Hasirukranti
ಬೆಳಗಾವಿ

ಹುಕ್ಕೇರಿ : ರಮೇಶ ಕತ್ತಿ ಬಿ ಡಿ ಸಿ ಸಿ ಅದ್ಯಕ್ಷ – ಹರಕೆ ತೀರಿಸಿದ ಅಭಿಮಾನಿಗಳು

ಬೆಳಗಾವಿ: ಜಿಲ್ಲೆಯ ಪ್ರತಿಷ್ಟಿತ ಬಿ ಡಿ ಸಿ ಸಿ ಬ್ಯಾಂಕ್ ಅದ್ಯಕ್ಷ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷದ ನಾಯಕರು 3 ಗುಂಪುಗಳಾಗಿ ತಮ್ಮ ಹಿಂಬಾಲಕರನ್ನು ಅದ್ಯಕ್ಷ ಸ್ಥಾನ ನೀಡಲು ತೇರೆಯ ಹಿಂದೆ ಮಸಲತ್ತು ನಡೆಸಿದ್ದರು, ಕೋನೆಯ ಗಳಿಗೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಅದ್ಯಕ್ಷ ಸ್ಥಾನವನ್ನು ಪಡೆಯಲು ಯಶಸ್ವಿಯಾದರು , ಆದರೆ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ರಮೇಶ ಕತ್ತಿ ಅಭಿಮಾನಿಗಳ ಸಂಘದ ಸದಸ್ಯರು ರಮೇಶ್ ಕತ್ತಿ ಅದ್ಯಕ್ಷ ಸ್ಥಾನ ಸಿಕ್ಕರೆ ಬಡಕುಂದ್ರಿ ಗ್ರಾಮದಿಂದ ಬೆಲ್ಲದ ಬಾಗೆವಾಡಿಯ ಕತ್ತಿಯವರ ಮನೆ ವರೆಗೆ ಪಾದ ಯಾತ್ರೆ ಮಾಡುವದಾಗಿ ಗ್ರಾಮ ದೇವತೆ ಹೋಳೆಮ್ಮಾ ದೇವಿಯಲ್ಲಿ ಮೋರೆ ಹೋಗಿದ್ದರು.

ಈಗ ರಮೇಶ ಕತ್ತಿ ಬೆಳಗಾವಿ ಕೇಂದ್ರ ಸಹಕಾರಿ ಬ್ಯಾಂಕ್ ಅದ್ಯಕ್ಷರಾಗಿ ಅಧಿಕಾರ ಸ್ವಿಕರಿಸಿದ ನಂತರ ಇಂದು ಅಪ್ಪಟ ಅಭಿಮಾನಿಗಳಾದ ಸಂತೋಷ ಕಮತೆ ಮತ್ತು ಸಾತಗೌಡಾ ಗುಡಸಿ ಬಡಕುಂದ್ರಿ ಬಸವೇಶ್ವರ ಸರ್ಕಲ್ ದಿಂದ ಪಾದಯಾತ್ರೆ ಕೈಗೊಂಡರು.
ಅವರು ಹೋಗುವ ದಾರಿಯಲ್ಲಿ ಕತ್ತಿ ಅಭಿಮಾನಿಗಳಾದ ಹುಕ್ಕೇರಿ ಪಿ ಕೆ ಪಿ ಎಸ್ ಅದ್ಯಕ್ಷ ಅಣ್ಣಪ್ಪಾ ಸಂಬಾಳ ಪಾದಯಾತ್ರೆ ಮಾಡುತ್ತಿರುವ ಯುವಕರನ್ನು ಸತ್ಕರಿಸಿ ಮಾದ್ಯಮಗಳೊಂದಿಗೆ ಮಾತನಾಡಿ ರಮೇಶ ಕತ್ತಿ ಯವರ ಡಿ ಸಿ ಸಿ ಬ್ಯಾಂಕ ಅದ್ಯಕ್ಷರನ್ನಾಗಿ ಮಾಡಲು ಈ ಯುವಕರು ದೇವ ಮೋರೆ ಹೋಗಿ ಅದರ ಫಲವಾಗಿ ಇಂದು ಪಾದಯಾತ್ರೆ ಮಾಡುತ್ತಿದ್ದಾರೆ, ಕತ್ತಿ ಯವರ ಅಭಿಮಾನ ಬಳಗದ ಈ ಕಾರ್ಯ ಶ್ಲಾಘನೀಯ ಎಂದರು ( )
ಶಿವಜ್ಞಾನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೆಶಕ ಮಲ್ಲಯ್ಯಾ ಮಠಪತಿ ಯುವರಿಗೆ ಹಾರ ಹಾಕಿ ಅವರ ಕಾರ್ಯಕ್ಕೆ ಮೇಚ್ಚುಗೆ ವ್ಯಕ್ತ ಪಡಿಸಿದರು.

ನಂತರ ಪಾದಯಾತ್ರೆ ಕೈಕೊಂಡ ಬಡಕುಂದ್ರಿ ಯುವಕ ಸಂತೋಷ ಕಮತೆ ಮಾತನಾಡಿ ಕಳೆದ 34 ವರ್ಷದಿಂದ ಸಹಕಾರಿ ರಂಗದಲ್ಲಿ ಅನುಭವಿ ಹಾಗೂ ರೈತರಿಗೆ ಒಳ್ಳೆಯ ಯೊಜನೆಗಳು ತಂದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಡವಾಗಲು ಶ್ರಮಿಸುವ ರಮೇಶ ಕತ್ತಿ ಯವರಿಗೆ ಈ ಬಾರಿಯ ಡಿ ಸಿ ಸಿ ಬ್ಯಾಂಕ ಅದ್ಯಕ್ಷರಾಗುವದು ಅವಶ್ಯಕ ವಾಗಿದ್ದರಿಂದ ಬಡಕುಂದ್ರಿ ಹ್ರಾಮದ ರಮೇಶ ಕತ್ತಿ ಅಭಿಮಾನಿ ಬಳಗದವರು ದೇವರಲ್ಲಿ ಮೋರೆ ಹೋಗಿ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಿದರೆ ಬಡಕುಂದ್ರಿ ಗ್ರಾಮದಿಂದ ಬೆಲ್ಲದ ಬಾಗೆವಾಡಿ ವರಗೆ ಪಾದಯಾತ್ರೆ ಮಾಡುವದಾಗೆ ಹರಕೆ ಹೊತ್ತು ದೇವರಲ್ಲಿ ಕೇಳಿಕೊಂಡಿದ್ದೆವು ಅದರಂತೆ ಇಂದು ನಾವು 25 ಕೀಲೊ ಮೀಟರ ನಡೆದುಕೊಂಡು ಹೊಗುತ್ತಿದ್ದೆವೆ ಎಂದರು ( )
ಈ ಸಂದರ್ಭದಲ್ಲಿ ಪುಂಡಲೀಕ ಮಾನಗಾಂವಿ, ಅನೀಲ ಮುನ್ನೋಳ್ಳಿ, ಮಲ್ಲಯ್ಯಾ ಮಠಪತಿ, ಅಣ್ಣಪ್ಪಾ ಸಂಬಾಳ ಮೊದಲಾದವರು ಉಪಸ್ಥಿತರಿದ್ದರು.

Related posts

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ, ರಾಜ್ಯದ ಜನತೆಗೆ ಉಚಿತ ಲಸಿಕೆ ; ಡಿಸಿಎಂ ಡಾ. ಅಶ್ವತ್ಥ ನಾರಾಯಣ

Siddu Naduvinmani

ಶವ ಸಂಸ್ಕಾರಕ್ಕೆ ಹೆಗಲು ಕೊಡಲಿಲ್ಲ ಜನ : ತಳ್ಳುಗಾಡಿಯೇ ಆಧಾರವಾಯ್ತು!

Hasiru Kranti

ಶೆಟ್ಟಿಗಲ್ಲಿ ರಸ್ತೆಗೆ ಅಡ್ಡಲಾಗಿ ಮಣ್ಣಿನ ರಾಶಿ ದಿಗ್ಬಂಧನ : ಇದು ಕಳೆದ ಮೂರು ತಿಂಗಳ ಸಮಸ್ಯೆ

Hasiru Kranti

Leave a Comment