ಚಿಕ್ಕೋಡಿ- ” ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತೇ ತಾನು 3ನೇ ಭಾರಿಗೆ ಅಧಿಕಾರ ವಹಿಸಿಕೊಂಡಿದ್ದು ಹೆಮ್ಮೆ ಎನಿಸುತ್ತಿದೆ. ಚಿಕ್ಕೋಡಿ ವಲಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಬೇಕೆಂಬುವುದೇ ತಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ತಾನು ಕಾರ್ಯ ನಿರ್ವಹಿಸುವುದಾಗಿ” ಚಿಕ್ಕೋಡಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಬಿ ಎ ಮೇಕನಮರಡಿ ಅವರು ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ” ಕಳೆದ ಎರಡು ಭಾರಿ ಚಿಕ್ಕೋಡಿ ವಲಯದಲ್ಲಿ ಸಾಕಷ್ಟು ಕೆಲಸ ಮಾಡಿ ಶಿಕ್ಷಕರ, ಪಾಲಕರ, ವಿದ್ಯಾರ್ಥಿ ಸ್ನೇಹಿಯಾಗಿ ಕೆಲಸ ಮಾಡಿದ್ದು, ಇದೀಗ ಮತ್ತೊಮ್ಮೆ ಇವರೆಲ್ಲರ ಸೇವೆ ಮಾಡುವ ಅವಕಾಶ ದೊರೆಕಿದ್ದು, ಇದನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಇಒ ಹುದ್ದೆ ಅಲಂಕರಿಸಿದ ಬಿ ಎ ಮೇಕನಮರಡಿ ಅವರನ್ನು ಚಿಕ್ಕೋಡಿ ತಾಲ್ಲೂಕು ಶಿಕ್ಷಕರ ಸಂಘದ ಪರವಾಗಿ ಸ್ವಾಗತಿಸಿಕೊಂಡರೆ, ಕಳೆದ ಒಂದು ವರ್ಷದಿಂದ ಚಿಕ್ಕೋಡಿ ಬಿಇಒ ಆಗಿ ಸೇವೆ ಸಲ್ಲಿಸಿದ ಪಿ ಬಿ ಹಿರೇಮಠ ಅವರನ್ನು ಬೀಳ್ಕೊಡಲಾಯಿತು.
ಬೀಳ್ಕೊಡಲ್ಪಟ್ಟ ಬಿಇಒ ಪಿ ಬಿ ಹಿರೇಮಠ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ತಾನು ಇಲ್ಲಿ ಒಂದು ವರ್ಷವನ್ನು ಕಳೆದಿದ್ದು, ತನಗೆ ತೃಪ್ತಿ ತಂದಿದೆ. ಈ ಕಾಲಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ತೃಪ್ತಿ ತನಗಾಗಿದ್ದು, ಶಿಕ್ಷಕರ ಸ್ಪಂಧನೆಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳಾದ ವೈ ಎಸ್ ಬುಡ್ಡಗೋಳ, ಎಸ್ ಎಸ್ ಧೂಪದಾಳ, ಚಂದ್ರಶೇಖರ ಅರಬಾಂವಿ, ಜಿ ಎಮ್ ಕಾಂಬಳೆ, ಆರ್ ಕೆ ಕಾಂಬಳೆ, ಎನ್ ಜಿ ಪಾಟೀಲ, ಎಸ್ ಎ ಖಡ್ಡ, ಡಿ ಆರ್ ಚಲವಾದಿ, ಡಿ ಎಚ್ ಕಾಂಬಳೆ, ಎಸ್ ಬಿ ಖೋತ, ಎ ಐ ನದಾಫ, ಎಸ್ ಆರ್ ಮರಡಿ, ಎಸ್ ಎಮ್ ಮಾನೆ, ವಿ ಎಸ್ ಖೋತ ಮುಂತಾದವರು ಉಪಸ್ಥಿತರಿದ್ದರು.