Hasirukranti
ಬಳ್ಳಾರಿ

‘ಬಳ್ಳಾರಿ ಜಿಲ್ಲೆ’ಯ ಇಬ್ಬಾಗದ ನೋವು ಸದಾ ಕಾಡುತ್ತದೆ: ಶಾಸಕ ಜಿ.ಸೋಮಶೇಖರ್ ರೆಡ್ಡಿ

ಬಳ್ಳಾರಿ ಬಂದ್ ನೇರವಾಗಿ ಭಾಗಿಯಾಗಲ್ಲ; ಬಂದ್ ಯಶಸ್ವಿಯಾಗಲಿ

ಬಳ್ಳಾರಿ,ನ.21: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಪ್ರತ್ಯೇಕವಾಗಿ ರಚಿಸುತ್ತಿರುವ ಸರಕಾರದ ನಿರ್ಧಾರ ನೋವು ತಂದಿದೆ. ಎಂದಿಗೂ ಜಿಲ್ಲೆಯ ಇಬ್ಭಾಗದ ನೋವು ನನ್ನನ್ನು ಸದಾ ಕಾಡುತ್ತದೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಹೇಳಿದರು.

ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಆಡಿಯಲ್ಲಿ ನಗರದ ಮಿಲ್ಲರ್ ಪೇಟೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಧತ್ವ ನಿಯಂತ್ರಣ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಜಯನಗರ ಜಿಲ್ಲೆ ವಿಭಜನೆ ಹೋರಾಟಕ್ಕೆ ಸಂಬಂಧಿಸಿದಂತೆ ತೀವ್ರ ಅಸಹಾಯಕ ಕಥೆ ವ್ಯಕ್ತಪಡಿಸಿದ ಶಾಸಕ ಸೋಮಶೇಖರ್ ರೆಡ್ಡಿ ಅವರು ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಭಜನೆ ಮಾಡದಿರುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯು ಇಂದಲ್ಲ ನಾಳೆ ಯಾವುದೇ ಸರ್ಕಾರ ಬಂದ್ರೂ ವಿಭಜನೆ ಯಾಗೋದು ನಿಲ್ಲಲ್ಲವೆಂದು ಮುಖ್ಯಮಂತ್ರಿಗಳಾದಿಯಾಗಿ ಅನೇಕ ಹಿರಿಯ ಸಚಿವರು ಹೇಳಿದ್ದಾರೆ. ಪ್ರತಿರೋಧ ಕೈಬಿಡಲು ತಿಳಿಸಿದ್ದಾರೆ ಎಂದರು.

ಬಳ್ಳಾರಿ ವಿಭಜನೆಯಾಗದೇ ಅಖಂಡವಾಗಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.ಜಿಲ್ಲೆಯ ಎಲ್ಲ ಶಾಸಕರು ಬಯಸಿದ್ರೇ ಮತ್ತೊಮ್ಮೆ ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗುತ್ತೇನೆ ಎಂದರು.

ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನವೆಂಬರ್ 26ರಂದು ಬಳ್ಳಾರಿ ಬಂದ್ ಕರೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಸರ್ಕಾರದ ಭಾಗವಾಗಿ ನೇರವಾಗಿ ಬೆಂಬಲಿಸಲ್ಲ. ಅವರ ಬಂದ್ ಯಶಸ್ವಿಯಾಗಲಿ ಎಂದು ಆಶಿಸಿದರು.
ಜಿಲ್ಲೆಯಲ್ಲಿ ವಿಧಾನಪರಿಷತ್ ಸದಸ್ಯ ಕೊಂಡಯ್ಯ ಬಿಟ್ಟರೇ ಬೇರೆ ಯಾರು ಇಬ್ಭಾಗಕ್ಕೆ ಬೆಂಬಲಿಸಿಲ್ಲ.ಸಚಿವ ಶ್ರೀರಾಮುಲು ಸಹಮತ ವ್ಯಕ್ತಪಡಿಸಿರುವುದು ಅವರು ವೈಯಕ್ತಿಕ ವಿಚಾರ ಎಂದರು.

ಜಾತಿಗೊಂದು ನಿಗಮ ಮಾಡುವುದು ಸರಿಯಲ್ಲ.ನಿಗಮದ ಬದಲಿಗೆ ಸರಕಾರವು ಎಲ್ಲ ಜಾತಿಗಳಲ್ಲಿನ ಬಡಜನರಿಗೆ ಸಹಾಯ ಮಾಡುವ ಕೆಲಸ ಮಾಡಲಿ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸ್ ಮೋತ್ಕರ್ ಮತ್ತಿತರರು ಇದ್ದರು.

Related posts

ಬಳ್ಳಾರಿ ನೆರೆ – ನಲುಗಿದ ಕುಂದರನಾಡು

Siddu Naduvinmani

ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ : ಚರ್ಚೆ

Siddu Naduvinmani

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು,ಜನರ ಹಿತ ಕಾಪಾಡಬೇಕು-ಡಿ.ಕೆ.ಶಿವಕುಮಾರ್

Siddu Naduvinmani

Leave a Comment