Hasirukranti
leadingnews ಬೆಳಗಾವಿ

ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ೩೦ ಲಕ್ಷ ಪರಿಹಾರ ನೀಡುವಂತೆ ಪತ್ರಕರ್ತರು ಆಗ್ರಹ

ಬೆಳಗಾವಿ, ನ.20 : ಪತ್ರಕರ್ತರಿಗೆ ವಿಮೆ ಹಾಗೂ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ೩೦ ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ಶುಕ್ರವಾರ ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ದೇಶದ್ಯಂತ ಕೊರೊನಾ ವೈರಸ್‌ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಸಂದರ್ಭದಲ್ಲಿ ವೈರಸ್ ಬಗ್ಗೆ ಜಾಗೃತಿ ಹಾಗೂ ಸಾರ್ವಜನಿಕ ಆರೋಗ್ಯದ ಕಾಪಾಡಿಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ದೃಶ್ಯ ಹಾಗೂ ಮುದ್ರಣ ಮಾಧ್ಯಮ ಪ್ರತಿನಿಧಿಗಳು ತಮ್ಮ ಜೀವದ ಹಂಗು ತೊರೆದು ಸಾಕಷ್ಟು ಶ್ರಮಿಸಿದ್ದಾರೆ. ಈ ಕಾರ್ಯದಲ್ಲಿ ತೊಡಗಿಕೊಂಡ ಕೆಲವು ಪತ್ರಕರ್ತರಿಗೆ ಕೊರೊನಾ ವೈರಸ್ ತಗುಲಿ ಮೃತಪಟ್ಟಿರುವ ಘಟನೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದಿವೆ. ಆದ್ದರಿಂದ ಕೋವಿಟ್-೧೯ ವೈರಸ್ ತಡೆಯುವಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಹಾಗೂ ಕುಟುಂಬಕ್ಕೆ ವಿಶೇಷ ಆರೋಗ್ಯ ವಿಮೆ ಹಾಗೂ ವೈರಸ್‌ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ₹ ೩೦ ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಅಲ್ಲದೇ ಈಗಾಗಲೇ ಕೊರೊನಾ ನಿಯಂತ್ರಿಸುವ ಕೋವ್ಯಾಕ್ಸಿನ ಲಸಿಕೆ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸರ್ಕಾರವು ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡುವ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ. ವಾರಿಯರ್ಸ್ ಜತೆಯಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೂ ಪ್ರಥಮ ಆಧ್ಯೆತೆ ಮೇರೆಗೆ ಕೋವ್ಯಾಕ್ಸಿನ ಲಸಿಕೆ ವಿತರಿಸಬೇಕೆಂದು ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪತ್ರಕರ್ತರನ್ನು ಕೊರೊನಾ ವಾರಿಯರ್ಸ್ ಎಂದು ಕರೆದಿವೆ. ಅಲ್ಲದೇ ವೈರಸ್ ನಿಯಂತ್ರಣಕ್ಕೆ ಮಾಧ್ಯಮಗಳ ಪಾತ್ರ ಪ್ರಾಮುಖ್ಯತೆ ವಹಿಸಿದ್ದು, ತಮ್ಮ ಬೇಡಿಕೆ ಬಗ್ಗೆ ಶೀಘ್ರವೇ ಸರ್ಕಾರಕ್ಕೆ ಪತ್ರಬರೆದು ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ಸುರೇಶ ನೇರ್ಲಿ, ಜಗದೀಶ ವಿರಕ್ತಮಠ, ಅರುಣ ಯಳ್ಳೂರಕರ,  ಸಹದೇವ ಮಾನೆ, ಮಹಾಂತೇಶ ಕುರಬೇಟ, ಅನಿಲ ಕಾಜಗಾರ, ಏಕನಾಥ ಅಗಸಿಮನಿ, ಅಡಿವೇಪ್ಪ ಪಾಟೀಲ, ಸುಬಾನಿ ಮುಲ್ಲಾ, ಸುನೀಲ ಗಾವಡೆ, ಗಂಗಾಧರ ಪಾಟೀಲ, ಸೋಮು ಮಾಳಕನವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Related posts

ಒಂದೇ ದಿನದಲ್ಲಿ ಶತಕ ಭಾರಿಸಿದ ರಾಜ್ಯದ ಹೊಸ ಸೋಂಕಿತರ ಸಂಖ್ಯೆ

Hasiru Kranti

ಉಪಕದನಕ್ಕೆ ಕೈಪಾಳ್ಯದ ತಯಾರಿ; ಶಾಸಕ ಸತೀಶ್ ಜಾರಕಿಹೊಳಿ‌ ಅವರದ್ದೇ ಉಸ್ತುವಾರಿ

Siddu Naduvinmani

ರಾಜ್ಯದಲ್ಲಿಂದು ಹೊಸ 8244 ಕೋವಿಡ್ ಪ್ರಕರಣಗಳ ಪತ್ತೆ : 119 ಸೋಂಕಿತರು ಬಲಿ

Siddu Naduvinmani

Leave a Comment