Hasirukranti
ಬೆಳಗಾವಿ

ರಾಜ್ಯದಲ್ಲಿ ಕ್ಲಸ್ಟರ್ ಮೂಲಕ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿದ ಪ್ರಥಮ ವಿಶ್ವವಿದ್ಯಾಲಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ: ಪ್ರೋ. ರಾಮಚಂದ್ರಗೌಡ

 

ಚಿಕ್ಕೊಡಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರಾಮಚಂದ್ರೇಗೌಡ ಅವರು ಚಿಕ್ಕೋಡಿಯ ಬಿ.ಕೆ ಕಾಲೇಜಿನಲ್ಲಿ ನಡೆಯುತ್ತಿರುವ ಪ್ರಾಯೋಗಿಕ ಪರೀಕ್ಷೆಗಳನ್ನು ವೀಕ್ಷಣೆ ಮಾಡಲು ಆಗಮಿಸಿದ್ದರು. ಇವರ ಜೋತೆಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸ್ಪೆಷಲ್ ಆಫಿಸರ್ ಆದ ಹಾಗೂ ಬೆಳಗಾವಿಯ ಸಂಗೋಳ್ಳಿ ರಾಯಣ್ಣ ಪದವಿ ಮಹಾವಿದ್ಯಾಲಯ ಪ್ರಾಚಾಯ್ರರರು ಆದ ಡಾ. ಎನ್.ಜಯಪ್ಪ ಸರ್ ಅವರು ಕೂಡ ಆಗಮಿಸಿದ್ದರು.

ತದನಂತರ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿರುವ ಪ್ರತಿಯೊಂದು ಕೊಠಡಿಗೆ ಹೊಗಿ ಕುಲಪತಿಗಳು ಮತ್ತು ಸಂಗೋಳ್ಳಿ ರಾಯಣ್ಣ ಪದವಿ ಮಹಾವಿದ್ಯಾಲಯದ ಪ್ರಾಚಾಯ್ರರರಾದ ಡಾ.ಎನ್ ಜಯಪ್ಪ ಸರ್ ಹಾಗೂ ಮೇಲ್ವಿಚಾರಕರಾದ ಡಾ.ನಾಗರಾಜ್ ಸರ್ ಅವರು ಪಾಠ ಮಾಡುತ್ತಿದ್ದ ಪ್ರಶಿಕ್ಷಣಾರ್ತಿಗಳನ್ನು ವೀಕ್ಷಿಸಿ ಅವರಿಗೆ ಪಾಠವನ್ನು ಹೇಗೆ ಮಾಡಬೇಕು ಎಂದು ಸ್ವತಃ ಕುಲಪತಿಗಳಾದ ಪ್ರೊ. ರಾಮಚಂದ್ರಗೌಡ ಅವರು ತಿಳಿಸಿದರು.

ನಂತರ ಕುಲಪತಿಗಳು ಮಾತನಾಡಿ, ಪ್ರಾಯೋಗಿಕ ಪರೀಕ್ಷೆಗಳನ್ನು ಕ್ಲಸ್ಟರ್ ಮಾಡುವ ಮೂಲಕ ನಡೆಸಿದ ಪ್ರಥಮ ವಿಶ್ವವಿದ್ಯಾಲಯ ಎಂಬ ಖ್ಯಾತಿಯನ್ನು ನಮ್ಮ ಚೆನ್ನಮ್ಮ ವಿಶ್ವವಿದ್ಯಾಲಯ ಪಡೆದುಕೊಂಡಿದೆ ಎಂದು ತಿಳಿಸಿದರು. ಕ್ಲಸ್ಟರ್ ಮಾಡುವ ಉದ್ದೇಶವೇನೆಂದರೆ ಬಿ.ಈಡಿ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಈ ಕ್ಲಸ್ಟರ್ ಮಾಡಲಾಗಿದೆ. ಹಾಗೂ ಮನೆಯಲ್ಲಿ ಕುಳಿತು ಬಿ.ಈಡ್ ಪದವಿ ಮಾಡುತ್ತಿರುವವರಿಗೆ ಇನ್ನು ಮುಂದೆ ಈ ಯಾವುದೇ ತರಹದ ಅವಕಾಶವಿಲ್ಲ. ಎಲ್ಲರೂ ದಿನಾಲೂ ಕಾಲೇಜಿಗೆ ಬಂದು ಶಿಕ್ಷಣವನ್ನು ಪಡೆದುಕೊಳ್ಳಬೆಕು ಎಂದು ಕುಲಪತಿಗಳು ತಿಳಿಸಿದರು.

ಮುಂದೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಕೂಡ ಸದ್ಯದಲ್ಲೇ ಕ್ಲಸ್ಟರ್ ಪದ್ಧತಿಯನ್ನು ತರಲಾಗುವದು ಎಂದು ತಿಳಿಸಿದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಅಧೀನದಲ್ಲಿ ಸುಮಾರು 52 ಬಿ.ಈಡ್ ಕಾಲೇಜುಗಳು ಇವೆ. ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳು ವಿಶ್ವವಿದ್ಯಾಲಯದಲ್ಲಿ ಮಾಡುತ್ತೆವೆ ಹಾಗೂ ಈ ಪ್ರಾಯೋಗಿಕ ಪರೀಕ್ಷೆಗಳಲ್ಲಿ ನಡೆಯುವ ಆಕ್ರಮಗಳನ್ನು ತಡೆಯಲು ನಾವು ವಿಶ್ವವಿದ್ಯಾಲಯದ ವತಿಯಿಂದ ನಾಲ್ಕು ಜನರ ಮೇಲ್ವಿಚಾರಣಾ ಸಮಿತಿಯನ್ನು ನೇಮಕ ಮಾಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ದಿಂದ ಮೇಲ್ವಿಚಾರಕರಾಗಿ ನಿಯೋಜನೆಗೊಂಡಿರುವ ಡಾಕ್ಟರ್ ನಾಗರಾಜ್ ಸರ್ ಹಾಗೂ ಬಿ.ಕೆ ಪದವಿ ಕಾಲೇಜಿನ ಪ್ರಾಚಾಯ್ರರರ ನೇತೃತ್ವದಲ್ಲಿ ಅತೀ ಸುಗಮವಾಗಿ ಈ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಹಾಗೂ ಈ ಪ್ರಾಯೋಗಿಕ ಪರೀಕ್ಷೆಗಳು ಸುಗಮವಾಗಿ ನಡೆಯಲು ಎಲ್ಲ ಶಿಕ್ಷಕರಿಗೂ ಕೂಡ ವಿಶ್ವವಿದ್ಯಾಲಯದ ಪರೀಕ್ಷಾ ಮಾರ್ಗಸೂಚಿ ಅನ್ವಯ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಸಲಹೆ ಸೂಚನೆಗಳನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಮೇಲ್ವಿಚಾರಕರಾಗಿ ಆಗಮಿಸಿದ ಡಾ. ನಾಗರಾಜ್ ಸರ್ ಅವರ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದರು.

ಅದೇ ರೀತಿ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡಿಕೊಂಡು ಕಾಲೇಜಿನ ಶಾಲಾ ಕೊಠಡಿಗೆ ಆಗಮಿಸಿ ಪಾಠ ಭೋದನೆಯನ್ನು ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿ.ಕೆ ಪದವಿ ಕಾಲೇಜಿನ ಪ್ರಾಚಾಯ್ರರರು ಹಾಗೂ ಮೇಲ್ವಿಚಾರಕರಾದ ಡಾ.ನಾಗರಾಜ್ ಸರ್ ಮತ್ತು ಬೇರೆ ಬೇರೆ ಕಾಲೇಜಿನಿಂದ ಆಗಮಿಸಿದ ಎಲ್ಲಾ ಶಿಕ್ಷಕ ವೃಂದದವರು ಹಾಗೂ ಕಂಬಾರ್ ಸರ್ ಓಡೆಯರ್ ಸರ್ ಮುಂತಾದವರು ಇದ್ದರು.

Related posts

ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ?

Hasiru Kranti

ಮುನವಳ್ಳಿ ಪುರಸಭೆ ಸದಸ್ಯನನ್ನು ಉಚ್ಛಾಟನೆಗೊಳಿಸಿದ ಬಿಜೆಪಿ ಪಕ್ಷ

Siddu Naduvinmani

ರಾಜ್ಯದಲ್ಲಿ ಮತ್ತೆ 1502 ಜನರಿಗೆ ಕೊರೊನಾ ಸೋಂಕು : 19 ಬಲಿ

Hasiru Kranti

Leave a Comment