Hasirukranti
ಬೆಳಗಾವಿ

ಡಿಸೆಂಬರ್ 19ರಂದು ಬೃಹತ್ ಲೋಕ ಅದಾಲತ್ ಆರಂಭ, ಇದರ ಸದುಪಯೋಗ ಪಡೆದುಕೊಳ್ಳಿ ; ನ್ಯಾ. ವೀರಭದ್ರಯ್ಯ

 

ಸವದತ್ತಿ : ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಡಿಸೆಂಬರ್ 19ರಂದು ಬೃಹತ್ ಲೋಕ ಅದಾಲತ್ ಆರಂಭವಾಗಲಿದೆ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ವೀರಭದ್ರಯ್ಯ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದಿಂದ ರಾಷ್ಟ್ರೀಯ ಏಕತಾ ಸಪ್ತಾಹ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ಪ್ರಕರಣಗಳ ಪಕ್ಷಗಾರರೊಂದಿಗೆ ವಿಡಿಯೋ ಸಂವಾದದ ಮೂಲಕ ಮೇಘಾ ಲೋಕ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗುವುದು. ಹಳೆಯ ಪ್ರಕರಣಗಳನ್ನು ರಾಜಿ ಮಾಡಿಕೊಂಡು ಮುಕ್ತಾಯಗೊಳಿಸಲು ಇದೊಂದು ಸದಾವಕಾಶ ವಾಗಿದೆ ಜನನ ಪ್ರಮಾಣಪತ್ರದಲ್ಲಿನ ಗೊಂದಲ ಪುರಸಭೆ ಮತ್ತು ಹೆಸ್ಕಾಂನ ಬಾಕಿ ಮರುಪಾವತಿಯಲ್ಲಿನ ಪ್ರಕರಣಗಳನ್ನು ಕೂಡಾ ಇಲ್ಲಿ ಬಗೆಹರಿಸಲಾಗುವುದು ಎಂದರು.

ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು ಸುಭದ್ರವಾದ ಸಂವಿಧಾನವನ್ನು ಹೊಂದಿದೆ ಜನರು ಸಹೋದರತೆ ಮತ್ತು ಐಕ್ಯತೆಯನ್ನು ರೂಢಿಸಿಕೊಂಡು ಶಾಂತಿಯುತವಾಗಿ ಜೀವನ ನಿರ್ವಹಿಸಬೇಕು ಯಾವುದೇ ಕೋಮು ಗಲಭೆ ಇತರೆ ವಾಜ್ಯಗಳಿಗೆ ತಮ್ಮನ್ನು ತಾವು ಪ್ರಚೋದಿಸದೆ ಮನಸ್ಸನ್ನು ಹತೋಟಿಯಲ್ಲಿಟ್ಟು ಸರಳ ಸುಸಜ್ಜಿತ ಜೀವನ ನಡೆಸಲು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ದಿವಾನಿ ನ್ಯಾಯಾಧೀಶ ಹೇಮಶ್ರೀ. ಎರಡನೇ ಹೆಚ್ಚುವರಿ ದಿವಾನಿ ನ್ಯಾಯಾಧೀಶ ಹರೀತ್ ಜಿ. ತಾಲೂಕು ದಂಡಾಧಿಕಾರಿ ಪ್ರಶಾಂತ ಪಾಟೀಲ್. ಸಿಪಿಐ ಮಂಜುನಾಥ ನಡುವಿನಮನಿ. ಪುರಸಭೆ ಉಪಾಧ್ಯಕ್ಷ ದೀಪಕ್ ಜಾನ್ವೆಕರ್. ಎಂ,ಎಂ,ಮುತ್ತಿನ. ಎಮ್,ಎಸ್,ನದಾಪ್
ಇತರರು ಇದ್ದರು. ಕೆ.ಬಿ.ಕಾಂಬಳೆ ನಿರೂಪಿಸಿದರು. ಜೆ. ಡಿ.ಮಿರ್ಜಿ ವಂದಿಸಿದರು.

Related posts

ಇಸ್ಪೀಟ ಅಡ್ಡೆ ಮೇಲೆ ದಾಳಿ; 11 ಜನರ ಬಂಧನ

Siddu Naduvinmani

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ  ಪ್ರವಾಸ ವಿವರ ಇಲ್ಲಿದೆ ನೋಡಿ….

Siddu Naduvinmani

ವಾರಿಯರ್ಸಗಳಾಗಿ ಹೊರಾಡಿದವರಿಗೆ ಸಚಿವ ರಮೇಶ ಜಾರಕಿಹೋಳಿಯವರಿಂದ ಜೀವ ರಕ್ಷಕ ಕೀಟ್ ವಿತರಣೆ

Siddu Naduvinmani

Leave a Comment