Hasirukranti
ಸಿನಿಮಾ

ತ್ರಿವಿಕ್ರಮನ ಮಮ್ಮಿ ಹಾಡಿಗೆ ‌ಭರ್ಜರಿ ಪ್ರಶಂಸೆ

 

ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ‌ ಚಿತ್ರ ತ್ರಿವಿಕ್ರಮ. ಪ್ರಸ್ತುತ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ.

ದೀಪಾವಳಿ ಹಬ್ಬಕ್ಕೆ ತ್ರಿವಿಕ್ರಮ ಚಿತ್ರದ ಮಮ್ಮಿ ಪ್ಲೀಸ್ ಮಮ್ಮಿ ಹಾಡು ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೂರು ದಿನಗಳಲ್ಲಿ 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈ ಹಾಡು ವೀಕ್ಚಣೆಯಾಗಿದೆ. ಮಗ‌ ತನ್ನ ಪ್ರೀತಿಯ ಬಗ್ಗೆ ತಾಯಿಯ ಬಳಿ ವಿನೂತನ ಶೈಲಿಯಲ್ಲಿ ಹೇಳಿಕೊಳ್ಳುವ ಈ ಹಾಡಿಗೆ ಅಪಾರ ಮೆಚ್ಚುಗೆ ದೊರಕಿದೆ.

ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗೌರಿ ಎಂಟರ್ ಟೈನರ್‌ ಲಾಂಛನದಲ್ಲಿ ಸೋಮಣ್ಣ ಅವರು‌ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಹನಾ‌ ಮೂರ್ತಿ‌‌ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರದೆ. ಸಂತೋಷ್ ರೈ ಪಾತಾಜೆ, ಗುರು ಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ.

ನಾಯಕಿಯಾಗಿ ಅಕಾಂಕ್ಷ ಶರ್ಮ ನಟಿಸುತ್ತಿದ್ದಾರೆ. ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ, ರೋಹಿತ್ ರಾಯ್, ಆದಿಲೋಕೇಶ್, ಶಿವಮಣಿ, ಅಕ್ಷರ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.

Related posts

ನೀನಾಸಂ ಸತೀಶ್ ಬರೆದ ಒಕ್ಕಣ್ಣನ ಮನಮಿಡಿಯುವ ಕಥೆ

Hasiru Kranti

ಪ್ರಾರಂಭ ಚಿತ್ರತಂಡದಿಂದ ನೂತನ ಚಿತ್ರ ಆರಂಭ…

Hasiru Kranti

ರಾಘವೇಂದ್ರ ರಾಜಕುಮಾರ್ ಅಭಿನಯದ ಆಡಿಸಿದಾತ ಚಿತ್ರದ ಟೀಸರ್ ಬಿಡುಗಡೆ

Siddu Naduvinmani

Leave a Comment