Hasirukranti
ಕ್ರೀಡೆ ಸಿನಿಮಾ

‘ವಿಶ್ವ ತಾಯಂದಿರ ದಿನ’ ಟ್ವೀಟ್ ಮೂಲಕ ಗಣ್ಯರ ಶುಭಾಶಯಗಳ ಸುರಿಮಳೆ!

ಬೆಳಗಾವಿ: ಮೇ 10: ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಸದಾನಂದಗೌಡ, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಚಿತ್ರನಟ ಜಗ್ಗೇಶ್, ಕಿಚ್ಚ ಸುದೀಪ್, ಮಾಲಾಶ್ರೀ, ದರ್ಶನ್, ಪ್ರೇಮ್, ಕ್ರಿಕೆಟ್ ತಾರೆಯರಾದ ಸಚಿನ್ ತೆಂಡೂಲಕರ್, ವಿರಾಟ್ ಕೊಹ್ಲಿ ಮಾಜಿ ಸಚಿವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸೇರಿದಂತೆ ಹಲವು ಗಣ್ಯರು ತಮ್ಮ ಟ್ವೀಟ್ಟರ್ ಖಾತೆಯ ಮೂಲಕ ತಾಯಂದಿರಿಗೆ ಶುಭಾಷಯ ಕೋರಿ ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಾಯಿಯ ತ್ಯಾಗಕ್ಕೆ ಈ ದಿನ ಮೀಸಲಾಗಿದ್ದು, ನನ್ನ ವ್ಯಕ್ತಿತ್ವದ ಮೇಲೆ ತಾಯಿಯ ಪ್ರಭಾಗವಿದ್ದು, ಬಡವರಿಗೆ ಮರಗುವ ಕಷ್ಟಕ್ಕೆ ಕರಗುವ ಆಕೆಯ ಗುಣಗಳು ನನ್ನಲ್ಲಿ ಬದಲಾವಣೆ ತಂದಿವೆ ಎಂದು ಟ್ವೀಟ್ ಮಾಡುವ ಮೂಲಕ ಅವರ ತಾಯಿಗೆ ಶುಭಾಷಯ ಕೋರಿ ಅವರ ಆಶೀರ್ವಾದ ಪಡೆಯುವ ಚಿತ್ರ ಹಂಚಿಕೊಂಡರೆ ಡಿಸಿಎಂ ಲಕ್ಷ್ಮಣ ಸವದಿ ತಾಯಿಗಾಗಿ ಬರೀ ಒಂದು ದಿನ ಅಲ್ಲ ಇಡೀ ಜೀವನ ಸಮರ್ಪಿತ ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಸಚಿವ ಯುಟಿ, ಖಾದರ್ ಕೂಡ ಅವರ ತಾಯಿಯವರ ಚಿತ್ರ ಹಂಚಿಕೊಂಡಿದ್ದಾರೆ.

ತಾಯಿ ತಂದೆಯನ್ನು ಗೌರವಿಸುವುದು ನಮ್ಮ ಸಂಸ್ಕøತಿಯಾಗಿದ್ದು, ತಾಯಿಯೇ ಪ್ರತ್ಯಕ್ಷ ದೇವರು ಅವಳ ಋಣ ತೀರಸಲು ಸಆಧ್ಯವಿಲ್ಲ ಅವರ ಸೇವೆ ಮಾಡುವುದು ಪುಣ್ಯವೇ ಸರಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಸದಾನಂದಗೌಡರು ಅವರ ತಾಯಿಯೊಂದಿಗಿನಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಚಿತ್ರನಟ ಕಿಚ್ಚ ಸುದೀಪ್ ಕೂಡ ಜೀವ ಕೊಟ್ಟ ಹೆತ್ತ ತಾಯಿ, ಜೀವನ ಕೊಟ್ಟ ಕನ್ನಡ ತಾಯಿ, ಅನ್ನ ಕೊಟ್ಟ ಭೂತಾಯಿ ಹಾಗೂ ಹೃದಯದಲ್ಲಿ ಪ್ರೀತಿ ಕೊಟ್ಟು ಅಕ್ಕರೆಯಿಂದ ಬೆಳೆಸುತ್ತಿರುವ ಅಭಿಮಾನಿ ತಾಯಂದಿರಿಗೆ ಶುಭಾóಶಯಗಳು ಎಂದು ಹೇಳುವ ಮೂಲಕ ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್ ತಾರೆಯರಾದ ವಿರಾಟ್ ಕೊಹ್ಲಿ, ಸುರೇಶ ರೈನಾ ಕೂಡ ತಾಯಿಯ ಬೇಷರತ್ ಪ್ರೀತಿತ್ಯಾಗಕ್ಕೆ ಧನ್ಯವಾದಗಳು ಎಂದು ಹೇಳುವ ಮೂಲಕ ಟ್ವೀಟ್ ಮಾಡಿದ್ದಾರೆ.À ಮಾಜಿ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ತಾಯಿಯೊಂದಿಗಿನ ಚಿತ್ರ ಹಂಚಿಕೊಂಡು ಟವೀಟ್ ಮಾಡಿದ್ದಾರೆ. ನಟ ತರುಣ ಸುಧೀರ್, ನಟಿ ಮಾಲಾಶ್ರೀ ಅವರ ತಾಯಿಯೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ಪ್ರೇಮ್, ನಟ ಜಗ್ಗೇಶ ಸೇರಿದಂತೆ ಹಲವು ಗಣ್ಯರು ತಮ್ಮ ತಾಯಂದಿರಿಗೆ ಶುಭಾóಶಯ ಕೋರಿ ಟ್ವೀಟ್ ಮಾಡುವ ಮೂಲಕ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಭಾಗಿಯಾಗಿ ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Related posts

ಮಕ್ಕಳ ಚಿತ್ರ : ನಮ್ಮ ಪ್ರೀತಿಯ ಶಾಲೆ

Siddu Naduvinmani

ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಥೀಮ್ ಪೋಸ್ಟರ್ ಬಿಡುಗಡೆ

Hasiru Kranti

ಮಹಿಳಾ ಟಿ20 ವಿಶ್ವಕಪ್: ಪತ್ನಿಗಾಗಿ ಟೂರ್ನಿಯನ್ನೇ ಬಿಟ್ಟು ತವರಿಗೆ ಓಡಿಬಂದ ಮಿಚೆಲ್ ಸ್ಟಾರ್ಕ್!

admins

Leave a Comment