‘ಸಚಿವರೇ ನಾಲಿಗೆ ಮೇಲೆ ಹಿಡಿತವಿರಲಿ’ : ಸಚಿವ ನಾಗೇಂದ್ರರ ಹೇಳಿಕೆಗೆ ಗಾಲಿ ಅರುಣಾ ಲಕ್ಷ್ಮೀ ಪ್ರತ್ಯುತ್ತರ

Ravi Talawar
WhatsApp Group Join Now
Telegram Group Join Now
ಬಳ್ಳಾರಿ: ಏ 05 ನೂರು ಜನ ಜನಾರ್ದನ ರೆಡ್ಡಿ ಅಲ್ಲ, ಒಬ್ಬ ಜನಾರ್ದನ ರೆಡ್ಡಿ ಅಭಿಮಾನಿ ಸಾಕು ಕಾಂಗ್ರೆಸ್ ಅಲುಗಾಡಲಿಕ್ಕೆ ಎಂದು ಸಚಿವ ನಾಗೇಂದ್ರರ ಹೇಳಿಕೆಗೆ ಪ್ರತ್ಯುತ್ತರವನ್ನು ಗಾಲಿ ಅರುಣಾ ಲಕ್ಷ್ಮೀ ನೀಡಿದರು.
ನಗರದ ಹವಂಬಾವಿಯಲ್ಲಿ ನಡೆದ ಬಿಜೆಪಿಯ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಚಿವ ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಲವು ದಿನಗಳ ಹಿಂದೆ ಸಚಿವ ನಾಗೇಂದ್ರ ಅವರು, ಜನಾರ್ದನ ರೆಡ್ಡಿಯಂತ ನೂರು ಜನಾರ್ದನ ರೆಡ್ಡಿ ಬಂದ್ರೂ ಕಾAಗ್ರೆಸ್ ಅನ್ನ ಏನು ಮಾಡೊಕ್ ಆಗಲ್ಲ ಎಂದಿದ್ದರು. ಈ ಹೇಳಿಕೆಗೆ ವೇದಿಕೆಯಲ್ಲಿ ನಿಂತು ಪ್ರತಿಕ್ರಿಯೆ ನೀಡುತ್ತಾ ಅರುಣಾ ಲಕ್ಷಿö್ಮÃ ಸಚಿವರಾಗಿರುವಂತಹ ವ್ಯಕ್ತಿ ಜವಾಬ್ದಾರಿಯಿಂದ ಮಾತನಾಡಬೇಕು. ನಾಲಿಗೆಯ ಮೇಲೆ ಹಿಡಿತವಿರಬೇಕಾಗುತ್ತದೆ. ಜನಾರ್ದನ ರೆಡ್ಡಿ ಸಹಾಯದಿಂದ ರಾಜಕೀಯಕ್ಕೆ ಬಂದವರು ನೀವು. ಜನಾರ್ದನ ರೆಡ್ಡಿ ಬಗ್ಗೆ ಈ ರೀತಿ ಮಾತನಾಡಿದರೇ ನಿಮಗೆ ಶೋಭೆ ತರೊಲ್ಲ ಎಂದರು.
ಸುಭದ್ರ ರಾಷ್ಟç ನಿರ್ಮಾಣಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅಗತ್ಯವಾಗಿದೆ. ಮೋದಿಯವರ ಕೈ ಬಲಪಡಿಸಲು ಶ್ರೀರಾಮುಲುರವರನ್ನು ಗೆಲ್ಲಿಸಬೇಕಿದೆ ಎಂದು ಅವರು ತಿಳಿಸಿದರು.
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮಾತನಾಡಿ, ಬಿಜೆಪಿಗೆ ಮರಳಿರುವ ಜನಾರ್ದನ ರೆಡ್ಡಿ ಅವರನ್ನು ಹಾಡಿ ಹೊಗಳಿದರು. ಚಾಣಿಕ್ಯನಂತ ಬುದ್ಧಿವಂತಿಗೆ ಜನಾರ್ದನ ರೆಡ್ಡಿಗೆ ಇದೆ. ದಕ್ಷಿಣ ಭಾರತದ ಕರ್ನಾಟಕದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ದನ ರೆಡ್ಡಿ ಅವರ ರಾಜಕೀಯ ಚಾಣಕ್ಷö್ಯತೆಯೇ ಕಾರಣ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೋತೆ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಆನಂದ ಸಿಂಗ್, ನಾನು ಪಂಚ ಪಾಂಡವ ರಂತೆ ಕೆಲಸ ಮಾಡಿದ್ದೇವೆ ಎಂದು ರಾಜ್ಯದಲ್ಲಿನ ಬಿಜೆಪಿಯ ಮೊದಲ ಸರ್ಕಾರದ ಕಾಲವನ್ನು ನೆನಪಿಸಿ ಕೊಂಡರು
ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ಸುಭದ್ರವಾಗಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಟೆರರೆಸ್ಟ್ ಗಳು ವಿಧ್ವಂಸಕ ಕೃತ್ಯ ನಡೆಸುತಿದ್ದರು. ಮೋದಿ ಆಳ್ವಿಕೆಯಲ್ಲಿ ಭಾರತಕ್ಕೆ ಟೆರರೆಸ್ಟ್ಗಳು ಬರಲು ನಡುಗುತ್ತಾರೆ. ಪ್ರಧಾನಿ ಮೋದಿ ಸಬ್‌ಕಾ ವಿಕಾಸ್ ತತ್ವದಂತೆ ಹಿಂದೂ ಮುಸ್ಲಿಂ ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲಾ ಭಾರತೀಯರಿಗೆ ಉತ್ತಮ ಆಡಳಿತ ನೀಡಿದ್ದಾರೆ ಎಂದರು.
ಈ ಬಾರಿ ೪೦೦ ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ನನ್ನನ್ನು ಗೆಲ್ಲಿಸಿ ನವ ಭಾರತ ನಿರ್ಮಾಣದಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಬಳ್ಳಾರಿ ಮತದಾರ ನೀಡಲಿದ್ದಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಸ್ತುವಾರಿಗಳಾದ ರವಿಕುಮಾರ್, ಜೆ ಡಿ ಎಸ್   ಜಿಲ್ಲಾಅಧ್ಯಕ್ಷ ಮೀನಹಳ್ಳಿ ತಾಯಣ್ಣ, ಮುನ್ನ ಬಾಯ್, ಇಬ್ರಾಹಿಂಬಾಬು, ದಮ್ಮೂರ್ ಶೇಖರ್, ಗೋನಾಹಾಳ್ ರಾಜಶೇಖರ್ ಗೌಡ,  ಧಾರಪ್ಪ ನಾಯಕ, ಕೆ ಎಸ್ ದಿವಾಕರ್,ಅಲಿಖಾನ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article