Hasirukranti
leadingnews ರಾಜಕೀಯ ರಾಷ್ಟ್ರೀಯ

4ನೇ ಬಾರಿ ಬಿಹಾರದ ಸಿಎಂ ಆದ ನಿತೀಶ್ ಕುಮಾರ್ ; ನಾಳೆ ಪ್ರಮಾಣವಚನ ಸ್ವೀಕಾರ

 

ಪಾಟ್ನಾ, ನ.15 : ಇಂದು ನಡೆದ ಎನ್​ಡಿಎ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲಾಯಿತು. ಇದರೊಂದಿಗೆ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿ ಆಗುತ್ತಿದ್ದಾರೆ. ನಾಳೆ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಲಿಸಲಿದ್ದಾರೆ.

ಎನ್​ಡಿಎ ಸಭೆ ಪ್ರಾರಂಭಕ್ಕೆ ಮುನ್ನ ನಡೆದ ಜೆಡಿಯು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್ ಅವರನ್ನ ನಾಯಕರನ್ನಾಗಿ ಆರಿಸಲಾಯಿತು. ಬಳಿಕ ಅವರ ಮನೆಯಲ್ಲೇ ಎನ್​ಡಿಎ ಮೈತ್ರಿಕೂಟದ ಸಭೆ ನಡೆದು ಒಮ್ಮತದಿಂದ ಅವರನ್ನ ಸಿಎಂ ಆಗಿ ಆಯ್ಕೆ ಮಾಡಲಾಯಿತು.

ಅಕ್ಟೋಬರ್ 28ರಿಂದ ನವೆಂಬರ್ 7ರವರೆಗೆ ಮೂರು ಹಂತದಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ನವೆಂಬರ್ 10ರಂದು ಪ್ರಕಟಗೊಂಡಿತು. 243 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 125 ಸ್ಥಾನಗಳನ್ನ ಗೆದ್ದು ಸರಳ ಬಹುಮತ ಪಡೆಯಿತು. ಆರ್​ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ 110 ಕ್ಷೇತ್ರಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಆದರೆ, ಎನ್​ಡಿಎನಲ್ಲಿ ದೊಡ್ಡಣ್ಣನಂತಿದ್ದು ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಯು ಪಕ್ಷ ಕೇವಲ 43 ಸ್ಥಾನ ಪಡೆದರೆ, ಬಿಜೆಪಿ 74 ಸ್ಥಾನಗಳನ್ನ ಜಯಿಸಿತು. ಚಿರಾಗ್ ಪಾಸ್ವಾನ್ ಅವರ ಎಲ್​ಜೆಪಿ ಪಕ್ಷ ಜೆಡಿಯು ವಿರುದ್ಧ ಸ್ಪರ್ಧೆ ಮಾಡಿದ ಹಿನ್ನೆಲೆಯಲ್ಲಿ ಆ ಪಕ್ಷಕ್ಕೆ ಹೆಚ್ಚು ಸ್ಥಾನ ದಕ್ಕಲಿಲ್ಲ ಎಂಬ ವಿಮರ್ಶೆಗಳು ನಡೆದಿವೆ. ಅದೇನೇ ಇದ್ದರೂ ನಿತೀಶ್ ಕುಮಾರ್ ಅವರೇ ಸಿಎಂ ಆಗುತ್ತಾರೆ ಎಂದು ಬಿಜೆಪಿಯ ಅನೇಕ ನಾಯಕರು ಅನೇಕ ಬಾರಿ ಹೇಳುತ್ತಲೇ ಬಂದಿದ್ದರು. ಅದೀಗ ನಿಜವಾಗಿದೆ.

ಇನ್ನು, ಈ ಹಿಂದೆ ನಿತೀಶ್ ಕುಮಾರ್ ಅವರಿಗೆ ಡಿಸಿಎಂ ಆಗಿ ಹೆಸರು ಮಾಡಿದ್ದ ಬಿಜೆಪಿಯ ಸುಶೀಲ್ ಮೋದಿ ಮತ್ತೆ ಅದೇ ಹುದ್ದೆಗೆ ಮರಳಿರುವುದು ಗಮನಾರ್ಹ.

Related posts

ಕೃಷಿ, ಭೂ ಸುಧಾರಣಾ ತಿದ್ದುಪಡಿ ಮಸೂದೆ ಜಾರಿಗೆ ಸುಗ್ರೀವಾಜ್ಞೆ ತರಲು ಸಂಪುಟ ಸಭೆ ನಿರ್ಧಾರ

Siddu Naduvinmani

ರಾಜ್ಯದಲ್ಲಿ ಇನ್ಮುಂದೆ ಪ್ರತಿ ಜಿಲ್ಲೆಗೆ ತುರ್ತು ಪಶು ಚಿಕಿತ್ಸಾ ವಾಹನ

Siddu Naduvinmani

ಅನುದಾನದ ಕೊರತೆ ಇಲ್ಲ, ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ನೀಡಲಾಗುವುದು : ಬಿಎಸ್‍ವೈ

Siddu Naduvinmani

Leave a Comment