This is the title of the web page
Left Banner (Left Skyscraper)
Right Banner (Right Skyscraper)

ಬೀಗ ಮುರಿದು ಶಾಲೆಯಲ್ಲಿ ಕಳ್ಳತನಕ್ಕೆ ಯತ್ನ

0 23

ರಾಮದುರ್ಗ ೧೬: ಪಟ್ಟಣದ ಸರಕಾರಿ ಕೆಬಿಎಸ್ ನಂ. ೩ ರಲ್ಲಿ ಶಾಲೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಗುರುವಾರ ಯಥಾ ಪ್ರಕಾರ ಶಿಕ್ಷಕರು ಶಾಲೆಗೆ ಆಗಮಿಸಿದ ಸಂದರ್ಭದಲ್ಲಿ ಶಾಲೆಯ ಬೀಗ ಮುರಿದು ಒಳನುಗ್ಗಿ ಆಫೀಸಿನಲ್ಲಿದ ಟ್ರೇಜರಿ ಮುರಿದು ಕಾಗದ ಪತ್ರಗಳನ್ನು ಎಲ್ಲೆಡೆ ಬೀಸಾಕಿದ್ದಾರೆ. ಅಡುಗೆ ಕೋಣೆಯಲ್ಲಿ ಎಣ್ಣೆಯ ಹಾಗೂ ಹಾಲಿಪುಡಿಯ ಪಾಕೀಟ್ ಗಳನ್ನು ಬಿಸಾಕಿದ್ದಾರೆ. ೧ ಮತ್ತು ೫ನೇ ತರಗತಿ ಕೊಠಡಿಗಳ ಬೀಗ ಮುರಿದು ವಸ್ತುಗಳನ್ನು ಬೀಸಾಕಿ ಯಾವುದೇ ಸಾಮಾನು ಸಿಗದ ಸಂದರ್ಭದಲ್ಲಿ ವಾಪಸ್ಸಾಗಿದ್ದಾರೆ ಎಂದು ಶಾಲೆಯ ಮುಖ್ಯೋಪಾದ್ಯಾಯ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ರಾಮದುರ್ಗ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ, ಶಿಕ್ಷಕರಿಂದ ಮಾಹಿತಿ ಪಡೆದು ತನಿಖೆ ನಡೆಸಿದ್ದಾರೆ. ಪಟ್ಟಣದಲ್ಲಿ ಮೇಲಿಂದ ಮೇಲೆ ಕಳ್ಳತನದ ಪ್ರಕರಣಗಳು ನಡೆಯುತ್ತಿರುವುದಕ್ಕೆ ಸಾರ್ವಜನಿಕರು ಆತಂಕದಲ್ಲಿದ್ದಾರೆ. ಆದಷ್ಟು ಬೇಗ ಕಳ್ಳತನಕ್ಕೆ ವಿಫಲಯತ್ನ ನಡೆಸಿದ ಕಳ್ಳರ ಜಾಲವನ್ನು ಪೊಲೀಸರು ಬೇದಿಸಲಿ ಎಂಬುವದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You might also like
Leave a comment