡ ಆಡಳಿತಾಧಿಕಾರಿ ಅನೀತಾ ಬಣಜವಾಡ ಅವರ ವಿಜ್ಞಾನ ವಿಭಾಗದ ಗೌರಿ ಸೂರ್ಯವಂಶಿ ಹಾಗೂ ವಾಣಿಜ್ಯ ವಿಭಾಗದ ದಿವ್ಯಾ ಜಿ ಕೆ ಅವರನ್ನು ಸನ್ಮಾನಸಿ ಗೌರವಿಸಿದರು
ಈ ವೇಳೆ ಪ್ರಾಂಶುಪಾಲ ರವಿಂಧ್ರ ಎಸ್ ಕಲಜ ಸಿಬ್ಬಂದಿಗಳಾದ ಭರತೇಶ ಸೌದತ್ತಿ, ಹೆಚ್ ಎಸ್ ಶರಣಕುಮಾರ, ಎಮ್ ದೇವೇಂಧ್ರ, ಪಿ ಕಾಂತಾರ, ಸಂದೀಪ ಪವಾರ, ಟಿ ಆರ್ ಕಿತ್ತೂರ, ಎ ವಾಘಮೋಡೆ, ಜಮೀರ ಮುಲ್ಲಾ, ಎಸ್ ದೇಸಾಯಿ, ಪಿ ಗುಣವಂತಗೋಳ, ಆರ್ ಗೋಟೆ, ಎಸ್ ಬಿರಾದಾರ ಪಾಟೀಲ, ಸಂಜಯ ಭೋಸಲೆ, ಸೌಮ್ಯಾ ಪತ್ತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article