ಮೂವರು ಉಗ್ರರ ಸಹಚರರ ಬಂಧನ: ಉಗ್ರ ಸಹಚರರ ಬಳಿ ಸಿಕ್ಕಿದ್ದೇನು?

Ravi Talawar
WhatsApp Group Join Now
Telegram Group Join Now

ಬಾರಮುಲ್ಲಾ,ಏಪ್ರಿಲ್ 2:  ಭದ್ರತಾ ಪಡೆಗಳು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಮೂವರು ಉಗ್ರರ ಸಹಚರರನ್ನು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರ ಸಹಚರರ ವಶದಿಂದ ಪಿಸ್ತೂಲ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಜಂಟಿ ಚೆಕ್ ಪಾಯಿಂಟ್ ಸ್ಥಾಪಿಸಿದ್ದ ಭದ್ರತಾ ಪಡೆಗಳು, ಮೂವರು ಅನುಮಾನಾಸ್ಪದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದು, ನಂತರ ಎಚ್ಚೆತ್ತುಕೊಂಡಿದ್ದು, ಸಾಕಷ್ಟು ಜಾಣ್ಮೆಯಿಂದ ಅವರನ್ನು ಬಂಧಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಫೈಸಲ್ ಅಹ್ಮದ್ ಕಚ್ರೂ, ಅಕಿಬ್ ಮೆಹರಾಜ್ ಕಾನಾ ಮತ್ತು ಆದಿಲ್ ಅಕ್ಬರ್ ಗೋಜ್ರೆ ಎಂದು ಗುರುತಿಸಲಾಗಿದೆ. ಶೋಧದ ಸಮಯದಲ್ಲಅವರ ವಶದಿಂದ ಪಿಸ್ತೂಲ್, ಮೊಬೈಲ್ ಫೋನ್ ಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಮೂವರ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

WhatsApp Group Join Now
Telegram Group Join Now
Share This Article