ಎಲೆಕ್ಷನ್ ಮುಗೀತಿದ್ದಂತೆ ರಿಲ್ಯಾಕ್ಸ್‌ ಮೂಡ್ ನಲ್ಲಿ ಸಚಿವ ಸತೀಶ್‌ ಜಾರಕಿಹೊಳಿ

Ravi Talawar
WhatsApp Group Join Now
Telegram Group Join Now
ಬೆಳಗಾವಿ,08: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಫುಲ್‌ ರಿಲ್ಯಾಕ್ಸ್ ಮೂಡ್​ಗೆ ಜಾರಿದ ಸಚಿವ  ಸತೀಶ್‌ ಜಾರಕಿಹೊಳಿ ಅವರು,ತಮ್ಮ ಆಪ್ತರು ಮತ್ತು ಸ್ನೇಹಿತರ ಜೊತೆಯೊಂದಿಗೆ ಗೋಕಾಕ ನಗರದಲ್ಲಿರುವ ಶೆಟ್ಟಿ ಸ್ವೀಟ್ ಮಾರ್ಟ್ ಅಂಗಡಿಗೆ  ತೆರಳಿ ಅಲ್ಲಿ ಕೆಲಹೊತ್ತು ಕುಳಿತು ಎಂಜಾಯ್ ಮಾಡಿದ್ದಾರೆ.
ಹೌದು…ಲೋಕಸಭೆ ಮತದಾನಕ್ಕೆ  ಮಂಗಳವಾರ ತೆರೆ ಬಿದ್ದಿದ್ದು, ಪುತ್ರಿ ಪ್ರಿಯಂಕಾ ಜಾರಕಿಹೊಳಿಯನ್ನು ಚಿಕ್ಕೋಡಿ ಲೋಕ ಅಖಾಡದಲ್ಲಿ ಗೆಲ್ಲಿಸಲೇಬೆಕೆಂದು ಸಚಿವ  ಸತೀಶ್‌ ಜಾರಕಿಹೊಳಿಯವರು ಪಣ ತೊಟ್ಟಿದ್ದು,  ಕಳೆದ ನಾಲ್ಕು ತಿಂಗಳಿಂದ ದಿನದ 18 ಗಂಟೆ ಕ್ಷೇತ್ರಾದ್ಯಂತ ಸುತ್ತಿ, ಮತದಾರನ್ನು ಕಾಂಗ್ರೆಸ್‌ ಪಕ್ಷದತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಲ್ಲದೇ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ನಿರಂತರ ಸುತ್ತಾಟದಲ್ಲಿ ಬ್ಯುಸಿಯಾಗಿದ್ದರು.  ನಿನ್ನೆ ಮಾತ್ರ ಲೋಕಸಭಾ ಚುನಾವಣೆ ಅಂತ್ಯವಾಗಿದ್ದರಿಂದ ತಮ್ಮ ಓಡಾಟಕ್ಕೆ ಕೊಂಚ ಬ್ರೇಕ್ ಕೊಟ್ಟಿದ್ದು, ಇಂದು ಗೋಕಾಕ ನಗರದಲ್ಲಿರುವ ಶೆಟ್ಟಿ ಸ್ವೀಟ್ ಮಾರ್ಟ್ ಅಂಗಡಿಗೆ  ತೆರಳಿ ಕೆಲ ಹೊತ್ತು ಅಲೇ ಕುಳಿತು ಇತರರೊಂದಿಗೆ ನಗೆಚಟಾಕಿ ಹಾರಿಸುತ್ತ ಜಾಲಿಯಾಗಿ ಸಮಯ ಕಳೆದರು.  ಈ ವೇಳೆ ಹಲವು ಮುಖಂಡರು ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article