Hasirukranti
leadingnews ಬೆಳಗಾವಿ ರಾಜ್ಯ

ಉಪಕದನಕ್ಕೆ ಕೈಪಾಳ್ಯದ ತಯಾರಿ; ಶಾಸಕ ಸತೀಶ್ ಜಾರಕಿಹೊಳಿ‌ ಅವರದ್ದೇ ಉಸ್ತುವಾರಿ

 

ಬೆಳಗಾವಿ, ನ, 21: ಕೆಪಿಸಿಸಿ ಆದೇಶದಂತೆ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆಯ ಕುರಿತು ಸಮಿತಿ ಚರ್ಚೆ ಮಾಡಿದೆ. ಒಂದು ವಾರದ ಬಳಿಕ ಮತ್ತೆ ಸಭೆ ಸೇರುತ್ತೇವೆ. ಈ ಚುನಾವಣೆ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿಯೇ ನಡೆಯುತ್ತದೆ ಎಂದು ಮಾಜಿ ಸಚಿವ, ಅದ್ಯಕ್ಷ ಎಂ.ಬಿ ಪಾಟೀಲ ಸ್ಪಷ್ಟಪಡಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸಭೆಯ ಬಳಿಕ
ಪತ್ರಿಕಾಗೋಷ್ಠಿಯಲ್ಲಿ ನಾತನಾಡಿದ ಅವರು, ಬೆಳಗಾವಿ ಲೋಕಸಭೆ ಉಪ ಚುನಾವಣೆ ಗೆ 7 ರಿಂದ 8 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಇನ್ನು ಯಾರು ಯಾರು ಮುಂದೆ ಬರುತ್ತಾರೆ ಎನ್ನುವದನ್ನು ಕಾದು ನೋಡುತ್ತೇವೆ. ಅದರಲ್ಲಿ ಸತೀಶ ಜಾರಕಿಹೊಳಿ ಅವರು ಕೂಡಾ ಅದರಲ್ಲಿ ಸೇರಿದವರಾಗಿದ್ದಾರೆ. ಎಲ್ಲ ಜಾತಿ ಜನಾಂಗದವರನ್ನು ಜೊತೆ ಕರೆದುಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವದಾಗಿ ತಿಳಿಸಿದರು. ಎಲ್ಲರ ಅಭಿಪ್ರಾಯ ಕೇಳಿದ್ದೇವೆ ಮುಕ್ತವಾಗಿ ಎಲ್ಲರು ತಮ್ಮ ಅಭಿಪ್ರಾಯ ವ್ಯಕ್ತ ಮಾಡಿದ್ದಾರೆ. ಪ್ರತಿ ಕ್ಷೇತ್ರದಲ್ಲು ಓರ್ವರನ್ನು ಗುರುತಿಸಿ ಅವರಿಗೆ ಜಬ್ದಾರಿ ನೀಡುವದಾಗಿ ಹೇಳಿದರು.

ಮುಂದಿನ ವಾರದಲ್ಲಿ ಮತ್ತೆ ಸಭೆ ಸೇರಲಿದ್ದೆವೆ.
ಮತ್ತೊಮ್ಮೆ ಅವರ ಅನಿಸಿಕೆಗಳನ್ನು ಕೇಳುತ್ತೇವೆ
ಎಂದು ನುಡಿದರು. ಇದೇ ವೇಳೆ ಪ್ರಕಾಶ ಹುಕ್ಕೇರಿ ಅವರು ಹೇಳಿರುವ ಯಾವದೇ ಪಕ್ಷ ಟಿಕೇಟ ನೀಡಿದರೆ ಸ್ಪರ್ಧೆ ಮಾಡುವದಾಗಿ ಹೇಳಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಪ್ರಕಾಶ ಹುಕ್ಕೇರಿ ಅವರು ಸುರೇಶ ಅಂಗಡಿ ಅವರ ಕುಟುಂಬದ
ಬಗ್ಗೆ ಭಾವನಾತ್ಮಕವಾಗಿ ಮಾತನಾಡುವಾಗ ಆ
ರೀತಿಯಾಗಿ ಮಾತನಾಡಿದ್ದಾರೆ. ಅದರ ಬಗ್ಗೆ ಹೆಚ್ಚು ಮಹತ್ವ ನೀಡುವದು ಬೇಡ ಎಂದು ಹೇಳಿದರು.

ಬಳಿಕ ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾತನಾಡಿ, 8 ಕ್ಷೇತ್ರದ ಮುಖಂಡರು ಇಂದಿನ ಸಭೆಯಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇನ್ನು ಕಾರ್ಯಕರ್ತರು, ಮುಖಂಡರು ಅಭಿಪ್ರಾಯ ಪಡೆದುಕೊಳ್ಳುವುದು ಬಾಕಿಯಿದೆ. ಹೀಗಾಗಿ ಮತ್ತೊಮ್ಮೆ ಸಭೆ ಸೇರಿ ಅಂತಿಮವಾಗಿ ಅಭ್ಯರ್ಥಿಯ ಹೆಸರನ್ನು ಹೈಕಮಾಂಡ್‍ಗೆ ಕಳಿಸುತ್ತೇವೆ ಎಂದು ತಿಳಿಸಿದರು. ಇನ್ನು ತಾವು ಕೂಡಾ ಬೆಳಗಾವಿ ಚುನಾವಣೆಯ ಮುಂಚೂಣಿ ಯಲ್ಲಿ ಇದ್ದರೂ ಕೂಡಾ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದವಾಗುವದಾಗಿ ಹೇಳಿದರು.

ಸಭೆಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್‍ಸಿ ಶ್ರೀನಿವಾಸ್ ಮಾನೆ, ಮಾಜಿ ಶಾಸಕರಾದ ಅಶೊಕ ಪಟ್ಟಣ, ಫಿರೋಜ್ ಸೇಠ್, ವೀರಕುಮಾರ ಪಾಟೀಲ ಸೇರಿ ಹಲವು ಕೈ ಮುಖಂಡರು ಭಾಗಿಯಾಗಿದ್ದರು.

Related posts

ಬಾಗಲಕೋಟೆ: 69 ಜನ ಗುಣಮುಖ, 254 ಹೊಸ ಪ್ರಕರಣ ದೃಡ

Siddu Naduvinmani

ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ಪಿಡಿಓ : ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು

Siddu Naduvinmani

ಬೆಳಗಾವಿಯಲ್ಲಿ 5 ವರ್ಷದ ಇಬ್ಬರು ಮಕ್ಕಳು ಸೇರಿ 20 ಜನರಿಗೆ ಕೊರೊನಾ ಸೋಂಕು – ಓರ್ವ ಮಹಿಳೆ ಸಾವು

Hasiru Kranti

Leave a Comment