Hasirukranti
ಬಳ್ಳಾರಿ

ಉದ್ಯೋಗ ಹುಡುಕಿಕೊಂಡು ಹೋಗುವ ಬದಲು ಉದ್ಯೋಗಪತಿಯಾಗಿ ಉದ್ಯೋಗ ನೀಡಿ.- ಗೋವಿಂದ ಕಾರಜೋಳ

ಮರಿಯಮ್ಮನಹಳ್ಳಿ : ಉದ್ಯೋಗ ಹುಡುಕಿಕೊಂಡು ಹೋಗುವ ಬದಲು ಉದ್ಯೋಗಪತಿಯಾಗಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದರೆ ಅವರ ಕುಟುಂಬಗಳು ತುಂಬಾ ಸುಖಮಯವಾಗಿರುತ್ತಾವೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ರವರು ನುಡಿದರು.

ಅವರು ಪಟ್ಟಣ ಸಮೀಪದ ಹಾರುವನಹಳ್ಳಿ ಗ್ರಾಮದ ಬಳಿ ನಿರ್ಮಾಣಗೊಂಡಿರುವ ಶ್ರೀ ಸಾಯಿ ಇಂಡಸ್ಟ್ರೀಸ್‍ನ ಮಿನಿ ಸಿಮೆಂಟ್ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಜಿರವರು ದುಡಿಯುವ ಕೈಗಳಿಗೆ ಕೆಲಸ ನೀಡುವ ಆತ್ಮನಿರ್ಭರ ಎಂಬ ಹೊಸ ಯೋಜನೆಯಡಿಯಲ್ಲಿ 20ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‍ನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಬೀದಿಬದಿ ವ್ಯಾಪಾರಿಗಳಿಗೆ, ಸಣ್ಣ ಸಣ್ಣ ಕೈಗಾರಿಕೆಗಳಿಗೆ, ದೊಡ್ಡ ಕೈಗಾರಿಕೆಗಳಿಗೆ ಸಹಾಯಧನದಲ್ಲಿ ಸಾಲವನ್ನು ನೀಡಲಾಗುತ್ತದೆ. ಮತ್ತು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇಕಡ 4ರಷ್ಟು ಬಡ್ಡಿ ದರದಂತೆ 10ಕೋಟಿ ರೂ.ಗಳ ವರೆಗೆ ಸಾಲವನ್ನು ನೀಡಲಾಗುವುದು. ಇದರ ಜೊತೆಗೆ ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬಂದವರಿಗೆ ಶೇಕಡ 75ರಷ್ಟು ಸಹಾಯಧನದಲ್ಲಿ ಕೆಐಡಿಬಿಯ ಮೂಲಕ ಭೂಮಿಯನ್ನು ಸರ್ಕಾರವು ಕೊಡುವ ಕೆಲಸ ಮಾಡುತ್ತದೆ ಎಂದರು.

ನಂತರ ಕೊಟ್ಟೂರು ಮಠದ ಡಾ.ಸಂಗನಬಸುವ ಸ್ವಾಮೀಜಿ ರವರು ಮಾತನಾಡಿ, ರಾಜಕೀಯದಲ್ಲಿ ವಿಶಾಲವಾದ ಮನಸ್ಸುಗಳು ಇರಬೇಕು. ವಿಶಾಲವಾದ ಗುಣಗಳನ್ನು ಉದ್ಯಮಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉದ್ಯೋಗಗಳನ್ನು ನೀಡಲು ಮಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖೆ ಸಚಿವ ಆನಂದಸಿಂಗ್, ವಿಧಾನ ಪರಿಷತ್ ಸದಸ್ಯ ಅರುಣ್ ಶಹಪೂರ್, ಶ್ರೀಸಾಯಿ ಇಂಡಸ್ಟ್ರೀಸ್‍ನ ಸುಧಾಕರ್ ಹಿರೇಮಠ, ಕೆನರಾಬ್ಯಾಂಕ್ ವ್ಯವಸ್ಥಾಪಕ ಮೋಹನ್ ಕುಮಾರ್, ಅರ್ಜುನ್ ಹಿರೇಮಠ, ಶ್ರೀನಿವಾಸ್ ಐಯ್ಯರ್ , ಮಹಾಂತೇಶ್ ಹಿರೇಮಠ, ಜಿತೇಂದ್ರ, ವಿಶ್ವನಾಥ ಹಿರೇಮಠ, ಮುನ್ನಸಿಂಗ್, ತಾ.ಪಂ.ಸದಸ್ಯ ರಾಜಪ್ಪ, ಮುಖಂಡರಾದ ಗರಗ ಪ್ರಕಾಶ್, ಓಬಪ್ಪ, ವೀರೇಶ್ ಸ್ವಾಮಿ, ಇತರರಿದ್ದರು.

Related posts

ಸಾಯಿಭಾಬಾ ರಸ್ತೆಯ ಗುಜ್ಜಲ್ ಪೆಟ್ರೋಲ್ ಪಂಪ್‍ನಲ್ಲಿ ನೀರು ಮಿಶ್ರಿತ; ಪೆಟ್ರೋಲ್ ಗ್ರಾಹಕ ಕಂಗಾಲು

Siddu Naduvinmani

ಬುಡಾದಿಂದ ಇನ್ಮುಂದೆ ಸರ್ವೆ ನಕ್ಷೆ ಬದಲಿಗೆ ಲೇಔಟ್ ಯೋಜನಾ ನಕ್ಷೆ ನೀಡಿಕೆ: ದಮ್ಮೂರು ಶೇಖರ್

Hasiru Kranti

ಬಳ್ಳಾರಿಯಲ್ಲಿಂದು ಕೊರೋನಾಗೆ ಮರಣ ಮೃದಂಗ

Siddu Naduvinmani

Leave a Comment